26.5 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಹೊಸಂಗಡಿ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಎರಡನೇ ವರ್ಷದ ಶ್ರೀ ಗಣೇಶೋತ್ಸವ

ಬೆಳ್ತಂಗಡಿ: ಹೊಸಂಗಡಿ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಎರಡನೇ ವರ್ಷದ ಶ್ರೀ ಗಣೇಶೋತ್ಸವವು ಬಹಳ ವಿಜೃಂಭಣೆಯಿಂದ ನೆರವೇರಿತು.

ಶಾಲಾ ಪ್ರಾಂಶುಪಾಲರಾದ ಶ್ರೀಧರ್ ಶೆಟ್ಟಿ ಗಣೇಶೋತ್ಸವನ್ನುದ್ದೇಶಿಸಿ ವಸತಿ ಶಾಲೆಯ ಮಕ್ಕಳು ಮತ್ತು ಶಾಲೆಯ ಸಿಬ್ಬಂದಿ ರಾಧಾಕೃಷ್ಣ ಇವರು ಈ ಬಾರಿ ಪರಿಸರ ಸ್ನೇಹಿ ತರಕಾರಿ ಗಣೇಶನ ಸುಂದರವಾದ ಮೂರ್ತಿಯನ್ನು ನಿರ್ಮಿಸಿದ್ದಾರೆ. ವಸತಿ ಶಾಲೆಯಲ್ಲಿ ಹೊರ ಜಿಲ್ಲೆಯ ಮಕ್ಕಳಿಗೆ ಕೂಡ ಹಬ್ಬದ ಮಹತ್ವ ತಿಳಿಯಲಿ ಮತ್ತು ಎಲ್ಲಾ ಮಕ್ಕಳು ಕೂಡ ಸಂತೋಷದಿಂದ ಭಾಗವಹಿಸಿ ಸಂಭ್ರಮಿಸಲಿ ಎಂಬ ದೃಷ್ಟಿಯಿಂದ ಈ ಗಣೇಶೋತ್ಸವನ್ನು ಆಚರಿಸುತ್ತಿದ್ದೇವೆ ಎಂದು ಹೇಳಿದರು .

ಗಣೇಶೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಂದ ಕುಣಿತ ಭಜನೆ, ಭಕ್ತಿ ಪ್ರಧಾನ ನೃತ್ಯ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಸ್ಥಳೀಯ ಶಾಲೆಯ ಹಿತೈಷಿಗಳಾದ ಸೀತಾರಾಮ ರೈ ಆಗಮಿಸಿ ಮಕ್ಕಳಿಗೆ ಶುಭ ಹಾರೈಸಿದರು. ಪ್ರತೀಶ್ ಪೆರಿಂಜೆ ಎಲ್ಲರಿಗೂ ಸಿಹಿ ತಿಂಡಿ ನೀಡಿ ಸಹಕರಿಸಿದರು. ರಾಜ್ಯ ಮಟ್ಟದ ಕಬಡ್ಡಿ ತರಬೇತುದಾರ ಜಯಂತ್ ಶೆಟ್ಟಿ ಹಕ್ಕೇರಿ, ಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿ, ಶಾಲೆಯ ಅಡುಗೆ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಗಣೇಶನ ಮೂರ್ತಿಯ ಜಲಸ್ತಂಭನದೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.

Related posts

ಕುಕ್ಕೇಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ

Suddi Udaya

ಸಿಇಟಿ ಇಂಜಿನಿಯರಿಂಗ್ ಪರೀಕ್ಷಾ ಫಲಿತಾಂಶ : ಧರ್ಮಸ್ಥಳದ ಸೃಜನ್ ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್

Suddi Udaya

ನಾವೂರು ಸರ್ವೋದಯ ಟ್ರಸ್ಟ್ ನೇತೃತ್ವದಲ್ಲಿ ಬೃಹತ್ ರಕ್ತದಾನ ಶಿಬಿರ

Suddi Udaya

ಹಲವಾರು ಮೃತದೇಹ ಹೂತುಹಾಕಿದ ಪ್ರಕರಣ: ಬಂಗ್ಲೆಗುಡ್ಡದಲ್ಲಿ ಮತ್ತೆ ಕಳೇಬರಕ್ಕಾಗಿ ಕಾರ್ಯಾಚರಣೆ ಆರಂಭ

Suddi Udaya

ಮಾಜಿ ಶಾಸಕ ವಸಂತ ಬಂಗೇರರ ನಿಧನಕ್ಕೆ ಬೆಳ್ತಂಗಡಿ ವಿ.ಹಿಂ.ಪ. ಬಜರಂಗದಳ ಪ್ರಖಂಡರಿಂದ ಸಂತಾಪ

Suddi Udaya

ಜ. 20 ರಂದು ನಡೆಯಲಿರುವ ಗಮಕ ಸಮ್ಮೇಳನ ಶಾಸಕರಿಗೆ ಆಹ್ವಾನ

Suddi Udaya
error: Content is protected !!