ಬೆಳ್ತಂಗಡಿ : ಉಪನಿರ್ದೇಶಕರು ಪದವಿಪೂರ್ವ ಕಾಲೇಜು ಮತ್ತು ಬೆಳ್ತಂಗಡಿ ಪದವಿ ಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ ಸೆ. 26 ರಂದು ಬೆಳ್ತಂಗಡಿ ಪದವಿಪೂರ್ವ ಕಾಲೇಜಿನಲ್ಲಿ ಖೋ ಖೋ ಪಂದ್ಯಾವಳಿಯ ಉದ್ಘಾಟನೆಯನ್ನು ನೆರವೇರಿಸುತ್ತಾ ವಿದ್ಯಾರ್ಥಿಗಳು ದೈಹಿಕ ಮತ್ತು ಮಾನಸಿಕ ಒತ್ತಡಗಳನ್ನು ನಿವಾರಿಸಬೇಕಾದರೆ ಕ್ರೀಡೆ ಅತ್ಯಂತ ಅವಶ್ಯಕತೆ ಎಂದು ಹಿರಿಯ ವಿದ್ಯಾರ್ಥಿ, ನಿವೃತ್ತ ಎಸ್. ಪಿ ಪೀತಾಂಬರ ಹೇರಾಜೇಯವರು ತಿಳಿಸಿದರು. ಮುಂದುವರಿಯುತ್ತಾ ಕ್ರೀಡಾಪಟುಗಳಿಗೆ ಉತ್ತಮ ದೈಹಿಕ ಸಾಮರ್ಥ್ಯ ಲಭಿಸಬೇಕಾದರೆ ದೇವರ ಮತ್ತು ತಂದೆ ತಾಯಿಗಳ ಆಶೀರ್ವಾದ ಅಗತ್ಯ ಎಂದು ತಿಳಿಸಿದರು. ಶಿಸ್ತಿನಿಂದ ಜೀವನ ನಡೆಸುತ್ತಾ ಗುರುಗಳ ಬಗ್ಗೆ ಗೌರವದಿಂದ ಇರಬೇಕೆಂದು ಅವರು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಬೆಳ್ತಂಗಡಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸುಕುಮಾರ ಜೈನ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರೊನಾಲ್ಡ್ ಲೋಬೊ, ತ್ರೀವಿಕ್ರಂ ಹೆಬ್ಬಾರ್, ಪದ್ಮ ಕುಮಾರ್ ಆಗಮಿಸಿದ್ದು, ಬೆಳ್ತಂಗಡಿ ತಾಲೂಕಿನ ಏಳು ಪದವಿ ಪೂರ್ವ ಕಾಲೇಜುಗಳಿಂದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.
ಗಣಿತ ಶಾಸ್ತ್ರ ಉಪನ್ಯಾಸಕ ಮೋಹನ ಭಟ್ ಸ್ವಾಗತಿಸಿದರು. ಭೌತಶಾಸ್ತ್ರ ವಿಭಾಗದ ಶ್ರೀಮತಿ ವಿಶಾಲಾಕ್ಷಿ ಧನ್ಯವಾದವಿತ್ತರು. ಡಾ. ರಾಮಚಂದ್ರ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು.