ಬೆಳ್ತಂಗಡಿ: ಕ್ಯಾನ್ಸರ್ ಪೀಡಿತರಿಗೆ ಅನುಕೂಲವಾಗುವಂತೆ ಬೆಳ್ತಂಗಡಿಯ ಆಂಬುಲೆನ್ಸ್ ಚಾಲಕ, ಅಪದ್ಭಾಂಧವ ಜಲೀಲ್ (ಬಾಬಾ) ಅವರು ತನ್ನ 11 ಇಂಚು ಉದ್ದಕ್ಕೆ ಬೆಳೆಸಿಕೊಂಡಿದ್ದ ತಲೆಗೂದಲನ್ಜು ದಾನ ಮಾಡಿದ್ದಾರೆ.
ಬೆಳ್ತಂಗಡಿ ನಗರದ ಕುತ್ಯಾರ್ ದೇವಸ್ಥಾನದ ಬಳಿಯ ಬಿ.ಇಬ್ರಾಹಿಂ ಮತ್ತು ಅತಿಕಾ ದಂಪತಿಯ ಪುತ್ರರಾಗಿರುವ ಆಪದ್ಭಾಂಧವ ಬಾಬಾ ಜಲೀಲ್(40ವ) ಅವರು ತನ್ನ ಕೂದಲನ್ನು 1 ವರ್ಷ 7 ತಿಂಗಳು ಕತ್ತರಿಸದೆ ಉಳಿಸಿ ಇದೀಗ ಕ್ಯಾನ್ಸರ್ ಪೀಡಿತರಿಗಾಗಿ ದಾನ ಮಾಡಿದ್ದಾರೆ.
ಬೆಳ್ತಂಗಡಿ ಸಂತೆಕಟ್ಟೆಯಲ್ಲಿರುವ ಶೃಂಗಾರ್ ಮಾಸ್ಟರ್ ಕಟ್ಸ್ ನಲ್ಲಿ ಸೆ.9 ರಂದು ಅವರು ಕೇಶಮುಂಡನ ಮಾಡಿಕೊಂಡರು.
ಹಿರಿಯ ಆಂಬುಲೆನ್ಸ್ ಚಾಲಕರಾಗಿರುವ ಜಲೀಲ್ ಅವರು ಎಲ್ಲೇ ಅಪಘಾತ ಅಥವಾ ಅಪರಾಧ ಚಟುವಟಿಕೆಗಳು ನಡೆದಾಗ ಪೊಲೀಸರಿಗೆ ಸಹಕಾರಿಯಾಗಿ ತಕ್ಷಣ ಸ್ಥಳಕ್ಕೆ ಧಾವಿಸಿ ತುರ್ತು ಸ್ಪಂದನ ನೀಡುವ ಕಾರ್ಯ ಮಾಡುತ್ತಿದ್ದಾರೆ. ಅನೇಕ ಮಂದಿಯ ಪ್ರಾಣ ರಕ್ಷಣೆ ಮಾಡಿರುವ ಅವರು ಮಂಗಳೂರು ಏರ್ ಇಂಡಿಯಾ ವಿಮಾನ ದುರಂತ ಸಂದರ್ಭದ ಕಾರ್ಯಾಚರ
ಣೆಯಲ್ಲೂ ಭಾಗಿಯಾಗಿದ್ದರು.