28.6 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಸ.ಪ್ರ. ದರ್ಜೆ ಕಾಲೇಜಿನಲ್ಲಿ “ಉದ್ಯೋಗ ಹುಡುಕಬೇಡಿ – ಸೃಷ್ಟಿಸಿ” ಎಂಬ ವಿಷಯದ ಕುರಿತು ಕಾರ್ಯಾಗಾರ

ಬೆಳ್ತಂಗಡಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಯೋಗ ಹುಡುಕಬೇಡಿ – ಸೃಷ್ಟಿಸಿ ಎಂಬ ವಿಷಯದ ಮೇಲೆ ಒಂದು ದಿನದ ಕಾರ್ಯಗಾರವನ್ನು ನಡೆಸಲಾಯಿತು.

ಕಾರ್ಯಕ್ರಮವನ್ನು ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಸುಬ್ರಹ್ಮಣ್ಯ ಕೆ. ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಸ್ವದೇಶಿ ಜಾಗರಣ ಮಂಚ್ ಇದರ ದಕ್ಷಿಣ ಮಧ್ಯಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿಗಳಾದ ಜಗದೀಶ ಕೆ. ಇವರು ವಿದ್ಯಾರ್ಥಿಗಳು ಸರ್ಕಾರಿ ಕೆಲಸ ಎಂಬ ಜಪ ಮಾಡುವುದನ್ನು ಬಿಟ್ಟು ಸ್ವಯಂ ಉದ್ಯೋಗವನ್ನು ಮಾಡಲು ಅನೇಕ ಅವಕಾಶಗಳಿವೆ ಎಂದು ತಿಳಿಸಿದರು.

ದೇಶದ ಶೇಕಡಾ 34 ಉದ್ಯೋಗ ಸೃಷ್ಟಿಯಾಗಿರುವುದು ಗುಡಿ ಕೈಗಾರಿಕೆಗಳು ಸಣ್ಣ ಕೈಗಾರಿಕೆಗಳು ಮತ್ತು ಮಧ್ಯಮ ಕೈಗಾರಿಕೆಗಳಿಂದ ಆದುದರಿಂದ ನಾವು ಇನ್ನೊಬ್ಬರ ಕೈ ಕೆಳಗೆ ಗುಲಾಮರಂತೆ ಕೆಲಸ ಮಾಡುವ ಬದಲು ಉದ್ಯೋಗದಾತರಾಗಬೇಕು ಎಂದು ತಿಳಿಸಿದರು. ಇವರು ವಿದ್ಯಾರ್ಥಿಗಳಲ್ಲಿ ಕೌಶಲ್ಯವನ್ನು ನಿರ್ಮಾಣ ಮಾಡು ದೃಷ್ಟಿಯಿಂದ ಹಾಗೂ ಸ್ವಯಂ ಉದ್ಯೋಗವನ್ನು ಮಾಡಲು ಸರ್ಕಾರದಿಂದ ಸಿಗುವ ಬೇರೆ ಬೇರೆ ಯೋಜನೆಗಳ ಬಗ್ಗೆ ತಿಳಿಯಪಡಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಾಘವ ಎನ್. ಇವರು ವಹಿಸಿದರು. ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕರಾದ ಡಾ. ಕುಶಾಲಪ್ಪ ಕೆ, ವಾಣಿಜ್ಯ ವಿಭಾಗದ ಪ್ರಾಧ್ಯಾಪಕರವಾದ ಪ್ರೊ. ಸುರೇಶ್ ವಿ ಮತ್ತು ಪ್ರೊ. ನವೀನ ಉಪಸ್ಥಿತರಿದ್ದರು. ಯುವ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮಾಧಿಕಾರಿ, ರೊವರ್ ಸ್ಕೌಟ್ ಲೀಡರ್ ಡಾ. ರವಿ ಎಂ.ಎನ್. ಸ್ವಾಗತಿಸಿ, ರೇಂಜರ್ ಲೀಡರ್ ಪ್ರೊ. ರಾಜೇಶ್ವರಿ ಹೆಚ್.ಎಸ್. ವಾದಿಸಿದರು.

Related posts

ಚಾರ್ಮಾಡಿ: ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದ ಟಿಪ್ಪರ್ ಲಾರಿ

Suddi Udaya

ಶಿಶಿಲ ಹಾಲು ಉತ್ಪಾದಕರ ಸಹಕಾರಿ ಸಂಘದ ಸಾಮಾನ್ಯ ಸಭೆ: ಸದಸ್ಯರಿಗೆ ಶೇ.10 ಡಿವಿಡೆಂಟ್ ಘೋಷಣೆ

Suddi Udaya

ಗೇರುಕಟ್ಟೆ: ಶ್ರೀ ಪಾರ್ಶ್ವನಾಥ ಫ್ಯೂಯಲ್ ಶುಭಾರಂಭ

Suddi Udaya

ತಾಲೂಕು ಮಟ್ಟದ ಕರಾಟೆ ಸ್ಪರ್ಧೆ: ಶ್ರೀ ಧ.ಮಂ. ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗೆ ದ್ವಿತೀಯ ಸ್ಥಾನ

Suddi Udaya

ರಾಜ ಕೇಸರಿ ಸಂಘಟನೆಯ ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ ಇವರ ನೇತೃತ್ವದಲ್ಲಿ 548ನೇಯ ಯೋಜನೆ ಅಂಗವಾಗಿ ಬೃಹತ್ ರಕ್ತದಾನ ಶಿಬಿರ:ಶಾಲಾ ಮಕ್ಕಳಿಗೆ ಊಟದ ಬಟ್ಟಲು, ಲೋಟ ಮತ್ತು ತಟ್ಟೆ ಹಸ್ತಾಂತರ ಕಾರ್ಯಕ್ರಮ ನಡೆಯಿತು

Suddi Udaya

ಪುಂಜಾಲಕಟ್ಟೆ- ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅಭಿವೃದ್ಧಿ ಹೆಸರಲ್ಲಿ ದೂಳು ತಿನ್ನಿಸಬೇಡಿ, ರಸ್ತೆ ಅಗಲೀಕರಣ ಜನಸ್ನೇಹಿಯಾಗಿರಲಿ, ರಸ್ತೆ ಬೇಕು ದೂಳು ಬೇಡ ನಾಮಫಲಕ ಅಳವಡಿಕೆ:

Suddi Udaya
error: Content is protected !!