ಕಣಿಯೂರು: ಪಿಲಿಗೂಡು ಹಾ.ಉ.ಸ. ಸಂಘದ ವಾರ್ಷಿಕ ಸಾಮಾನ್ಯ ಸಭೆ: ರೂ.61.79 ಲಕ್ಷ ಲಾಭ, ಶೇ. 25 ಡಿವಿಡೆಂಟ್

Suddi Udaya

ಕಣಿಯೂರು: “ಶ್ವೇತ ಸಮೂಹ” ಪಿಲಿಗೂಡು ಹಾಲು ಉತ್ಪಾದಕರ ಸಹಕಾರಿ ಸಂಘದ 2022-23 ನೇ ವಾರ್ಷಿಕ ಸಾಮಾನ್ಯ ಸಭೆಯು ಸೆ.22 ರಂದು ಸಂಘದ ಸಭಾಭವನದಲ್ಲಿ ಜರಗಿತು.

ಸಂಘದ ಅಧ್ಯಕ್ಷೆ ಶ್ರೀಮತಿ ಕುಸುಮಾವತಿ ಕೆ. ಸಭೆಯ ಅಧ್ಯಕ್ಷತೆ ವಹಿಸಿದರು. ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಭಾರತಿ ಕೆ. ವಾರ್ಷಿಕ ವರದಿ ವಾಚಿಸಿದರು.

2023-24 ನೇ ಸಾಲಿನ ಒಟ್ಟು ವ್ಯವಹಾರ ರೂ. 2,44,03937.12, ಲಾಭ ರೂ. 61,7967.51 ಗಳಿಸಿತು. ಶೇಕಡ 25 ಡಿವಿಡೆಂಟ್. ಹಾಗೂ ರೈತರಿಗೆ 65 ಬೋನಸ್ ನೀಡಲಾಯಿತು.

ದಕ್ಷಿಣ ಕನ್ನಡ ಹಾಲು ಒಕ್ಕೂಟದ ವಿಸ್ತಾರಣಾಧಿಕಾರಿ ರಾಜೇಶ್ ಕಾಮತ್ ಪಿ. ಮಾತನಾಡುತ್ತಾ ಒಕ್ಕೂಟದ ಸದಸ್ಯರಿಗೆ ದೊರೆಯುವ ಅನುದಾನಗಳ ಬಗ್ಗೆ ಮಾಹಿತಿಯನ್ನು ನೀಡಿದರು. ದ.ಕ ಸಹಾಯಕ ವ್ಯವಸ್ಥಾಪಕರು ಬೆಳ್ತಂಗಡಿ ಪಶು ವೈದ್ಯಾಧಿಕಾರಿ ಡಾ. ಗಣಪತಿ ಬಿ. ಎಮ್ ಜಾನುವಾರುಗಳ ಬಗ್ಗೆ ಮಾಹಿತಿ ನೀಡಿದರು . ಸಂಘಕ್ಕೆ ಹೆಚ್ಚು ಹಾಲು ಹಾಕಿದ ಜೊಹರಾಬಿ, ಸುಮಾ ಬಿ ಎಸ್, ಲಕ್ಷ್ಮಿ ಗೌರವಿಸಲಾಯಿತು.
ಎಸ್ ಎಸ್ ಎಲ್ ಸಿ ಮತ್ತು ಪಿಯು ಸಿ ಅತೀ ಹೆಚ್ಚು ಅಂಕ ಗಳಿಸಿದ ಸಂಘದ ವಿದ್ಯಾರ್ಥಿಗಳಿಗೆ ಒಟ್ಟು 6 ಮಂದಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.
ಕ್ರೀಡೆಯಲ್ಲಿ ಸಾಧನೆ ಮಾಡಿದ ಯೂನಿತ್ ಹಾಗೂ ಕರಾಟೆಯಲ್ಲಿ ಸಾಧನೆ ಮಾಡಿದ ಮೊಹಮ್ಮದ್ ಇಲ್ತಿಯಾಜ್ ರವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಸುನಂದ, ಸಂಘದ ನಿರ್ದೇಶಕರಾದ , ಮಮತಾ, ಪ್ರೇಮ, ನಳಿನಿ, ಗಿರಿಜಾ, ಕುಸುಮವತಿ, ರಾಜೀವಿ, ವರಿಜಾ, ಜಾನಕಿ.ಇಂದಿರಾ, ಪ್ರೇಮ. ಸಿ., ಚೈತ್ರ ಎಂ ಜಿ. ಹಾಗೂ ಸದಸ್ಯರು ಭಾಗವಹಿಸಿದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಭಾರತಿ ಕೆ ಸ್ವಾಗತಿಸಿ, ದಿಶಾ ಪ್ರಾರ್ಥಸಿ, ಸಂಘದ ನಿರ್ದೇಶಕರಾದ ಜಾನಕಿ ಕಾರ್ಯಕ್ರಮ ನಿರೂಪಿಸಿ, ಚೈತ್ರ ಯ0.ಜಿ ಧನ್ಯವಾದವಿತ್ತರು.

Leave a Comment

error: Content is protected !!