April 2, 2025
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿಧಾರ್ಮಿಕಬೆಳ್ತಂಗಡಿವರದಿ

ಪೆರ್ಲ ಬೈಪಾಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಿತಿ ರಚನೆ

ಬಂದಾರು: ಪೆರ್ಲ ಬೈಪಾಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಬರುವ ಜನವರಿ 7 ರಿಂದ 12ರ ವರೆಗೆ ನಡೆಯಲಿದ್ದು, ಇದರ ಸಮಾಲೋಚನಾ ಸಭೆ ಸೆ. 15ರಂದು ದೇವಸ್ಥಾನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ರಚನೆ ಮಾಡಲಾಯಿತು.

ಗೌರವಾಧ್ಯಕ್ಷರಾಗಿ ಶಾಸಕ ಹರೀಶ್ ಪೂಂಜ, ಅಧ್ಯಕ್ಷರಾಗಿ ಮಹಾಬಲ ಗೌಡ ನಾಗಂದೋಡಿ, ಪ್ರಧಾನ ಸಂಚಾಲಕರಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಕೃಷಿ ವಿಭಾಗದ ಮುಖ್ಯಸ್ಥ ಬಾಲಕೃಷ್ಣ ಪೂಜಾರಿ ಬಜೆ, ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್ ಗೌಡ ಪರಪ್ಪಾಜೆ, ಕೋಶಾಧಿಕಾರಿಯಾಗಿ ಕೇಶವ ಗೌಡ ಕೊಂಗುಜೆ, ಉಪಾಧ್ಯಕ್ಷರುರುಗಳಾಗಿ ವಿಶ್ವನಾಥ ಪೂಜಾರಿ ಕುರುಡಂಗೆ, ತಿಮ್ಮಪ್ಪ ಗೌಡ ಸೋಣಕುಮೇರು, ಕಾರ್ಯದರ್ಶಿಯಾಗಿ ಸತೀಶ್ ಗೌಡ ಬಾಲಂಪಾಡಿ, ಜೊತೆ ಕಾರ್ಯದರ್ಶಿಯಾಗಿ ಕು.ಪ್ರತೀಕ್ಷಾ ಪಯ್ಯೋಡಿ, ಕು.ಶರಣ್ಯ ಬೈದ್ರೋಟ್ಟು, ಸವಿತಾ ತಾರಕರೆ, ಸದಸ್ಯರುಗಳಾಗಿ ಗೀತಾ ಕಾಡಂಡ, ರಾಜೀವಿ ತಾರಾಕರೆ, ಜಯಣ್ಣ ಗೌಡ ಮಿನಂದೇಲು ಇವರನ್ನು ಆಯ್ಕೆ ಮಾಡಲಾಗಿದೆ. ಇದೇ ವೇಳೆ ವಿವಿಧ ಉಪ ಸಮಿತಿಗೆ ಸಂಚಾಲಕ, ಸಹ ಸಂಚಾಲಕರನ್ನು ಆಯ್ಕೆ ಮಾಡಲಾಯಿತು.

Related posts

ಕರಾವಳಿ ಪ್ರವಾಸೋದ್ಯಮ ಕುರಿತು ವಿಧಾನಸಭಾ ಕಲಾಪದಲ್ಲಿ ಧ್ವನಿ ಎತ್ತಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ

Suddi Udaya

ದಕ್ಷಿಣ ಕನ್ನಡ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಪದಾಧಿಕಾರಿಗಳಿಂದ ರಕ್ಷಿತ್ ಶಿವರಾಂ ಭೇಟಿ

Suddi Udaya

ಮೇಲಂತಬೆಟ್ಟು ಗ್ರಾ.ಪಂ. ವತಿಯಿಂದ ಅರ್ಹ ಫಲಾನುಭವಿಗಳಿಗೆ ಉಜ್ವಲ ಗ್ಯಾಸ್ ವಿತರಣೆ

Suddi Udaya

ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ನಿಧನಕ್ಕೆ ಧರ್ಮಸ್ಥಳದ ಡಾ. ಡಿ.ವೀರೇಂದ್ರ ಹೆಗ್ಗಡೆಯವರಿಂದ ಸಂತಾಪ

Suddi Udaya

ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನದಿಂದ 274 ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ

Suddi Udaya

ಮಡಂತ್ಯಾರು- ಪುಂಜಾಲಕಟ್ಟೆ ವರ್ತಕರ ಸಂಘದಿಂದ ಆರ್ಥಿಕ ನೆರವು

Suddi Udaya
error: Content is protected !!