23.7 C
ಪುತ್ತೂರು, ಬೆಳ್ತಂಗಡಿ
May 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಉಜಿರೆ: ಶ್ರೀ ಧ.ಮಂ. ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಜೀವನ ಕೌಶಲ್ಯ ಕಾರ್ಯಾಗಾರ

ಉಜಿರೆ : ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಕರ ತರಬೇತಿ( ಡಿ .ಇಎ ಲ್. ಇಡಿ) ಸಂಸ್ಥೆಯಲ್ಲಿ ಜೀವನ ಕೌಶಲ್ಯ ಕಾರ್ಯಾಗಾರ ಸೆ-26 ರಂದು ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಎಸ್. ಡಿ .ಎಮ್. ಸನಿವಾಸ ಕಾಲೇಜಿನ ಪ್ರಾಂಶುಪಾಲ ಸುನಿಲ್ ಪಂಡಿತ್ ಮಾತನಾಡುತ್ತಾ ಜೀವನ ಕೌಶಲಗಳು ಮಾನವನ ಜೀವನದಲ್ಲಿ ಅತ್ಯಂತ ಮಹತ್ವದ್ದಾಗಿರುತ್ತವೆ. ಅವು ನಮ್ಮ ಸಾಮರ್ಥ್ಯವನ್ನು ಹೆಚ್ಚಿಸುವುದರೊಂದಿಗೆ ಸಂಬಂಧಗಳನ್ನು ಬೆಳೆಸುತ್ತವೆ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯಗಳನ್ನು ನೀಡುತ್ತವೆ. ಹಾಗಾಗಿ ಜೀವನ ಕೌಶಲ್ಯಗಳು ಮಾನವನ ವ್ಯಕ್ತಿತ್ವದ ಮೇಲೆ ಪ್ರಭಾವವನ್ನು ಬೀರುತ್ತದೆ. ಸಹಕಾರ, ಸಾಮರ್ಥ್ಯ, ಸಹನೆ, ಸಂಘಟನೆ, ಸ್ವ ಅಧ್ಯಾಯ ಈ ಎಲ್ಲಾ ಗುಣಗಳು ಜೀವನದ ಕ್ಷೇತ್ರಗಳಲ್ಲಿ ಪ್ರಮುಖವಾಗಿವೆ ಹಾಗಾಗಿ ಶಿಕ್ಷಕರಾದ ನೀವು ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಂಡು ಮಕ್ಕಳಿಗೆ ಮಾದರಿ ಶಿಕ್ಷಕರಾಗಿ ಎಂದು ಶುಭ ಹಾರೈಸಿದರು.

ವಿದ್ಯಾರ್ಥಿಗಳಿಗೆ ಕಾರ್ಯಾಗಾರದಲ್ಲಿ ಹಲವಾರು ಪ್ರಾಯೋಗಿಕ ಚಟುವಟಿಕೆಗಳನ್ನು ಮಾಡಿಸಲಾಯಿತು.

ಪ್ರಾಂಶುಪಾಲರಾದ ಸ್ವಾಮಿ ಕೆ. ಎ. ಅಧ್ಯಕ್ಷತೆಯನ್ನು ವಹಿಸಿ ವ್ಯಕ್ತಿಯು ಜೀವನ ಕೌಶಲ್ಯ ಅಥವಾ ಮಾನಸಿಕ ಸಾಮರ್ಥ್ಯದ ಸಹಾಯದಿಂದ ಕಷ್ಟಕರವಾದ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಕಲಿಯಬಹುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಮಂಜು ಆರ್, ಪ್ರಿಯದರ್ಶಿನಿ. ಸಿಬ್ಬಂದಿ ವರ್ಗದವರು ಮತ್ತು ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

ಪ್ರಶಿಕ್ಷಣಾರ್ಥಿಗಳಾದ ಅಂಬಿಕಾ ಮತ್ತು ಅನುಷಾ ಪ್ರಾರ್ಥಿಸಿ, ಅನುಷಾ ಸ್ವಾಗತಿಸಿ, ಮುಝೈನಾ ವಂದಿಸಿ, ಫಾತಿಮಾ ಕಾರ್ಯಕ್ರಮ ನಿರೂಪಿಸಿದರು.

Related posts

ಅಥ್ಲೆಟಿಕ್ಸ್ ಕ್ರೀಡಾಕೂಟ: ಮೂಡಬಿದಿರೆ ದಿಗಂಬರ ಜೈನ ಆಂ.ಮಾ. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಮೋಹನ ಪೂಜಾರಿ ಮರೋಡಿ ರವರು ರಾಜ್ಯ ಮಟ್ಟಕ್ಕೆ ಆಯ್ಕೆ

Suddi Udaya

ಸಾವ್ಯ: ಮರದಿಂದ ಬಿದ್ದ ವ್ಯಕ್ತಿ; ಚಿಕಿತ್ಸೆ ಫಲಕಾರಿಯಾಗದೆ ಸಾವು

Suddi Udaya

ಕಳಿಯ ಗ್ರಾ.ಪಂ. ಗ್ರಾಮ ಸಭೆ : ಲೋಕೋಪಯೋಗಿ ಇಲಾಖೆಯವರು ಬರುವ ತನಕ ನಿಲ್ಲುತೇವೆ: ಕೇಶವ ಪೂಜಾರಿ

Suddi Udaya

ಮಧ್ವ ಯಕ್ಷಕೂಟ ಮಡಂತ್ಯಾರು ವಲಯ ಸಮಿತಿ ಉದ್ಘಾಟನೆ: ಶ್ರೀ ಕೃಷ್ಣ ಸಂಧಾನ ಯಕ್ಷಗಾನ ತಾಳಮದ್ದಳೆ

Suddi Udaya

ಸೆ.13, 14 : ವಾಣಿ ಕಾಲೇಜಿನಲ್ಲಿ ತುಳು ಸಾಹಿತ್ಯ ರಚನಾ ಕಮ್ಮಟ

Suddi Udaya

ಪ್ರವೀಣ್ ನೆಟ್ಟಾರು ಮನೆಗೆ ಹರೀಶ್ ಪೂಂಜ ಭೇಟಿ

Suddi Udaya
error: Content is protected !!