ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಅಕ್ರಮ ಇಸ್ಪೀಟು ಅಡ್ಡೆಗೆ ಪೊಲೀಸ್ ದಾಳಿ: ನಗದು ಹಾಗೂ ಸೊತ್ತುಗಳ ಸಹಿತ 23 ಮಂದಿ ವಶ

ಮಡಂತ್ಯಾರು: ಮಾಲಾಡಿ ಗ್ರಾಮದ ಮಡಂತ್ಯಾರು ಪೇಟೆಯ ಬಳಿಯಿರುವ ಅಲ್ಬರ್ಟ್ ಡಿ ಸೋಜಾ ಎಂಬವರಿಗೆ ಸೇರಿದ ಕಟ್ಟಡದ ಹಿಂಭಾಗದಲ್ಲಿರುವ ಶೆಡ್‌ನೊಳಗೆ ಸುಮಾರು 15-20 ಜನರು ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಇಸ್ಪೀಟು ಎಲೆಗಳಿಂದ ಉಲಾಯಿ –ಪಿದಾಯಿ (ಅಂದರ್‌-ಬಹಾರ್‌ ) ಎಂಬ ಅದೃಷ್ಟದ ಆಟವನ್ನು ಆಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ, ಪುಂಜಾಲಕಟ್ಟೆ ಪೊಲೀಸ್‌ ಠಾಣಾ ಪಿಎಸ್‌ಐ ನಂದಕುಮಾರ್‌ ಎಂ.ಎಂ ರವರು ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಕೃತ್ಯದಲ್ಲಿ ತೊಡಗಿದ್ದ 23 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು, ಜುಗಾರಿ ಆಟಕ್ಕೆ ಉಪಯೋಗಿಸಿದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡ ಘಟನೆ ಸೆ.19 ರಂದು ನಡೆದಿದೆ.

ಸ್ವಾಧೀನಪಡಿಸಿಕೊಂಡಿರುವ ನಗದು ಸೇರಿ ಎಲ್ಲಾ ಸೊತ್ತುಗಳ ಅಂದಾಜು ಮೌಲ್ಯ ರೂ 36729/- ಆಗಬಹುದು. ಈ ಬಗ್ಗೆ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು ಸೆ. 20 ರಂದು ಪುಂಜಾಲಕಟ್ಟೆ ಠಾಣೆಯಲ್ಲಿ ಅ.ಕ್ರ 67/2024 ಕಲಂ: 79, 80 ಕರ್ನಾಟಕ ಪೊಲೀಸ್‌ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿರುತ್ತದೆ.

Related posts

ಜೆಇಇ, ಬಿ ಆರ್ಕ್ ಫಲಿತಾಂಶ: ಎಕ್ಸೆಲ್ ನ ಸುಪ್ರೀತ್ ಎಂ ಬಡಿಗೇರ ಜಿಲ್ಲೆಗೆ ಪ್ರಥಮ

Suddi Udaya

ಬಳಂಜ ಶಾಲೆಗೆ ಹಳೆ ವಿದ್ಯಾರ್ಥಿಗಳಿಂದ ಪ್ಲೇಟ್ ಇಡುವ ಸ್ಟ್ಯಾಂಡ್ ಕೊಡುಗೆ

Suddi Udaya

ಮಂಗಳೂರುನಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಗಾಗಿ ವಕೀಲರ ಸಂಘದಿಂದ ಸಮಾಲೋಚನಾ ಸಭೆ: ಮಂಗಳೂರಿನಲ್ಲಿ ನಮಗೆ ಬೇಕು ಹೈಕೋರ್ಟ್ ಪೀಠ: ಧನಂಜಯ್ ರಾವ್

Suddi Udaya

ಯಕ್ಷಭಾರತಿ ನಾಟ್ಯ ತರಬೇತಿ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ

Suddi Udaya

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ಸಮಿತಿಯ ಸಭೆ

Suddi Udaya

ಧರ್ಮಸ್ಥಳ ಹರ್ಷೇಂದ್ರ ಕುಮಾರ್ ಪ್ರತಿಷ್ಠಿತ ಅಗರಿ ಪ್ರಶಸ್ತಿಗೆ ಆಯ್ಕೆ

Suddi Udaya
error: Content is protected !!