23.6 C
ಪುತ್ತೂರು, ಬೆಳ್ತಂಗಡಿ
May 21, 2025
ಪ್ರಮುಖ ಸುದ್ದಿ

ಸಿದ್ದಕಟ್ಟೆ ಮಹಿಳೆ ಕಳೆದುಕೊಂಡ ಹಣವಿದ್ದ ಬ್ಯಾಗ್ ನ್ನು ಹಿಂತಿರುಗಿಸಿದ ಗರ್ಡಾಡಿ ಯುವಕ ವರುಣ್ ಪೂಜಾರಿ: ಯುವಕನ ಕಾರ್ಯಕ್ಕೆ ಶಾಸಕ ಹರೀಶ್ ಪೂಂಜಾರಿಂದ ಅಭಿನಂದನೆ

ಬೆಳ್ತಂಗಡಿ : ಇತ್ತೀಚೆಗೆ ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ಸಮೀಪದ ನಯರಾ ಪೆಟ್ರೋಲ್ ಪಂಪ್ ಬಳಿ ಅದೇ ಊರಿನ ಮಹಿಳೆ ಪದ್ಮಾವತಿ ಎಂಬವರ ಒಂದು ಲಕ್ಷ ರೂಪಾಯಿ ಹಣ ಹಾಗೂ ಅನೇಕ ಅಗತ್ಯ ದಾಖಲೆಗಳಿದ್ದ ಬ್ಯಾಗ್ ಬೆಳ್ತಂಗಡಿ ತಾಲೂಕು ಗರ್ಡಾಡಿ ಯುವಕ ವರುಣ್ ಎಂಬವರು ಸಿದ್ದಕ್ಕಟೆ ಬಳಿ ಪ್ರಯಾಣಿಸುವಾಗ ಸಿಕ್ಕಿರುವ ಬಗ್ಗೆ ವರದಿಯಾಗಿದೆ.
ಕೂಡಲೇ ಕಾರ್ಯಪ್ರವೃತರಾಗಿ ಬ್ಯಾಗ್ ನಲ್ಲಿದ್ದ ದಾಖಲೆ ಪರಿಶೀಲಿಸಿ ತಕ್ಷಣವೇ ದೂರವಾಣಿ ಮೂಲಕ ಸಂಪರ್ಕ ಮಾಡಿ ಬ್ಯಾಗ್ ಕಳೆದುಕೊಂಡ ಮಹಿಳೆಗೆ ದಾಖಲೆ,ಹಣದ ಜೊತೆಗೆ ಬ್ಯಾಗ್ ಹಿಂತಿರುಗಿಸಿ ವರುಣ್ ರವರು ಮಾನವೀಯತೆ ಮೆರೆದಿದ್ದಾರೆ.
ಇತ್ತೀಚೆಗೆ ಪ್ರಧಾನಿ ಮೋದಿ ಹುಟ್ಟುಹಬ್ಬದ ಸಲುವಾಗಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಬೆಳ್ತಂಗಡಿ ಯುವಮೋರ್ಚಾದ ವತಿಯಿಂದ ಭಾಗವಹಿಸಿ ರಕ್ತದಾನ ಮಾಡುವ ಮೂಲಕ ಸಾಮಾಜಿಕ ಕಾರ್ಯದಲ್ಲೂ ನಿರತರಾಗಿದ್ದಾರೆ ವರುಣ್.
ಬೆಳ್ತಂಗಡಿ ಶಾಸಕ ಹರೀಶ್ ಪೂoಜ ರವರು ಈ ಮಹಾನ್ ಕಾರ್ಯಕ್ಕೆ ವರುಣ್ ಅವರಿಗೆ ಅಭಿನಂದನೆ ಸಲ್ಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಎಲ್ಲರಿಂದಲೂ ಪ್ರಶಂಸೆ ವ್ಯಕ್ತವಾಗುತ್ತಿದೆ.

Related posts

ಎಕ್ಸೆಲ್ ನಿಂದ ಗುರುವಾಯನಕೆರೆ ಸರ್ಕಾರಿ ಶಾಲೆಗೆ ಪೀಠೋಪರಣಗಳ ಖರೀದಿಗೆ ಲಕ್ಷ ಮೊತ್ತದ ಚೆಕ್ ಹಸ್ತಾಂತರ

Suddi Udaya

ಬೆಳ್ತಂಗಡಿ ವರ್ತಕರ ಸಂಘದಿಂದ ರಸ್ತೆ ನಿರ್ಮಾಣದ ಬಗ್ಗೆ ಚರ್ಚಿಸಲು ಡಾ. ಡಿ ವೀರೇಂದ್ರ ಹೆಗ್ಗಡೆಯವರ ಭೇಟಿ

Suddi Udaya

ಉಜಿರೆಯಲ್ಲಿ ಚುನಾವಣಾ ಪ್ರಚಾರದ ಅಂಗವಾಗಿ ಅಸ್ಸಾಂ ಮುಖ್ಯಮಂತ್ರಿ ಡಾ. ಹಿಮಂತ್ ಬಿಸ್ವಾಸ್ ಶರ್ಮ ಬೃಹತ್ ರೋಡ್ ಶೋ: ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಪರ ಮತ ಪ್ರಚಾರ

Suddi Udaya

ಮಾಜಿ ಸಿಎಂ, ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ನಿಧನ

Suddi Udaya

ಬೆಳ್ತಂಗಡಿ : ಹುಂಜದ ಹೊಟ್ಟೆಯೊಳಗಿದ್ದ ಗುಂಡು ಪಿನ್: ಪದಾರ್ಥ ಮಾಡಿ ಊಟ ಮಾಡುವ ವೇಳೆ ಕೈಗೆ ಸಿಕ್ಕಿ ವ್ಯಕ್ತಿ ಪ್ರಾಣಾಪಾಯದಿಂದ ಪಾರು

Suddi Udaya

ಕಲ್ಲೇರಿಯಲ್ಲಿ “ಕಲ್ಲೇರಿ ವೆಲ್‌ನೆಸ್ ಸೆಂಟರ್”ನ ಶುಭಾರಂಭ

Suddi Udaya
error: Content is protected !!