37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ವಲಯ ಮಟ್ಟದ ಪ್ರೌಢ ಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆ- ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

ಮಡಂತ್ಯಾರು: ಪುಂಜಾಲಕಟ್ಟೆ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆಯು ಸೆ. 20 ರಂದು ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆ ಉರುವಾಲು ಇಲ್ಲಿ ನಡೆಯಿತು.

ಸ್ಪರ್ಧೆಯಲ್ಲಿ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ವೈಯಕ್ತಿಕ ವಿಭಾಗದಲ್ಲಿ 10ನೇ ತರಗತಿಯ ಅಲಿನಾ ಅನಿಶ್ ಮತ್ತು ಸಾನಿಯಾ ಲೀರಾರವರು ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ಹಾಗೂ 10ನೇ ತರಗತಿಯ ಸ್ವರ್ಣಗೌರಿ, ಜೋಷ್ಮ ಜೋಸ್ , ಲಿಸ್ಟನ್ ಕಾರ್ಲ್ ರವರು ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಹಾಗೂ ಸಾಮೂಹಿಕ ಜನಪದ ನೃತ್ಯದಲ್ಲಿ 10ನೇ ತರಗತಿಯ ದೃತಿ ನಾಯಕ್ , ಶ್ರೀಲಕ್ಷ್ಮೀ, ಚರಿಶ್ಮರೈ, ದಿಯಾ ಸಿಕ್ವೇರ, ಲಿಸ್ಟನ್ ಕಾರ್ಲ್ , ಪ್ರಣಯ ಶೆಟ್ಟಿ, ರೋಲೆನ್ ಸಿಕ್ವೇರಾ ಮತ್ತು ೯ನೇ ತರಗತಿಯ ಬಿಂದು, ಯಕ್ಷ್ಮೀ, ಆಲ್ರನ್ ಫೆರ್ನಾಂಡೀಸ್ ರವರು ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.

ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಮತ್ತು ದ್ವಿತೀಯ ಸ್ಥಾನವನ್ನು ಪಡೆದಿರುವ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರಿಗೆ ಶಾಲಾ ಶಿಕ್ಷಕ ವೃಂದದವರು ತರಬೇತಿಯನ್ನು ನೀಡಿರುತ್ತಾರೆ.

Related posts

ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಿಂದ ವಾತ್ಸಲ್ಯ ಮನೆ ನಿರ್ಮಾಣದ ಕಾಮಗಾರಿಗೆ ಚಾಲನೆ

Suddi Udaya

ಮೊಗ್ರು: ಗುಡ್ಡ ಜರಿದು ಮನೆಗೆ ಹಾನಿ

Suddi Udaya

ಮುಳಿಯದಲ್ಲಿ ಡೈಮಂಡ್ ಫೆಸ್ಟ್ ಗೆ ಚಾಲನೆ : -ವಿಶಿಷ್ಟ ವಿನೂತನ ವಜ್ರಾಭರಣ ಖರೀದಿಗೆ ಸುಮಧುರ ಅವಕಾಶ

Suddi Udaya

ಪೆರ್ಮುಡ: ಸ.ಹಿ.ಪ್ರಾ.ಶಾಲೆಯಲ್ಲಿ ಉಚಿತ ಬರವಣಿಗೆ ಪುಸ್ತಕ ವಿತರಣೆ

Suddi Udaya

ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ರೂ. 233.13 ಕೋಟಿ ವ್ಯವಹಾರ, ಸದಸ್ಯರಿಗೆ ಶೇ. 15 ಡಿವಿಡೆಂಟ್

Suddi Udaya

ಪಟ್ರಮೆ: ಪಟ್ಟೂರು ಪಿತ್ತಿಲ್ತಾರು ನಿವಾಸಿ ಮೋನಪ್ಪ ಎಂ. ಕೆ ನಿಧನ

Suddi Udaya
error: Content is protected !!