March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಮಚ್ಚಿನ ಪ್ರೌಢಶಾಲೆಗೆ ಕ್ರೀಡಾ ಸಾಮಾಗ್ರಿಗಳ ವಿತರಣೆ ಹಾಗೂ ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಿಕ್ಷಕರಿಗೆ ವಿವಿಧ ಕ್ರೀಡಾಕೂಟಗಳು

ಮಚ್ಚಿನ : ಸರಕಾರಿ ಪ್ರೌಢಶಾಲೆ ಮಚ್ಚಿನ ಇಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳು ಶಿಕ್ಷಕರಿಗೆ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಿ ಸಂಭ್ರಮ ಪಟ್ಟರು.


ಈ ಕಾರ್ಯಕ್ರಮದಲ್ಲಿ ಡಾ| ಸರ್ವಪಲ್ಲಿ ರಾಧಾಕೃಷ್ಣನ್ ಇವರ ಬಗ್ಗೆ ಮಕ್ಕಳಿಗೆ ಸಂಸ್ಥೆಯ ಸಮಾಜ ಶಿಕ್ಷಕರಾದ ವೆಂಕಪ್ಪ ಬಿ. ಮಾಹಿತಿ ನೀಡಿದರು.


ಕಾರ್ಯಕ್ರಮದಲ್ಲಿ ಸ್ವರ್ಣ ಸಂಜೀವಿನಿ ಮಡವು ಕಜೆಕಾರು, ಮತ್ತು ಪುಣ್ಯಭೂಮಿ ತುಳುನಾಡ ಸೇವಾ ಟ್ರಸ್ಟ್ ಹಾಗೂ ಸೇವಾ ಲೈಫ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಈ ಮೂರು ಟ್ರಸ್ಟ್‌ಗಳ ವತಿಯಿಂದ ಸಂಸ್ಥೆಯ ವಿದ್ಯಾರ್ಥಿಗಳಿಗೆ 36,200 ರೂಗಳ ಕ್ರೀಡಾ ಸಾಮಾಗ್ರಿಗಳನ್ನು ವಿತರಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರು ಸ್ವಾಗತಿಸಿದರು. ದೈಹಿಕ ಶಿಕ್ಷಕರಾದ ಸುಭಾಷ್ ಚಂದ್ರ ಪಿ. ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. ವೆಂಕಪ್ಪ ಬಿ ವಂದಿಸಿದರು.

Related posts

ಅ.28: ಕುತ್ಲೂರು ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಸಮಗ್ರ ರಕ್ಷಣಾ ಯೋಜನೆ ಅಪಘಾತ ವಿಮಾ ಮೇಳ’

Suddi Udaya

ನಿಡ್ಲೆ ಸರ್ಕಾರಿ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಶಾಂತಾ ಶೆಟ್ಟಿ ರವರಿಗೆ ಬೀಳ್ಕೊಡುಗೆ ಸಮಾರಂಭ

Suddi Udaya

ಬೆದ್ರಬೆಟ್ಟು ಮರಿಯಾoಬಿಕ ಆಂ.ಮಾ. ಶಾಲೆಯಲ್ಲಿ ವಾರ್ಷಿಕ ಕ್ರೀಡೋತ್ಸವ ಸ್ಪಾರ್ಕ್ -2024

Suddi Udaya

ಡಿ.ಕೆ.ಆರ್.ಡಿ.ಎಸ್ ಬೆಳ್ತಂಗಡಿ ನೇತೃತ್ವದಲ್ಲಿ ಕ್ಯಾನ್ಸರ್ ಜನಜಾಗೃತಿ ಹಾಗೂ ಕ್ಯಾನ್ಸರ್ ರೋಗಿಗಳಿಗಾಗಿ ಧನ ಸಹಾಯ ಸಂಗ್ರಹಣಾ ಅಭಿಯಾನ

Suddi Udaya

ಶಿಬಾಜೆ ಗ್ರಾಮ ಪಂಚಾಯತ್ ನ ಗ್ರಾಮಸಭೆ

Suddi Udaya

ಎ.30-ಮೇ.3: ಮಾನ್ಯ ಸತ್ಯಚಾವಡಿ ತರವಾಡು ಮನೆಯ ಗೃಹಪ್ರವೇಶ: ಸ್ಥಳ ದೇವತಾ ಸಾನಿಧ್ಯಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ: ಚಪ್ಪರ ಮೂಹೂರ್ತ

Suddi Udaya
error: Content is protected !!