24.4 C
ಪುತ್ತೂರು, ಬೆಳ್ತಂಗಡಿ
April 4, 2025
ಆರೋಗ್ಯ

ಉಚಿತ ರಕ್ತ ತಪಾಸಣೆ ಹಾಗೂ ಅರೋಗ್ಯ ತಪಾಸಣಾ ಶಿಬಿರ

ಬೆಳ್ತಂಗಡಿ :ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಬೆಳ್ತಂಗಡಿ ಘಟಕ,
ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಛೇoಬರ್ ಹಾಗೂ ದ. ಕ. ಹಾಸ್ಪಿಟಲ್ ಸೊಸೈಟಿ ಇವರ ಸಂಯುಕ್ತ ಆಶ್ರಯದಲ್ಲಿ ಕೋರ್ಟ್ ರಸ್ತೆಯಲ್ಲಿರುವ ಕಛೇರಿ “ಅನನ್ಯ” ಇಲ್ಲಿ ಸೆ.22 ರಂದು “ಉಚಿತ ರಕ್ತ ತಪಾಸಣೆ ಹಾಗೂ ಅರೋಗ್ಯ ತಪಾಸಣಾ ಶಿಬಿರ ನಡೆಯಿತು. ಶಿಬಿರವನ್ನು ವಾಲ್ಟರ್ ಸಿಕ್ವೇರಾರವರು ದೀಪ ಬೆಳಗಿಸಿ ಉದ್ಘಾಟಿಸಿದರು.
ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಹರಿದಾಸ್ ಎಸ್. ಎಂ ಇವರು ಪ್ರಸ್ತಾವಿಕ ಭಾಷಣದೊಂದಿಗೆ ಸ್ವಾಗತಿಸಿದರು.
ಕಾರ್ಯದರ್ಶಿ ಜಾನ್ ಅರ್ವಿನ್ ಡಿಸೋಜರವರು ಶುಭಕೋರಿದರು.
ವೇದಿಕೆಯಲ್ಲಿ ವಕೀಲರಾದ ಶ್ರೀ ಶಿವಕುಮಾರ್, ಶ್ರೀ ವೆಂಕಟೇಶ್ ಮಯ್ಯ, ಡಾI ದೀಪ್ತಿ ಹಾಗೂ ಡಾI ಅನನ್ಯರವರು ಉಪಸ್ಥಿತರಿದ್ದರು.
ಛೇoಬರಿನ ಪೂರ್ವಧ್ಯರಾದ ಪ್ರಥ್ವಿ ರಂಜನ್ ರಾವ್, ಲ್ಯಾನ್ಸಿ ಪಿರೇರಾ, ಸದಸ್ಯರಾದ ಹರೀಶ್ ಶೆಟ್ಟಿ, ವಿಲ್ಸನ್ ಗೊನ್ಸಾಲ್ವಿಸ್, ದಯಾನಂದ ಹಾಗೂ ಬಾನುಪ್ರಸನ್ನರವರು ಭಾಗವಹಿಸಿದರು.
ಶ್ರೀ ಶಿವಕುಮಾರ್ ಇವರು ಕಾರ್ಯಕ್ರಮವನ್ನು ನಿರ್ವಹಿಸಿ ಧನ್ಯವಾದ ಸಮರ್ಪಿಸಿದರು.
ಸುಮಾರು 200 ಜನರು ಈ ಶಿಬಿರದಲ್ಲಿ ಭಾಗವಹಿಸಿದರು

.

Related posts

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಗುವಿಗೆ ಲ್ಯಾಪ್ರೋಸ್ಕೋಪಿಕ್ ಅಪೆಂಡಿಸೈಟಿಸ್ ಯಶಸ್ವಿ ಶಸ್ತ್ರಚಿಕಿತ್ಸೆ

Suddi Udaya

ವಾಣಿ ಪ.ಪೂ. ಕಾಲೇಜಿನಲ್ಲಿ “ಗೆಳತಿ” ಭರವಸೆಯ ನಾಳೆಗಾಗಿ ಆಪ್ತ ಸಮಾಲೋಚನ ಕಾರ್ಯಕ್ರಮ

Suddi Udaya

ವಿ. ಹಿಂ. ಪ, ಬಜರಂಗದಳ ಪದ್ಮುಂಜ ಘಟಕದಿಂದ ಪದ್ಮುಂಜ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ವಚ್ಛತಾ ಆಂದೋಲನ

Suddi Udaya

ರಾಜಕೇಸರಿ ಸಂಘಟನೆಯ ನೇತೃತ್ವದಲ್ಲಿ ಬೃಹತ್ ಉಚಿತ ನೇತ್ರ ತಪಾಸಣೆ ಶಿಬಿರ

Suddi Udaya

ನಡ ಗ್ರಾ.ಪಂ. ವ್ಯಾಪ್ತಿಯಲ್ಲಿ ಉಚಿತ ರೇಬಿಸ್ ರೋಗ ನಿರೋಧಕ ಲಸಿಕಾ ಶಿಬಿರ

Suddi Udaya

ಉಜಿರೆ: ಶ್ರೀ. ಧ. ಮಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ ರಾಷ್ಟ್ರೀಯ ಸುಪೋಷಣಾ ಮಾಸಾಚರಣೆ

Suddi Udaya
error: Content is protected !!