ಬೆಳ್ತಂಗಡಿ : ವಿದ್ಯಾರ್ಥಿಗಳು ಶಿಕ್ಷಕರ ಜೊತೆ ಇಟ್ಟುಕೊಳ್ಳುವ ಉತ್ತಮ ಭಾಂದವ್ಯ ಅವರ ಜೀವನಕ್ಕೆ ದಾರಿದೀಪ ವಾಗಬಲ್ಲುದು. ಅದೇ ರೀತಿ ಶಿಕ್ಷಕರ ವ್ಯಕ್ತಿತ್ವ ವಿದ್ಯಾರ್ಥಿಗಳಿಗೆ ಮಾದರಿಯಾಗಿರಬೇಕು ಎಂದು ಕೋಚಿಂಗ್ ಸೆಂಟರ್ ನ ಸಂಚಾಲಕರಾದ ಸಂತೋಷ್ ಕುಮಾರ್ ರವರು ಹೇಳಿದರು.
ಇವರು ಮಾಸ್ಟರ್ಸ್ ಕೋಚಿಂಗ್ ಸೆಂಟರ್ ನಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಕಿ ಹೇಮಾವತಿ ಕೆ. ವಿದ್ಯಾರ್ಥಿಗಳ ಸಂಘಟಿತ ಸಹಕಾರದ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಕೋಚಿಂಗ್ ಸೆಂಟರ್ ಮುಖ್ಯ ಶಿಕ್ಷಕಿ ರಮ್ಯಾ, ಶಿಕ್ಷಕರಾದ ದಿನೇಶ್, ಪಲ್ಲವಿ, ತೃಪ್ತಿ, ನಯನಾ, ಗುಣಶ್ರಿ, ಲತಾಶ್ರಿ, ಅಶ್ವಿನಿ, ನಾಗವೇಣಿ, ರೇಖಾ ಉಪಸ್ಥಿತರಿದ್ದರು.
ಸರ್ವಪಲ್ಲಿ ಡಾ.ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈಯುವ ಮೂಲಕ ಪ್ರಾರಂಭವಾದ ಕಾರ್ಯಕ್ರಮದಲ್ಲಿ
ವಿದ್ಯಾರ್ಥಿಗಳಾದ ಮಾನ್ಯ ಸ್ವಾಗತಿಸಿ, ಪ್ರೀತೇಶ್ ಧನ್ಯವಾದವಿತ್ತರು. ಸನ್ನಿಧಿ ಕಾರ್ಯಕ್ರಮ ನಿರೂಪಿಸಿದರು. ಅಸ್ನ ಮತ್ತು ಅಂಜಲಿ ಶಿಕ್ಷಕರ ದಿನಾಚರಣೆ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಶಿಕ್ಷಕರಿಗೆ ವಿವಿಧ ಸ್ಪರ್ಧೆಯನ್ನು ಏರ್ಪಡಿಸಲಾಯಿತು.