ಶಿರ್ಲಾಲು: ಸುಲ್ಕೇರಿಮೊಗ್ರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶಿರ್ಲಾಲು ಇದರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ನವೀನ್ ಕೆ ಸಾಮಾನಿ ಇವರ ಅಧ್ಯಕ್ಷತೆಯಲ್ಲಿ ಸಂಘದ ಪ್ರಧಾನ ಕಚೇರಿಯ ನವೋದಯ ಸಭಾ ಭವನದಲ್ಲಿ ಸೆ.24 ರಂದು ನಡೆಯಿತು.
ವರದಿ ಸಾಲಿನಲ್ಲಿ ಸಂಘವು ರೂ.172 ಕೋಟಿ ವಾರ್ಷಿಕ ವ್ಯವಹಾರ ನಡೆಸಿ,ರೂ 87 ಲಕ್ಷ ಲಾಭ ಗಳಿಸಿದೆ, ಸದಸ್ಯರಿಗೆ ಶೇ.4% ಡಿವಿಡೆಂಟ್ ನೀಡಲು ನಿರ್ಣಯಿಸಲಾಗಿದೆ ಎಂದು ಸಂಘದ ಅಧ್ಯಕ್ಷ ನವೀನ್ ಕೆ ಸಾಮಾನಿ ತಿಳಿಸಿದರು.
ವರದಿ ವರ್ಷದಲ್ಲಿ ಸಂಘದ ಪ್ರಧಾನ ಕಚೇರಿಯಲ್ಲಿ ರೂ.169.42ಕೋಟಿ ವಾರ್ಷಿಕ ವ್ಯವಹಾರ ಹಾಗೂ ನಡಿಬೆಟ್ಟು ಶಾಖೆಯಲ್ಲಿ ರೂ.90.77ಲಕ್ಷ ವ್ಯವಹಾರ ಮಾಡಲಾಗಿದೆ ಎಂದರು.
ಸಂಘದ ಪ್ರಗತಿಗೆ ರೈತ ಸದಸ್ಯರು ಚರ್ಚಿಸಿದರು.
ವೇದಿಕೆಯಲ್ಲಿ ನಿರ್ದೇಶಕ ಕೆ. ನಾರಾಯಣ ರಾವ್,ಆನಂದ ಸಾಲಿಯಾನ್, ಸುಮಿತ್ರ ಬಿ ಹೆಗ್ಡೆ, ಮಲ್ಲಿಕಾ ,ಶಿವಪ್ಪ ಪೂಜಾರಿ, ರಾಮ ಬಂಗೇರಾ, ಅಶೋಧರ ಎನ್, ಶೀನಪ್ಪ ಎಂ, ಸುಧೀರ್, ಪಿ.ಯಚ್ ನಿತ್ಯಾನಂದ ಶೆಟ್ಟಿ ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮ್ಮಾಜಿ ಕೋಟ್ಯಾನ್ ಆಡಳಿತ ವರದಿ ಮಂಡಿಸಿದರು. ಸಿಬ್ಬಂದಿ ಶಶಿಕಲಾ ಪ್ರಾರ್ಥನೆ ಹಾಡಿದರು.ನಾರಾಯಣ ರಾವ್ ಸ್ವಾಗತಿಸಿದರು,
ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷ ತಾರನಾಥ ಗೌಡ, ನಿರ್ದೇಶಕಿ ಸುಶೀಲಾ ಹಾಗೂ ಮಾಜಿ ಅಧ್ಯಕ್ಷರು, ರೈತ ಸದಸ್ಯರು ಉಪಸ್ಥಿತರಿದ್ದರು. ಸಹ ವ್ಯವಸ್ಥಾಪಕ ಎನ್.ಪ್ರಭಾಕರ, ಶಾಖಾ ವ್ಯವಸ್ಥಾಪಕ ರಮೇಶ್,ಲೆಕ್ಕಿಗ ರಾಜೇಶ್ ಎನ್, ಗುಮಾಸ್ತ ಮೋಹನ ಗೌಡ, ಜವಾನ ಶುಭಕರ ಸಹಕರಿಸಿದರು.