ಬೆಳ್ತಂಗಡಿ ತಾಲೂಕು ಬಿಎಂಎಸ್ ರಿಕ್ಷಾ ಚಾಲಕರ ಸಂಘದ ಮಹಾಸಭೆ

Suddi Udaya

ಬೆಳ್ತಂಗಡಿ: ಬಿಎಂಎಸ್ ರಿಕ್ಷಾ ಚಾಲಕರ ಸಂಘ ಬೆಳ್ತಂಗಡಿ ತಾಲೂಕು ಇದರ ವತಿಯಿಂದ ಸೆ.18ರಂದು ನಡೆದ ವಾರ್ಷಿಕ ಮಹಾಸಭೆಯಲ್ಲಿ ಇತ್ತೀಚೆಗೆ ಮರ ಬಿದ್ದು ರಿಕ್ಷಾ ಜಖಂ ಆಗಿ ತೀವ್ರ ಗಾಯಗಳಾಗಿ ಚಿಕಿತ್ಸೆ ಪಡೆದಿರುವ ರತ್ನಾಕರ್ ಆಟೋ ರಾಜ ಉಜಿರೆ ಅವರಿಗೆ ಸಂಘದ ವತಿಯಿಂದ ಸಹಾಯಧನವನ್ನು ಹಸ್ತಾಂತರಿಸಲಾಯಿತು ಮತ್ತು ಸುರ್ಯ ಪಾರ್ಕಿಂಗ್‌ನ ಅಟೋ ಚಾಲಕ ದಿನೇಶ್‌ರವರ ವೈದ್ಯಕೀಯ ಚಿಕಿತ್ಸೆಗೆ ಬಿಎಂಎಸ್ ರಿಕ್ಷಾ ಚಾಲಕರ ಅಪತ್ಕಾಲದ ನೆರವಿನ ಯೋಜನೆ ಕ್ಷೇಮನಿಧಿಯ ೧೮ನೇ ಯೋಜನೆಯನ್ನು ಈ ಸಂದರ್ಭದಲ್ಲಿ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಭಾರತೀಯ ಮಜ್ದೂರ್ ಸಂಘದ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್, ಬಿಎಂಎಸ್ ಜಿಲ್ಲಾಧ್ಯಕ್ಷ ವಕೀಲರಾದ ಅನಿಲ್ ಕುಮಾರ್, ಬೆಳ್ತಂಗಡಿ ಬಿಎಂಎಸ್ ನ ತಾಲೂಕು ಅಧ್ಯಕ್ಷ ಉದಯ ಕುಮಾರ್ ಬಿ.ಕೆ., ಬಿಎಂಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಸಂತ್ ಕುಮಾರ್ ಮಣಿಹಳ್ಳ, ಮೋಟರ್ ಜನರಲ್ ಮಜ್ದೂರ್ ಸಂಘದ ಜಿಲ್ಲಾ ಉಪಾಧ್ಯಕ್ಷ ನಾರಾಯಣ ಪೂಜಾರಿ ಬಂಟ್ವಾಳ, ಪುತ್ತೂರು ರಿಕ್ಷಾ ಚಾಲಕ ಸಂಘದ ಅಧ್ಯಕ್ಷ ರಾಜೇಶ್ ಮರೀಲು, ಸುಳ್ಯ ರಿಕ್ಷಾ ಚಾಲಕ ಸಂಘದ ಅಧ್ಯಕ್ಷ ರಾಧಾಕೃಷ್ಣ ಸುಳ್ಯ, ಬಂಟ್ವಾಳ ರಿಕ್ಷಾ ಚಾಲಕ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಗಾಣಿಗ, ಬಿಎಂಎಸ್ ರಿಕ್ಷಾ ಚಾಲಕ ಸಂಘದ ಅಧ್ಯಕ್ಷ ಕೃಷ್ಣ ಬೆಳಾಲು, ರಮೇಶ್ ಕುದ್ರಡ್ಕ, ಪ್ರಶಾಂತ್ ಗರ್ಡಾಡಿ, ಲವಕುಮಾರ್, ವಸಂತ ಮಡಿವಾಳ ವೇಣೂರು ಉಪಸ್ಥಿತರಿದ್ದರು.

Leave a Comment

error: Content is protected !!