25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಗಣೇಶೋತ್ಸವದ ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ನಗದು ಬಹುಮಾನದಲ್ಲಿ ಬಳಂಜ ಶಾಲೆಯ ಶಾಲಾ ಸಭಾಂಗಣದ ಶಾರದಾ ಕಲಾಮಂದಿರಕ್ಕೆ ಎರಡು ಫೋಕಸ್ ಲೈಟುಗಳ ಕೊಡುಗೆ ನೀಡಿದ ವಿದ್ಯಾರ್ಥಿಗಳು

ಬಳಂಜ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ 37ನೇ ವರ್ಷದ ಗಣೇಶೋತ್ಸವದ ಕಾರ್ಯಕ್ರಮದಲ್ಲಿ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಬಳಂಜ ಶಾಲಾ ಮಕ್ಕಳು 8 ರಿಂದ 10ನೇ ತರಗತಿ ಪ್ರಥಮ ಸ್ಥಾನ, 5 ರಿಂದ 7ನೇ ತರಗತಿ ದ್ವಿತೀಯ ಸ್ಥಾನ ಹಾಗೂ 1 ರಿಂದ ನಾಲ್ಕನೇ ತರಗತಿ ದ್ವಿತೀಯ ಸ್ಥಾನ ಪಡೆದು ವಿಜೇತರಾಗಿದ್ದಾರೆ.

ವಿಜೇತರಾದ ಮಕ್ಕಳು, ಪೋಷಕರು ಹಾಗೂ ತರಬೇತಿ ನೀಡಿದ ಶಾಲಾ ಶಿಕ್ಷಕಿ ಜೀವಿತಾ, ಪ್ರತೀಕ್ಷಾರವರು ತಂಡಗಳಿಗೆ ಬಂದ ನಗದು ಬಹುಮಾನದಲ್ಲಿ ಶಾಲಾ ಸಭಾಂಗಣದ ಶಾರದಾ ಕಲಾಮಂದಿರಕ್ಕೆ ಎರಡು ಫೋಕಸ್ ಲೈಟುಗಳನ್ನು ಸೆಪ್ಟೆಂಬರ್ 13 ರಂದು ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ರಂಗಸ್ವಾಮಿ.ಸಿ.ಆರ್ ರವರಿಗೆ ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು.

Related posts

ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಯಲ್ಲಿ ಸಮೃದ್ದ್ ನಿಟ್ಟಡೆ ತೇರ್ಗಡೆ

Suddi Udaya

ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀ ಶಾರದೋತ್ಸವದ ಬೆಳ್ಳಿಹಬ್ಬ ಮಹೋತ್ಸವ:ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಕುತ್ಲೂರು ಗ್ರಾಮಕ್ಕೆ ಅತ್ಯುತ್ತಮ ಪ್ರವಾಸೋದ್ಯಮ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

Suddi Udaya

ಉಜಿರೆ ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್ ಮತ್ತು ರೆಡಿಮೇಡ್ಸ್‌ನಲ್ಲಿ ಸ್ಪೆಷಲ್ ಆಫರ್: ಪ್ರತಿ ಖರೀದಿಯ ಮೇಲೆ ಶೆ.50 ರಷ್ಟು ಡಿಸ್ಕೌಂಟ್

Suddi Udaya

ಕೊಕ್ಕಡ: ಪಲಸ್ತಡ್ಕ ರಕ್ಷಿತಾರಣ್ಯದಿಂದ ಮರ ಕಳವು ಭೇದಿಸಿದ ಅರಣ್ಯ ಇಲಾಖೆ: ಬಂಧಿಸಲಾಗಿದ್ದ ಆರೋಪಿ ಪ್ರಕಾಶ್ ಜಾಮೀನು ಮೇಲೆ ಬಿಡುಗಡೆ

Suddi Udaya

ವೇಣೂರು ಭಗವಾನ್ ಶ್ರೀ ಬಾಹುಬಲಿಗೆ ಮಹಾ ಮಸ್ತಕಾಭಿಷೇಕ: ಮೂಡಬಿದ್ರೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹಾಗೂ ಅಳದಂಗಡಿ ಅರಸರ ಉಪಸ್ಥಿತಿಯಲ್ಲಿ ಚಪ್ಪರ ಮುಹೂರ್ತ

Suddi Udaya
error: Content is protected !!