September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಆರಂಬೋಡಿ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ

ಆರಂಬೋಡಿ ಹಾಲು ಉತ್ಪಾದಕರ ಸಹಕಾರ ಸಂಘ ಇದರ 2023-24 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ಶ್ರೀನಿವಾಸ್ ಶೆಟ್ಟಿಗಾರ್ ಸಭಾ ಭವನ ಸಂಘದ ಕಚೇರಿ ಬಳಿ ಜರಗಿತು.

ಆರಂಬೋಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಎಚ್. ಹುಲಿಮೇರು ಅಧ್ಯಕ್ಷತೆ ವಹಿಸಿದರು. ಹೈನುಗಾರಿಕೆಯ ವಿವಿಧ ಮಾಹಿತಿಯನ್ನು ದಕ್ಷಿಣ ಕನ್ನಡ ಹಾಲು ಒಕ್ಕೂಟ ಬೆಳ್ತಂಗಡಿಯ ವಿಸ್ತರಣಾಧಿಕಾರಿ ಶ್ರೀಮತಿ ಸುಚಿತ್ರಾ ತಿಳಿಸಿದರು. ಹಾಲು ಪೂರೈಸುವ ಸದಸ್ಯರುಗಳ ಮಕ್ಕಳಿಗೆ 2023-24 ನೇ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ಪಿ. ಯು. ಸಿ. ಯಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ದಕ್ಷಿಣ ಕನ್ನಡ ಹಾಲು ಒಕ್ಕೂಟ ನಿ ಬೆಳ್ತಂಗಡಿ ಪಶು ವೈದ್ಯಾಧಿಕಾರಿ ಡಾ| ಪೂಜಾ, ಆರಂಬೋಡಿ ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಕೃಷ್ಣ ಶೆಟ್ಟಿ ಉಮಾನೊಟ್ಟು, ನಿರ್ದೇಶಕರುಗಳಾದ ಬಾಬು ಪೂಜಾರಿ ಹನ್ನೆರಡು ಕವಲು, ಪ್ರತಾಪ್ ಶೆಟ್ಟಿ ಕುಂಡಾಜೆ, ಸುರೇಶ್ ಪೂಜಾರಿ ಪಾಣಿಮೇರು, ಶಶಿಧರ್ ಶೆಟ್ಟಿ ಹಕ್ಕೇರಿ, ಸುಮಿತ್ರ ಶೆಟ್ಟಿ ಹೊಕ್ಕಾಡಿಗೋಳಿ, ಜೋಸೆಫ್ ಹಿಲಾರಿ ನಜರತ್ ಹನ್ನೆರಡು ಕವಲು, ದಿನೇಶ್ ಪೂಜಾರಿ ಹುಲಿಮೇರು, ಕಿರಣ್ ಮಂಜಿಲ ಉಪಸ್ಥಿತರಿದ್ದರು.

ಸಂಘದ ನಿರ್ದೇಶಕರು ಉಮೇಶ್ ಶೆಟ್ಟಿ ಪಾಲ್ಯ ಸ್ವಾಗತಿಸಿ, ಸಂಘದ ಕಾರ್ಯದರ್ಶಿ ಪ್ರದೀಪ್ ಪಾಣಿಮೇರು ವಾರ್ಷಿಕ ವರದಿ ಮಂಡಿಸಿದರು. ಸಂಘದ ಸಿಬ್ಬಂದಿ ಸುರೇಶ್.ಎಚ್.ಧನ್ಯವಾದ ನೀಡಿದರು.

Related posts

ಸೌಜನ್ಯ ಪ್ರಕರಣ ವಿಚಾರಣೆ ಜು.21 ಕ್ಕೆ ಮುಂದೂಡಿಕೆ

Suddi Udaya

ಕಳೆಂಜ ನಂದಗೋಕುಲ ಗೋಶಾಲೆಗೆ ಖ್ಯಾತ ಯಕ್ಷಗಾನ ಕಲಾವಿದ ಉಜಿರೆ ಅಶೋಕ ಭಟ್ ಭೇಟಿ

Suddi Udaya

ಗುರಿಪಳ್ಳ ಸ.ಉ.ಹಿ.ಪ್ರಾ. ಶಾಲೆಯಲ್ಲಿ ಗಿಡನಾಟಿ, ಹಾಗೂ ಮಾಹಿತಿ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಅಭಾಸಾಪ ವತಿಯಿಂದ ಉಪನ್ಯಾಸ ಕಾರ್ಯಕ್ರಮ

Suddi Udaya

ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಅಳವಡಿಕೆಗೆ 3 ತಿಂಗಳ ಅವಧಿ ವಿಸ್ತರಣೆ

Suddi Udaya

ಕಡಿರುದ್ಯಾವರ: ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ಪಲ್ಟಿ

Suddi Udaya
error: Content is protected !!