ಬೆಳ್ತಂಗಡಿ: ಬಿಎಂಎಸ್ ರಿಕ್ಷಾ ಚಾಲಕರ ಸಂಘ ಬೆಳ್ತಂಗಡಿ ತಾಲೂಕು ಇದರ ವಾರ್ಷಿಕ ಸಭೆ ಹಾಗೂ ರಾಷ್ಟ್ರೀಯ ಕಾರ್ಮಿಕ ದಿನಾಚರಣೆಯನ್ನು ಬೆಳ್ತಂಗಡಿಯ ಅಂಬೇಡ್ಕರ್ ಭವನದಲ್ಲಿ ನಡೆಸಲಾಯಿತು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ಸಂಚಾರಿ ಆರಕ್ಷಕ ಸಹಾಯಕ ಉಪನೀರಿಕ್ಷಕರಾದ ಹರಿಪ್ರಸಾದ್ ಅವರು ಉದ್ಘಾಟಿಸಿದರು ಈ ಕಾರ್ಯಕ್ರಮದಲ್ಲಿ ಬಿಎಂಎಸ್ ರಿಕ್ಷಾ ಚಾಲಕ ಸಂಘದ ತಾಲೂಕು ಅಧ್ಯಕ್ಷರಾದ ಕೃಷ್ಣಬೆಳಾಲು ಅವರು ಅಧ್ಯಕ್ಷತೆಯನ್ನು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಭಾರತೀಯ ಮಜ್ದೂರ್ ಸಂಘದ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್ ಬಿಎಂಎಸ್ ಜಿಲ್ಲಾಧ್ಯಕ್ಷರಾದ ವಕೀಲರಾದ ಅನಿಲ್ ಕುಮಾರ್ , ಬೆಳ್ತಂಗಡಿ ಬಿಎಮ್ಎಸ್ ನ ತಾಲೂಕು ಅಧ್ಯಕ್ಷರಾದ ಉದಯಕುಮಾರ್ ಬಿಕೆ ,ಬಿಎಂಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಸಂತ್ ಕುಮಾರ್ ಮಣಿ ಹಳ್ಳ ,ಮೋಟರ್ ಜನರಲ್ ಮಜ್ದೂರ್ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ನಾರಾಯಣ ಪೂಜಾರಿ ಬಂಟ್ವಾಳ ಪುತ್ತೂರು ರಿಕ್ಷಾ ಚಾಲಕ ಸಂಘದ ಅಧ್ಯಕ್ಷರಾದ ರಾಜೇಶ್ ಮರೀಲು ಸುಳ್ಯ ರಿಕ್ಷಾ ಚಾಲಕ ಸಂಘದ ಅಧ್ಯಕ್ಷರಾದ ರಾಧಾಕೃಷ್ಣ ಸುಳ್ಯ ,ಬಂಟ್ವಾಳ ರಿಕ್ಷಾ ಚಾಲಕ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಗಾಣಿಗ ಅವರು ಉಪಸ್ಥಿತರಿದ್ದರು.
ಉಜಿರೆಯಲ್ಲಿ ಮರ ಬಿದ್ದು ರಿಕ್ಷಾ ಜಖಂ ಆದ ಅಟೋ ರಾಜ ರತ್ನಾಕರ್ ಉಜಿರೆ ಅವರಿಗೆ ಸಂಘದ ವತಿಯಿಂದ ರೂಪಾಯಿ 5000 ಧನ ಸಹಾಯ ಧನ ನೀಡಲಾಯಿತು. ಹಾಗೂ ಕ್ಷೇಮ ನಿಧಿಯ 18 ನೇ ಸಹಾಯಧನ ವನ್ನು ಸುರ್ಯ ರಿಕ್ಷಾ ಪಾರ್ಕ್ ನ ಸದಸ್ಯರಾದ ದಿನೇಶ್ ಅವರಿಗೆ ಹಸ್ತಾಂತರಿಸಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಜನಾರ್ಧನ್ ಕಾನರ್ಪ ನಿರ್ವಹಿಸಿ ಸ್ವಾಗತವನ್ನು ಸಂಘದ ಉಪಾಧ್ಯಕ್ಷರಾದ ವಸಂತ್ ಮಡಿವಾಳ ವೇಣೂರು ಧನ್ಯವಾದಗಳು ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ಕೆ ಕುದ್ರಡ್ಕ ನೇರೆವೇರಿಸಿದರು.ಕೋಶಾಧಿಕಾರಿ ಪ್ರಶಾಂತ್ ಗರ್ಡಾಡಿ ಹಾಗೂ ಲವಕುಮಾರ್ ಸಹಕರಿಸಿದರು.