ಮುಂಡಾಜೆ:ವರದಿ ವರ್ಷದಲ್ಲಿ ಸಂಘವು 623 ಕೋಟಿ ರೂ.ಗಿಂತ ಅಧಿಕ ವ್ಯವಹಾರ ನಡೆಸಿದ್ದು 2 ಕೋಟಿ ರೂ.ಗಿಂತ ಅಧಿಕ ಲಾಭಗಳಿಸಿದೆ. ಸದಸ್ಯರಿಗೆ 15 ಶೇ.ದಂತೆ ಡಿವಿಡೆಂಟ್ ನೀಡಲು ನಿರ್ಣಯಿಸಲಾಗಿದೆ” ಎಂದು ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನೂಜಿ ಜನಾರ್ದನ ಗೌಡ ಹೇಳಿದರು.
ಮುಂಡಾಜೆಯ ಸನ್ಯಾಸಿಕಟ್ಟೆ ಶ್ರೀ ಪರಶುರಾಮ ದೇವಸ್ಥಾನದ ಭಾರ್ಗವ ಸಭಾಭವನದಲ್ಲಿ ಶನಿವಾರ ಜರಗಿದ ಸಂಘದ ಮಹಾಸಭೆಯಲ್ಲಿ ಮಾತನಾಡಿದ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ವರದಿ ವರ್ಷದಲ್ಲಿ 6,023 ಎ ತರಗತಿ ಸದಸ್ಯರು, 8,321 ಸಿ ಮತ್ತು ಡಿ ವರ್ಗದ ಸದಸ್ಯರಿದ್ದು 7.21ಕೋಟಿ ರೂ. ಪಾಲು ಬಂಡವಾಳ ಹೊಂದಿದೆ. 72 ಕೋಟಿ ರೂ.ಗಿಂತ ಅಧಿಕ ಠೇವಣಿ ಸಂಗ್ರಹವಿದ್ದು 100 ಕೋಟಿ ರೂ.ಗಿಂತ ಅಧಿಕರು ಸಾಲವನ್ನು ಸದಸ್ಯರಿಗೆ ವಿತರಿಸಲಾಗಿದೆ.
ಸವಿವರವಾದ ಲೆಕ್ಕಪತ್ರ ನೀಡಿದ ಕುರಿತು ಸದಸ್ಯರಾದ ವೆಂಕಟೇಶ್ವರ ಭಟ್, ನಾಮದೇವ ರಾವ್, ರೆಹಮಾನ್, ಬಾಬು ಪೂಜಾರಿ ಮತ್ತಿತರರು ಪ್ರಸ್ತಾವಿಸಿದರು.
ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.
ಉಪಾಧ್ಯಕ್ಷ ಪ್ರಕಾಶ ನಾರಾಯಣ ಸ್ವಾಗತಿಸಿದರು. ಶಾಖಾ ಪ್ರಬಂಧಕ ಪ್ರಸನ್ನ ಪರಾಂಜಪೆ, ಆಂತರಿಕ ಲೆಕ್ಕಪರಿಶೋಧಕ ನಾರಾಯಣ ಫಡಕೆ ಕಾರ್ಯಕ್ರಮ ನಿರೂಪಿಸಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಚಂದ್ರಕಾಂತ ಪ್ರಭು, ನಿರ್ದೇಶಕರಾದ ಕೊರಗಪ್ಪ ನಾಯ್ಕ,ಜ್ಯೋತಿ ಜೆ ಫಡ್ಕೆ,ಸುಮಾ ಎಂ ಗೋಖಲೆ,ಎಂ.ಶಶಿಧರ ಕಲ್ಮಂಜ, ರಾಘವ ಕಲ್ಮಂಜ, ನಂದ ಕುಮಾರ್,ಸಂಜೀವ ಗೌಡ ಮಾರ್ಕಳ,ಶಶಿಧರ,ಶಶಿಧರ ಬಿ,ನಯನ,ಗಜಾನನ ವಝೆ ಉಪಸ್ಥಿತರಿದ್ದರು