September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ತಾಲೂಕು ಆಡಳಿತ ಸೌಧದಲ್ಲಿ ವಿಶ್ವಕರ್ಮ ಜಯಂತಿ ಆಚರಣೆ

ಬೆಳ್ತಂಗಡಿ : ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶ್ರೀ ವಿಶ್ವಕರ್ಮ ಜಯಂತಿ ಆಚರಣೆಯು ತಾಲೂಕು ಆಡಳಿತ ಸೌಧ ಸಭಾಂಗಣದಲ್ಲಿ ಸೆ. 17ರಂದು ನಡೆಯಿತು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅಧ್ಯಕ್ಷತೆ ವಹಿಸಿ ಮಾತನಾಡಿ ಶಿಲ್ಪಕಲೆ ಹಾಗೂ ಕರಕುಶಲತೆಗಳನ್ನು ಒಳಗೊಂಡಿರುವ ಎಲ್ಲಾ ಬಂಧುಗಳನ್ನು ಒಟ್ಟು ಸೇರಿಸಬೇಕು ಎಂಬ ಚಿಂತನೆಯಲ್ಲಿ ಸನ್ಮಾನ್ಯ ನರೇಂದ್ರ ಮೋದಿ ಯವರು ವಿಶ್ವಕರ್ಮರ ಹೆಸರಿನಲ್ಲಿ ಉತ್ತಮವಾದ ಯೋಜನೆಯನ್ನು ಈ ದೇಶಕ್ಕೆ ಅನುಷ್ಠಾನ ಗೊಳಿಸುವ ಮೂಲಕ ಸಮಾಜದ ಎಲ್ಲಾ ಬಂಧುಗಳಿಗೆ ಒಳ್ಳೆಯ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ. ನೂತನ ವಿಶ್ವಕರ್ಮ ಸಭಾಭವನದ ಅಭಿವೃದ್ಧಿಯ ದೃಷ್ಟಿಯಿಂದ ಶಾಸಕ ನಿಧಿಯಿಂದ ಸಹಕಾರವನ್ನು ಕೊಡುತ್ತೇನೆ ಎಂದರು.

ಕೇಳದ ಪೇಟೆ ಸ.ಹಿ. ಪ್ರಾಥಮಿಕ ಶಾಲಾ ಪ್ರಭಾರ ಮುಖ್ಯ ಶಿಕ್ಷಕ ಪ್ರಶಾಂತ್ ಎ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ವೇದಿಕೆಯಲ್ಲಿ ಬೆಳ್ತಂಗಡಿ ವಿಶ್ವಕರ್ಮಾಭ್ಯುದಯ ಸಭಾ ಅಧ್ಯಕ್ಷ ಗಣೇಶ್ ಆಚಾರ್ಯ ಬಲ್ಯಾಯಕೋಡಿ, ಉಪ ತಹಸೀಲ್ದಾರ್ ರವಿಕುಮಾರ್ ಉಪಸ್ಥಿತರಿದ್ದರು.

ಶ್ರೀಮತಿ ಹೇಮಾ ಸ್ವಾಗತಿಸಿದರು. ಶ್ರೀಮತಿ ಹೇಮಲತಾ ನಿರೂಪಿಸಿ, ಧನ್ಯವಾದವಿತ್ತರು.

Related posts

ಕಕ್ಕಿಂಜೆ: ಶ್ರೀ ಕೃಷ್ಣ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ

Suddi Udaya

ಉಜಿರೆ ಎಸ್‌.ಡಿ.ಎಂ ತಾಂತ್ರಿಕ ಮಹಾವಿದ್ಯಾಲಯ : ಐದು ದಿನಗಳ ರಾಷ್ಟ್ರ ಮಟ್ಟದ ಎಫ್.ಡಿ.ಪಿ ಕಾರ್ಯಾಗಾರಕ್ಕೆ ಚಾಲನೆ

Suddi Udaya

ಬೆಳ್ತಂಗಡಿ ತಾಲೂಕು ಮಟ್ಟದ 17ರ ವಯೋಮಾನದ ಬಾಲಕ ಬಾಲಕಿಯರ ವಾಲಿಬಾಲ್ ಪಂದ್ಯಾಟ

Suddi Udaya

ಗುರುವಾಯನಕರೆ ಎಕ್ಸೆಲ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓರಿಯಂಟೇಶನ್ ಕಾರ್ಯಕ್ರಮಶ್ರದ್ಧೆಯಿಂದ ಕಲಿತರೆ ಅದ್ಭುತ ಅವಕಾಶ: ಖ್ಯಾತ ನಿರ್ದೇಶಕ ಸ್ಮಿತೇಶ್ ಬಾರ್ಯ ವಿದ್ಯಾರ್ಥಿಗಳ ಕನಸು ನನಸು ಮಾಡುವುದೇ ನಮ್ಮ ಗುರಿ: ಸುಮಂತ್ ಕುಮಾರ್ ಜೈನ್

Suddi Udaya

ಹೋರಾಟದ ಮೂಲಕ ಧರ್ಮ ಜಾಗೃತಿಯನ್ನು ಮಾಡಿದ್ದೇನೆ: ಮಹೇಶ್ ಶೆಟ್ಟಿ ತಿಮರೋಡಿ

Suddi Udaya

ಬೆಳ್ತಂಗಡಿ ಶ್ರೀ ಧ.ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕೊಕೆಡಾಮ – ಜಪಾನಿನ ವಿಶಿಷ್ಟ ಸಸ್ಯ ನೆಡುವ ಕಲೆ

Suddi Udaya
error: Content is protected !!