24.7 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಆಮಂತ್ರಣ ಮುದ್ದು ಕೃಷ್ಣ ಸ್ಪರ್ಧೆ ಬಹುಮಾನ ವಿತರಣಾ ಸಮಾರಂಭ

ಬೆಳ್ತಂಗಡಿ : ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ವತಿಯಿಂದ ಏರ್ಪಡಿಸಿದ್ದ ಮುದ್ದು ಕೃಷ್ಣ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ಸೆ 21 ರಂದು ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಭಾರತೀಯ ಜೈನ್ ಮಿಲನ್ ವಲಯ ಉಪಾಧ್ಯಕ್ಷ ಸುದರ್ಶನ ಜೈನ್ ಬಂಟ್ವಾಳ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾರ್ಕಳ ವರ್ಧಮಾನ್ ಶಿಕ್ಷಣ ಸಂಸ್ಥೆಯ ಸಂಚಾಲಕಿ ಶಶಿಕಲಾ ಹೆಗ್ಡೆ, ಹಿರಿಯ ಮುತ್ಸದ್ದಿ ಬೆಳ್ತಂಗಡಿ ತಾಲೂಕು ಜಾನಪದ ಪರಿಷತ್ ಗೌರವಾಧ್ಯಕ್ಷರಾದ ಬಿ.ಭುಜಬಲಿ ಧರ್ಮಸ್ಥಳ, ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ರಾಜ್ಯ ಸದಸ್ಯೆ ಆಶಾ ಅಡೂರು, ಮೂಡಬಿದ್ರೆ ಪ್ರಭಾತ್ ಸಿಲ್ಕ್ಸ್ ಅಪೇಕ್ಷಾ ಜೈನ್ ಭಾಗವಹಸಿ ಮಾತಾನಾಡಿದರು.


ವೇದಿಕೆಯಲ್ಲಿ ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಪ್ರಧಾನ ಸಂಚಾಲಕ ಅಭಿಷೇಕ್ ಬಜಗೋಳಿ, ಅಧ್ಯಕ್ಷೆ ನಿರೀಕ್ಷಿತಾ ಮಂಗಳೂರು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಮುದ್ದು ಕೃಷ್ಣ ಸ್ಪರ್ಧಾ ವಿಜೇತರಾದ ವೈಭವಲಕ್ಷ್ಮೀ ಪ್ರಥಮ, ಆನ್ಯ ಜೈನ್ ಕಾರ್ಕಳ ತೃತೀಯ, ಶಾನ್ಯ ಕೋಟ್ಯಾನ್ ಮಂಗಳೂರು, ಉತ್ತಮ ಸ್ಥಾನ ಹಾಗೂ ಅತ್ಯುತ್ತಮ ಸ್ಥಾನ ಪಡೆದ ವಿಜೇತರು ಬಹುಮಾನ ಪಡಕೊಂಡಿದ್ದಾರೆ. ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಏರ್ಪಡಿಸಿದ್ದ ಕಥಾ ಸ್ಪರ್ಧಾ ವಿಜೇತರು ಮತ್ತು ಆಮಂತ್ರಣ ಸ್ಟೇಟಸ್ ಸ್ಪೆಷಲ್ 100 ರ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಹಲವಾರು ಮುದ್ದು ಮಕ್ಕಳ ಭಾವಚಿತ್ರ ತೆಗೆದು ಬಹುಮಾನ ಗಳಿಸಿಕೊಂಡಿರುವ
ಪೊಟೊಗ್ರಾಫರ್ ಕಾರ್ಕಳ ಗುರು ಸ್ಟುಡಿಯೋ ಮಾಲಕರಾದ ಶರತ್ ಕಾನಂಗಿ ಇವರನ್ನು ವರ್ಧಮಾನ್ ಶಿಕ್ಷಣ ಸಂಸ್ಥೆ ಪರವಾಗಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ವರ್ಧಮಾನ್ ಸಂಸ್ಥೆಯ ಕುಮಾರ್ ಹೆಗ್ಡೆ, ಪರಿವಾರದ ರಾಕೇಶ್ ಪೊಳಲಿ, ಸದಾನಂದ ಬಿ.ಕುದ್ಯಾಡಿ, ಪ್ರಕಾಶ್ ಆಚಾರ್ಯ , ಪ್ರಕಾಶ್ ಶೆಟ್ಟಿ ಧರ್ಮಸ್ಥಳ, ರಾಜ್ಯ ಸದಸ್ಯರಾದ ಹೆಚ್ಕೆ ನಯನಾಡು ಉಪಸ್ಥಿತರಿದ್ದರು.

ವರ್ಧಮಾನ್ ಸಂಸ್ಥೆಯ ಶಿಕ್ಷಕಿಯರು ಪ್ರಾರ್ಥಿಸಿದರು, ಸಾಹಿತಿ ಶ್ಯಾಮ್ ಭಟ್ ತೆಳ್ಳಾರು ಸ್ವಾಗತಿಸಿದರು, ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ಪ್ರಸ್ತಾವಿಸಿದರು, ನಿರ್ದೇಶಕ ಚೇತನ್ ಕುಮಾರ್ ಅಮೈ ವಿಜೇತರ ಪಟ್ಟಿ ವಾಚಿಸಿದರು, ಧನ್ಯಶ್ರೀ ಬೆಳಾಲು ಕಾರ್ಯಕ್ರಮ ನಿರೂಪಿಸಿದರು, ಕವಿಯಿತ್ರಿ ಮಾಲತಿ ರಮೇಶ್ ಕೆಮ್ಮಣ್ಣು ಧನ್ಯವಾದ ಸಲ್ಲಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ
ಅಪೇಕ್ಷಾ ಜೈನ್ ಹಾಡಿದರು. ಸಪ್ನಾ ಬನ್ನಡ್ಕ ಭರತನಾಟ್ಯ ಮಾಡಿದರು.

Related posts

ನಡ ಸ.ಪ.ಪೂ. ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya

ಮುಳಿಯದಲ್ಲಿ ಡೈಮಂಡ್ ಫೆಸ್ಟ್ ಗೆ ಚಾಲನೆ : -ವಿಶಿಷ್ಟ ವಿನೂತನ ವಜ್ರಾಭರಣ ಖರೀದಿಗೆ ಸುಮಧುರ ಅವಕಾಶ

Suddi Udaya

ಝೀ ಕನ್ನಡ ದ ಡಾನ್ಸ್ ಕರ್ನಾಟಕ ಡಾನ್ಸ್ ರಿಯಾಲಿಟಿ ಶೋ ಗೆ ಗುರುವಾಯನಕೆರೆಯ ಪ್ರತಿಭೆ ತ್ರಿಷಾ ಆಯ್ಕೆ

Suddi Udaya

ಲಾಯಿಲ: ವಿಶ್ವಮಟ್ಟದ ಸ್ಥಾನಿಕ ಬ್ರಾಹ್ಮಣರ ಸಮಾವೇಶ

Suddi Udaya

ಎಸ್. ಡಿ. ಎಮ್ ಪ.ಪೂ. ಕಾಲೇಜಿನ ಭೌತ ಶಾಸ್ತ್ರ ವಿಭಾಗದ ಸ್ಪೆಕ್ಟ್ರಾ ಅಸೋಸಿಯೇಷನ್ ನ ಕಾರ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭ

Suddi Udaya

ಅಧರ್ಮಿಗಳ ಅಟ್ಟಹಾಸ ಅಂತ್ಯವಾಗಬೇಕು: ಅನಿಲ್ ಕುಮಾರ್ ಯು

Suddi Udaya
error: Content is protected !!