ಆರಂಬೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂಡೂರಿ ಅಂಗನವಾಡಿ ಕೇಂದ್ರದಲ್ಲಿ ಪೌಷ್ಠಿಕ ಆಹಾರ ಶಿಬಿರವು ಸೆ.9ರಂದು ನಡೆಯಿತು.
ಅಪೌಷ್ಠಿಕತೆಯಿಂದ ಮಕ್ಕಳು, ಬಾಣಂತಿಯರು ಮತ್ತು ಮಹಿಳೆಯರಿಗೆ, ಬರಬಹುದಾದ ಸಮಸ್ಯೆಗಳು ಮತ್ತು ಪರಿಹಾರದ ಬಗ್ಗೆ ವೇಣೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕ್ಷಾ ಅಧಿಕಾರಿ ಶ್ರೀಮತಿ ಇಂದಿರಾ ಮಾಹಿತಿ ನೀಡಿದರು. ವಿವಿಧ ಕಾಯಿಲೆಗಳನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮಗಳ ಬಗ್ಗೆ ವೇಣೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಸುಗಮಕಾರರಾದ ಶ್ರೀಮತಿ ಲಕ್ಷ್ಮಿ ನಿಟ್ಟಡೆ ಅರಿವು ನೀಡಿದರು. ಮಕ್ಕಳ ಪೋಷಕರು ತಯಾರಿಸಿದ ವಿವಿಧ ಬಗೆಯ ಪೌಷ್ಠಿಕ ಖಾದ್ಯಗಳ ಪ್ರದರ್ಶನ ನೀಡಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಹೊಸಂಗಡಿ ವಲಯ ಶೌರ್ಯ ವಿಪತ್ತು ಘಟಕದ ಸದಸ್ಯರಿಂದ ಶಾಲಾ ಪೌಷ್ಠಿಕ ತೋಟ ನಿರ್ಮಾಣ ಮತ್ತು ಸ್ವಚ್ಚತಾ ಕಾರ್ಯಕ್ರಮ ನಡೆಯಿತು. ಹಾಗೂ 5ನೇ ವರ್ಷದ ಶ್ರೀ ಕೃಷ್ಣ ವೇಷ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ನೀಡಲಾಯಿತು.
ಆರಂಬೋಡಿ ಗ್ರಾ.ಪಂ. ಅಧ್ಯಕ್ಷರ ಪ್ರವೀಣ್ ಚಂದ್ರ ಜೈನ್ ಜಂತೋಡಿಗುತ್ತು ಶುಭ ಹಾರೈಸಿದರು. ಉಪಾಧ್ಯಕ್ಷೆ ಶ್ರೀಮತಿ ತೇಜಸ್ವಿನಿ, ಶ್ರೀ ಕ್ಷೇ.ಧ.ಗ್ರಾ. ಯೋಜನೆ ಗುಂಡೂರಿ ಸೇವಾಪ್ರತಿನಿಧಿ ಹರೀಶ್ ಬಾಡಾರು, ಬಾಲವಿಕಾಸ ಸಮಿತಿ ಅಧ್ಯಕ್ಷೆ ಶ್ರೀಮತಿ ದಕ್ಷವೇಣಿ ಉಪಸ್ಥಿತರಿದ್ದರು.
ಪ್ರವೀಣ್ ಆಚಾರ್ಯ ನೇರಳ್ಪಲ್ಕೆ ನಿರೂಪಿಸಿ ಸ್ವಾಗತಿಸಿದರು.ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ, ಕುಸುಮಾ ವಂದಿಸಿದರು.