37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ತುಮಕೂರು ಜಿಲ್ಲೆಯ ಕ್ಯಾತಸಂದ್ರಲ್ಲಿ ನಡೆದ ಗಣಪತಿ ಶೋಭಯಾತ್ರೆಯಲ್ಲಿ ಬಳಂಜದ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ತಂಡ

ಬಳಂಜ: ಜಿಲ್ಲೆಯ ಹೆಸರಾಂತ ಕುಣಿತ ಭಜನಾ ಮಂಡಳಿಗಳಲ್ಲಿ ಒಂದಾದ ಬಳಂಜದ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿಯು ಸೆ.15 ರಂದು ನಡೆದ ತುಮಕೂರು ಜಿಲ್ಲೆಯ ಕ್ಯಾತಸಂದ್ರ ಗಣೇಶೋತ್ಸವದ ಅದ್ದೂರಿ ಶೋಭಾ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.


ಸಮಾಜ ಸೇವಕರಾದ ಹರೀಶ್ ವೈ ಚಂದ್ರಮ ರವರ ಪ್ರಧಾನ ಸಂಚಾಲಕತ್ವದಲ್ಲಿ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿಯು ಈಗಾಗಲೇ 236 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿದ್ದು 8 ಜಿಲ್ಲೆ ಹಾಗೂ ಎರಡು ಹೊರ ರಾಜ್ಯದಲ್ಲಿ ಕುಣಿತ ಭಜನೆಯಲ್ಲಿ ಭಾಗವಹಿಸಿ ಹೆಸರನ್ನು ಪಡೆದಿದೆ. ಇದರ ಜೊತೆಗೆ ಹಲವು ಜನಪರ ಸೇವೆಯನ್ನು ಸಹ ಮಾಡುತ್ತಾ ಬರುತ್ತಿದ್ದಾರೆ. ಪೋಷಕರು ಮತ್ತು ಮಂಡಳಿಯ ಸದಸ್ಯರ ಪೂರ್ಣ ಸಹಕಾರದಿಂದ ಇಷ್ಟು ಕಾರ್ಯಕ್ರಮಗಳನ್ನು ನೀಡಲು ಸಾಧ್ಯವಾಗಿದೆ ಎಂದು ಹರೀಶ್ ವೈ.ಚಂದ್ರಮ ಸಂತಸ ವ್ಯಕ್ತಪಡಿಸಿದ್ದು ಮಂಡಳಿಯ ಮುಖ್ಯ ತರಬೇತುದಾರರಾಗಿ ಕು.ಮಾನ್ಯ ಹಾಗೂ ಅಧ್ಯಕ್ಷರಾಗಿ ಕು.ಜ್ಯೋತಿ, ಉಪ ಸಂಚಾಲಕರಾಗಿ ಪ್ರಣಾಮ್ ಶೆಟ್ಟಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Related posts

ಬೆಳ್ತಂಗಡಿ: ಸಂಜೀವಿನಿ ಸಂಘಗಳಿಗೆ ರೂ.1.03 ಕೋಟಿ ಬ್ಯಾಂಕ್ ಸಾಲ ವಿತರಣೆ

Suddi Udaya

ಕನ್ಯಾಡಿ ಸೇವಾಭಾರತಿಯಿಂದ ದೀಪಾವಳಿ ಸ್ನೇಹ ಮಿಲನ – 2025

Suddi Udaya

ಸುಲ್ಕೇರಿ-ಅಟ್ರಿಂಜೆ ಸೇತುವೆಯ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಮಧ್ಯಪ್ರದೇಶ ಸುನಿಲ್ ಅಸೌಖ್ಯದಿಂದ ಮೃತ್ಯು

Suddi Udaya

ಧರ್ಮಸ್ಥಳ ಬಿಜೆಪಿ ಶಕ್ತಿ ಕೇಂದ್ರದ ಅಭ್ಯಾಸವರ್ಗ

Suddi Udaya

ಸಿ.ಎ ಪರೀಕ್ಷೆ: ಕತ್ತೋಡಿ ನಿವಾಸಿ ಅಕ್ಷಯ್ ಜೈನ್ ಉತ್ತೀರ್ಣ

Suddi Udaya

ಇಂದಬೆಟ್ಟು: ಕಲ್ಲಾಜೆ ನಿವಾಸಿ ವಸಂತ ಪೂಜಾರಿ ನೇಣು ಬಿಗಿದು ಆತ್ಮಹತ್ಯೆ

Suddi Udaya
error: Content is protected !!