24.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರತಿಭಟನೆಪ್ರಮುಖ ಸುದ್ದಿ

ಮಂದಗತಿಯಿಂದ ಸಾಗುತ್ತಿರುವ ಪುಂಜಾಲಕಟ್ಟೆ – ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ: ಕಾಮಗಾರಿಯ ವಿರುದ್ಧ ಬೆಳ್ತಂಗಡಿಯಲ್ಲಿ ಹೆದ್ದಾರಿ ತಡೆದು ಎಸ್.ಡಿ.ಪಿ.ಐ ಪ್ರತಿಭಟನೆ

ಬೆಳ್ತಂಗಡಿ : ಮಂದಗತಿಯಿಂದ ಸಾಗುತ್ತಿರುವ ಪುಂಜಾಲಕಟ್ಟೆ – ಚಾರ್ಮಾಡಿ (NH-73) ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯ ವಿರುದ್ಧ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವತಿಯಿಂದ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ ನೇತೃತ್ವದಲ್ಲಿ ಸೆ.12 ರಂದು ಬೆಳ್ತಂಗಡಿಯ ಮೂರುಮಾರ್ಗದ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು.

ಕ್ಷೇತ್ರ ಸಮಿತಿ ಸದಸ್ಯರಾದ ನವಾಝ್ ಕಟ್ಟೆ ಮಾತನಾಡಿ, ಪುಂಜಾಲಕಟ್ಟೆ – ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯ ಆರಂಭಗೊಂಡು ವರ್ಷಗಳೆ ಕಳೆದರು ಇನ್ನು ಕಾಮಗಾರಿ ಪೂರ್ಣಗೊಳ್ಳದೆ ದಿನ ನಿತ್ಯ ಅಫಘಾತಗಳು ಸಂಭವಿಸುತ್ತಿವೆ. ವಾಹನ ಚಾಲಕರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ. ಚಿಕ್ಕಮಗಳೂರು ಮತ್ತು ದ. ಕ ಜಿಲ್ಲೆಯ ಸಂಪರ್ಕ ರಸ್ತೆಯಾಗಿರುದರಿಂದ ನಿತ್ಯ ಸಾವಿರಾರು ವಾಹನಗಳು ಮೂಲಕ ಸಂಚರಿಸುತ್ತವೆ. ಹದಗೆಟ್ಟ ರಸ್ತೆಯಿಂದ ರಾಜ್ಯ ಸಾರಿಗೆ ಬಸ್‌ಗಳನ್ನು ಕಡಿಮೆಗೊಳಿಸಲಾಗಿದೆ. ವ್ಯಾಪಾರ ವಹಿವಾಟಿಗಾಗಿ ತೊಂದರೆಯಾಗಿದೆ. ಉಭಯ ಜಿಲ್ಲೆಗಳ ಸಂಪರ್ಕವೇ ಕಡಿತಗೊಳ್ಳುವ ಆತಂಕ ಇದೆ. ತಕ್ಷಣ ರಸ್ತೆ ನಿರ್ಮಾಣದ ಕಾಮಗಾರಿ ಪೂರ್ಣಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.


ಪ್ರತಿಭಟನೆಯಲ್ಲಿ ಎಸ್.ಡಿ.ಪಿ.ಐ ಪಕ್ಷದ ಬೆಳ್ತಂಗಡಿ ಮುಖಂಡರು, ಕಾರ್ಯಕರ್ತರು, ನಾಗರೀಕರು ಪಾಲ್ಗೊಂಡಿದ್ದರು.

Related posts

ಉಜಿರೆ ಟಿಬಿ. ಕ್ರಾಸ್ ಬಳಿ ಕಾರು ಪಲ್ಟಿ: ಚಾಲಕ ಪ್ರಾಣಪಾಯದಿಂದ ಪಾರು

Suddi Udaya

ವಾಣಿ ಕಾಲೇಜಿನಲ್ಲಿ ಅಕ್ಷರ ವಾಣಿ ಬಿತ್ತಿಪತ್ರಿಕೆ ಅನಾವರಣ

Suddi Udaya

ಮೇ 26: ವಿದ್ಯುತ್ ನಿಲುಗಡೆ

Suddi Udaya

ಫೆ.2: ಸೌತಡ್ಕದಲ್ಲಿ 108 ಕಾಯಿ ಗಣಹೋಮ ಹಾಗೂ ಮೂಡಪ್ಪ ಸೇವೆ

Suddi Udaya

ಬೆಳಾಲಿನಲ್ಲಿ, ಹದಿನೆಂಟು ದಿನಗಳ ಭಗವದ್ಗೀತೆ ತರಗತಿಯ ಸಮಾರೋಪ

Suddi Udaya

ಓಡೀಲು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya
error: Content is protected !!