24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಎಸ್‌ಡಿಎಂ ಪಿಯು ಕಾಲೇಜಿನಲ್ಲಿ ಆತ್ಮಹತ್ಯಾ ತಡೆ ದಿನದ ಅಂಗವಾಗಿ “ಭವಿಷ್ಯ ಕಾದಿದೆ ಆತ್ಮಹತ್ಯೆ ಬೇಡ” ಎಂಬ ಕಾರ್ಯಕ್ರಮ

ಭಾರತ ದೇಶವೊಂದರಲ್ಲೇ ನಲವತ್ತು ಸೆಕೆಂಡಿಗೊಂದು ಆತ್ಮಹತ್ಯೆ ಆಗುತ್ತಿದೆ. ಸಾಮಾಜಿಕ , ವೈಯುಕ್ತಿಕ , ಮಾನಸಿಕ ಖಿನ್ನತೆ , ರೋಗಾದಿ ಶಾರೀರಿಕ ಸಮಸ್ಯೆ , ಹೆದರಿಕೆ , ಸಾಲ ಇತ್ಯಾದಿಗಳಿಂದ ಮನುಷ್ಯ ಅನೇಕ ಸಮಸ್ಯೆಗಳನ್ನು ಹೊಂದಿದ್ದರೆ ಆತನ ಮನಸ್ಸು ವಿಚಲಿತವಾಗುತ್ತದೆ. ಹಾಗೆಯೇ ಆತ ಆತ್ಮಹತ್ಯೆಗೆ ಯತ್ನಿಸುತ್ತಾನೆ. ಹೀಗಾದಾಗ ಮನುಷ್ಯನಲ್ಲಿ ಸಹಜವಾಗಿ ವರ್ತನೆಯಲ್ಲಿ ಬದಲಾವಣೆ ಆಗುತ್ತದೆ. ಆಗ ಅಂತಹವರಿಗೆ ಆಪ್ತ ಸಮಾಲೋಚನೆ ಹಾಗೂ ಕುಟುಂಬದಲ್ಲಿ ಆಪ್ತತೆ ಹೊಂದಿರುವ ವ್ಯಕ್ತಿಗಳ ಸಲಹೆ ಅಗತ್ಯ. ಒಟ್ಟಾರೆ ಸೋಲನ್ನು ಸ್ವೀಕರಿಸುವ ಗುಣ ಹೊಂದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಅವಕಾಶವೇ ಇರುವುದಿಲ್ಲ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಮನಃಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಅಶ್ವಿನಿ. ಹೆಚ್ ಇವರು ಹೇಳಿದರು.

ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ನಡೆದ ಆತ್ಮಹತ್ಯಾ ತಡೆ ದಿನದ ಅಂಗವಾಗಿ ನಡೆದ ಭವಿಷ್ಯ ಕಾದಿದೆ…. ಆತ್ಮಹತ್ಯೆ ಬೇಡ ಎಂಬ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ವಿಶೇಷವಾಗಿ ವಿದ್ಯಾರ್ಥಿಗಳ ಖಿನ್ನತೆ ಹಾಗೂ ಮಾನಸಿಕ ಒತ್ತಡದ ಬಗ್ಗೆ ಮಾತನಾಡಿದರು. ಉಪ ಪ್ರಾಚಾರ್ಯ ಡಾ. ರಾಜೇಶ್ ಬಿ ಅವರು ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಆತ್ಮಹತ್ಯಾ ಜಾಗೃತಿ ಉಂಟಾಗಬೇಕು ಎಂದು ಕರೆ ನೀಡಿದರು.

ರಾ.ಸೇ.ಯೋಜನೆಯ ಕಾರ್ಯಕ್ರಮಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ ಉಪಸ್ಥಿತರಿದ್ದು ಗೌರವಿಸಿದರು.
ಘಟಕದ ನಾಯಕರಾದ ಆದಿತ್ಯ ಶರ್ಮಾ ಹಾಗೂ ಪ್ರಾಪ್ತಿ ಗೌಡ ಉಪಸ್ಥಿತರಿದ್ದರು. ಶ್ರೇಯಾ ಸ್ವಾಗತಿಸಿ , ಮೌಲ್ಯ ಪರಿಚಯಿಸಿದರು. ಶ್ರಮ ನಿರೂಪಿಸಿ , ಸಂತೋಷ್ ವಂದಿಸಿದರು.

Related posts

ಚಾರ್ಮಾಡಿ: ಬಿ.ಎಸ್.ಎನ್.ಎಲ್ ನಿವೃತ್ತ ಉದ್ಯೋಗಿ ವಿಠ್ಠಲ ಕುಲಾಲ್ ನಿಧನ

Suddi Udaya

ಮಾ.20-28: ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ- ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ

Suddi Udaya

ವೇಣೂರು: ಸರ್ಕಾರಿ ಪ್ರೌಢಶಾಲಾ ಪ್ರಾರಂಭೋತ್ಸವದ ಸಂಭ್ರಮ

Suddi Udaya

ನಿಡ್ಲೆ: ನಿವೃತ್ತ ಶಿಕ್ಷಕ ರಾಮಣ್ಣ ಪೂಜಾರಿ ನಿಧನ

Suddi Udaya

ಹೊಕ್ಕಾಡಿಗೋಳಿ ಎಸ್. ಕೆ. ಫ್ರೆಂಡ್ಸ್ ನೀರಪಲ್ಕೆ ಇದರ ಆಶ್ರಯದಲ್ಲಿ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ ಉದ್ಘಾಟನೆ

Suddi Udaya

ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನಕ್ಕೆ ವಿ.ಪ. ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಭೇಟಿ

Suddi Udaya
error: Content is protected !!