26.3 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

ಕೊಕ್ಕಡ : ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.12ರಂದು ಸಂಘದ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪಿ. ರವರು ಸಂಘವು 31.40 ಕೋಟಿ ಠೇವಣಿ ಹೊಂದಿದ್ದು, ರೂ. 38.30 ಕೋಟಿ ಸಾಲ ಹೊರಬಾಕಿ ಇದ್ದು ವರ್ಷಾಂತ್ಯಕ್ಕೆ ಶೇ. 98%ರಷ್ಟು ವಸೂಲಾತಿ ಆಗಿರುತ್ತದೆ. ವಾರ್ಷಿಕ ರೂ. 214.90 ಕೋಟಿ ವ್ಯವಹಾರ ನಡೆಸಿ ಗರಿಷ್ಠ ರೂ. 1,16,15,869.66 ಲಾಭ ಗಳಿಸಿ ಆಡಿಟ್ ವರ್ಗಿಕರಣದಲ್ಲಿ ‘ಎ’ ತರಗತಿ ಪಡೆದುಕೊಂಡಿದ್ದು, ಸದಸ್ಯರಿಗೆ ಶೇ. 14 ಡಿವಿಡೆಂಟ್ ಘೋಷಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ, ಡಿ ಸಿ ಸಿ ಬ್ಯಾಂಕ್ ನಿರ್ದೇಶಕರಾದ ಕುಶಾಲಪ್ಪ ಗೌಡ ಪಿ. ಯವರಿಗೆ ಸನ್ಮಾನ ಕಾರ್ಯಕ್ರಮವು ನಡೆಯಿತು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಈಶ್ವರ ಭಟ್, ನಿರ್ದೇಶಕರಾದ ಜಾರಪ್ಪ ಗೌಡ ಎಸ್., ಮಹಾಬಲ ಶೆಟ್ಟಿ, ಪದ್ಮನಾಭ ಗೌಡ, ವಿಶ್ವನಾಥ ಕೆ., ವಿಠಲ ಭಂಡಾಟಿ , ಶ್ರೀಮತಿ ಪ್ರೇಮಾವತಿ, ಶ್ರೀಮತಿ ವೇದಾವತಿ , ವಿಶ್ವನಾಥ ಎಂ.ಕೆ, ಕೇಶವ ಕೆ., ಮೋನಪ್ಪ , ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರತಿನಿಧಿ ಸಿರಾಜುದ್ದೀನ್, ಮುಖ್ಯಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಕೆ ಉಪಸ್ಥಿತರಿದ್ದರು.

ಸಹನಾ, ಚೈತನ್ಯ ಪ್ರಾರ್ಥಿಸಿದರು. ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪಿ ಸ್ವಾಗತಿಸಿದರು. ಗುಮಾಸ್ತ ಸುಂದರ ಗೌಡ ಕೆ ಕಾರ್ಯಕ್ರಮ ನಿರೂಪಿಸಿದರು.

Related posts

ಉಜಿರೆ: ಎಸ್ ಡಿ ಯಂ ಪಾಲಿಟೆಕ್ನಿಕ್ – ರಾಷ್ಟೀಯ ಯುವ ದಿನದ ಅಂಗವಾಗಿ ಉಪನ್ಯಾಸ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ವಲಯದ ಬೆಳ್ತಂಗಡಿ ಪ್ರಗತಿ-ಬಂದು ಸ್ವ-ಸಹಾಯ ಸಂಘಗಳ ಒಕ್ಕೂಟದ ತ್ರೈಮಾಸಿಕ ಸಭೆ

Suddi Udaya

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಣಾಳಿಕೆ ಬಿಡುಗಡೆ: ಪ್ರಣಾಳಿಕೆಯಲ್ಲಿರುವ ಅಂಶಗಳೇನು?

Suddi Udaya

ಕಡಿರುದ್ಯಾವರದಲ್ಲಿ ಒಂಟಿ ಸಲಗ ಹಾವಳಿ

Suddi Udaya

ಭತ್ತದ ಬೆಳೆ ಸ್ಪರ್ಧೆಗೆ ರೈತರಿಂದ ಅರ್ಜಿ ಆಹ್ವಾನ

Suddi Udaya

ಕನ್ಯಾಡಿ : ಹಿಂದೂ ಸಂಘಟಕರಿಂದ ಹನುಮಾನ್ ಚಾಲೀಸಾ ಪಠಣ

Suddi Udaya
error: Content is protected !!