April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿವರದಿ

ಕಲ್ಮಂಜ: 18ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮ

ಕಲ್ಮಂಜ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮತ್ತು ವಿಶ್ವ ಹಿಂದೂ ಪರಿಷದ್, ಬಜರಂಗದಳ, ಕಲ್ಮಂಜ ಹಾಗೂ ಊರವರ ಸಂಯುಕ್ತ ಆಶ್ರಯದಲ್ಲಿ 18ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮವು ಸೆ.೭ರಂದು ಸ.ಹಿ.ಪ್ರಾಥಮಿಕ ಶಾಲೆ ಸಿದ್ಧಬೈಲುನಲ್ಲಿ ನಡೆಯಿತು.

ಸಂಜೆ ಶ್ರೀ ಸದಾಶೀವೇಶ್ವರ ಭಜನಾ ತಂಡ ಸತ್ಯನಪಲ್ಕೆ ಮಕ್ಕಳ ಕುಣಿತ ಭಜನಾ ಕಾರ್ಯಕ್ರಮ ನಡೆಯಿತು.

ಬೆಳಗ್ಗೆ ಸಮಿತಿ ಸದಸ್ಯರ ಸಮ್ಮುಖದಲ್ಲಿ ಗಣಹೋಮ ನಡೆಯಿತು ನಂತರ ಅಟೋಟ ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮವು ಮೋಹಿನಿ ಕೆ. ಅಖPಈ ಹಾಗೂ ರುಕ್ಮಯ್ಯ ಗೌಡ ಕರಿಯನೆಲ ನಿವೃತ್ತ ಯೋಧರು ಇವರ ಸಮ್ಮುಖದಲ್ಲಿ ನಡೆಯಿತು.

ಧಾರ್ಮಿಕ ಸಭಾ ಕಾರ್ಯಕ್ರಮದ ಅದ್ಯಕ್ಷತೆಯನ್ನು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಲೋಹಿತ್ ಎಂ ವಹಿಸಿದ್ದರು.
ಧಾರ್ಮಿಕ ಉಪನ್ಯಾಸಕರಾಗಿ ಡಾ|| ರವಿ ಮಂಡ್ಯ. ಸಹಪ್ರಾಧ್ಯಾಪಕರು ಮತ್ತು ಸಂಯೋಜಕರು ಸ್ನಾತಕೋತ್ತರ ವಿಭಾಗ, ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೆಳ್ತಂಗಡಿ ಆಗಮಿಸಿದ್ದರು.

ಮುಖ್ಯ ಅತಿಥಿಗಳಾಗಿ ಸಂತೋಷ್ ಕುಮಾರ್, ಅತ್ತಾಜೆ ಸಂಯೋಜಕರು ಬಜರಂಗದಳ ಬೆಳ್ತಂಗಡಿ ಪ್ರಖಂಡ, ಮುರಳೀಧರ ಗೌಡ ಬಜರಂಗದಳ ಸಹ ಸಂಚಾಲಕರು ಕಲ್ಮಂಜ, ದಿನೇಶ್ ಗೌಡ ಮೂಡಾಯಿಬೆಟ್ಟು ಅಧ್ಯಕ್ಷರು Sಆಒಅ ಸಿದ್ಧಬೈಲು ಪರಾರಿ ಶಾಲೆ, ಕಲ್ಮಂಜ ಆಗಮಿಸಿದ್ದರು.

ಸಭಾ ಕಾರ್ಯಕ್ರಮದಲ್ಲಿ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿಗಳಾದ ತನುಶ್ರೀ ಕಲ್ಮಂಜ, ಅದಿತಿ ಚಿಪ್ಲೊಣ್ಕರ್ ಹಾಗೂ ಹಂಸಿನಿ ಭಿಡೆ ಅವರನ್ನು ಸನ್ಮಾನಿಸಲಾಯಿತು. ಅನಿಲ್ ಮದ್ಮಲ್ಕಟ್ಟೆ ಸ್ವಾಗತಿಸಿದರು. ಸಾಂತಪ್ಪ ಎಂ ಮದ್ಮಲ್ಕಟ್ಟೆ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.

Related posts

ಚಾತುರ್ಮಾಸ್ಯ ವ್ರತದಲ್ಲಿರುವ ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜೀಯವರನ್ನುಭೇಟಿಯಾಗಿ ಆಶೀರ್ವಾದ ಪಡೆದ ಸಂಸದ ವಿಶ್ವೇಶ್ವರ ಹೆಗ್ಡೆ ಕಾಗೇರಿ, ಕುಮುಟ ಶಾಸಕ ದಿನಕರ ಶೆಟ್ಟಿ

Suddi Udaya

ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿಗೆ ಕುಕ್ಕಳದ ಶ್ರೇಯಸ್ ಪೂಜಾರಿ ಆಯ್ಕೆ

Suddi Udaya

ಕಥೊಲಿಕ್ ಕ್ರೆಡಿಟ್ ಸಹಕಾರಿ ಸಂಘದ ಬೆಳ್ಳಿ ಹಬ್ಬ ಸಮಾರೋಪ ಸಮಾರಂಭ

Suddi Udaya

ಲಾಯಿಲ: ಸ.ಹಿ.ಪ್ರಾ. ಶಾಲಾ ಮುಖ್ಯ ಶಿಕ್ಷಕಿ ರಾಜೇಶ್ವರಿ ಬಿ.ಎಸ್. ಸೇವಾ ನಿವೃತ್ತಿ

Suddi Udaya

ಕಲ್ಮಂಜ ಪ್ರೌಢಶಾಲೆಯಲ್ಲಿ ಪ್ರೇರಣಾ ತರಗತಿ

Suddi Udaya

ವಾಲಿಬಾಲ್ ಪಂದ್ಯಾಟ: ವೇಣೂರು ವಿದ್ಯೋದಯ ಆಂಗ್ಲ ಮಾಧ್ಯಮ ಶಾಲಾ ಬಾಲಕರ ತಂಡ ಪ್ರಥಮ ಸ್ಥಾನ

Suddi Udaya
error: Content is protected !!