24.7 C
ಪುತ್ತೂರು, ಬೆಳ್ತಂಗಡಿ
May 18, 2025
Uncategorized

ಬೆಳ್ತಂಗಡಿ ವಿದಾನಸಭಾ ಕ್ಷೇತ್ರದ ಮಹಿಳಾ ಸದಸ್ಯತ್ವ ನೋಂದಾವಣಾ ಅಭಿಯಾನ ಕಾರ್ಯಕ್ರಮ

ಬೆಳ್ತಂಗಡಿ :ಅಖಿಲ ಭಾರತ ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ನ ಸೂಚನೆಯಂತೆ ಬೆಳ್ತಂಗಡಿ ವಿದಾನಸಭಾ ಕ್ಷೇತ್ರದ ಮಹಿಳಾ ಸದಸ್ಯತ್ವ ನೋಂದಾವಣಾ ಅಭಿಯಾನ ಕಾರ್ಯಕ್ರಮವು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ ನಗರ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ವಂದನಾ ಭಂಡಾರಿ ಅಂಡಿಂಜೆಯವರ ಅಧ್ಯಕ್ಷತೆಯಲ್ಲಿ ಜರಗಿತು.
ಸದಸ್ಯತ್ವ ನೋಂದಾವಣೆ ಬಗ್ಗೆ ಸಭೆಯಲ್ಲಿ ಸವಿವರವಾಗಿ ತಿಳಿಸಿದರು.ಮುಂದಿನ ದಿನಗಳಲ್ಲಿ ಮನೆ ಮನೆ ಬೇಟಿ ಮಾಡಿ ಮಹಿಳಾ ಸದಸ್ಯತ್ವ ನೋಂದಾವಣೆಯನ್ನು ಮಹಿಳಾ ಕಾಂಗ್ರೆಸ್ ವತಿಯಿಂದ ನಡೆಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಮಹಿಳಾ ಸದಸ್ಯರನ್ನು ಸದಸ್ಯತ್ವ ನೋಂದಾವಣೆ ಮಾಡಲಾಯಿತು.
ಈ ಸಭೆಯಲ್ಲಿ ಮಹಿಳಾ ಕಾಂಗ್ರೆಸ್ ನ ಶ್ರೀಮತಿ ಉಷಾ ಶರತ್,ಶ್ರೀಮತಿ ಸೌಮ್ಯ ಲಾಯಿಲಾ ,ಶ್ರೀಮತಿ ಮರೀಟಾ ಪಿಂಟೋ,ಶ್ರೀಮತಿ ಸವಿತ ಸುಲ್ಕೇರಿ,ಶ್ರೀಮತಿ ವಸಂತಿ ಜೆ ಆಚಾರಿ, ಶ್ರೀಮತಿ ಜಯಶೀಲ,ಶ್ರೀಮತಿ ಜಯಲಕ್ಷ್ಮಿ,ಶ್ರೀಮತಿ ಮಧುರಾ, ಶ್ರೀಮತಿ ಸುಪ್ರಿಯಾ ಮತ್ತು ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.

Related posts

ನಾವೂರು ಗ್ರಾ.ಪಂ. ಕಾಯಿದೆ ಮತ್ತು ಮಕ್ಕಳ ಹಕ್ಕುಗಳ ಭಿತ್ತಿಪತ್ರ ಬಿಡುಗಡೆ

Suddi Udaya

ಪ್ರಾಜೆಕ್ಟ್ ಡಿಸೈನ್ ವಿಭಾಗದಲ್ಲಿ ಎಕ್ಸ್ ಪ್ರೋ 201 ಅವಾರ್ಡ್, ವಾರಾಣಸಿ ಸುಬ್ರಾಯ ಭಟ್ ಅವಾರ್ಡ್, ಪ್ರೋಡೆಕ್ಟ್ ಇಂಜಿನಿಯರ್ ಅವಾರ್ಡ್ ಪಡೆದ ಅಜಿತ್ ಕುಮಾರ್ ತೆಂಕಕಾರಂದೂರು

Suddi Udaya

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮಹಾಶಕ್ತಿ ಕೇಂದ್ರ ವ್ಯಾಪ್ತಿಯಲ್ಲಿ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರ ಕಾರ್ಯಕರ್ತರ ಜೊತೆ ಸಂವಾದ ಕಾರ್ಯಕ್ರಮದ ವೀಕ್ಷಣೆ

Suddi Udaya

ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್‌ನಿಂದ ವಿವಿಧ ರೀತಿಯಲ್ಲಿ ಸಹಕರಿಸಿದ ಮಹನೀಯರಿಗೆ ಸನ್ಮಾನ

Suddi Udaya

ಉಜಿರೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ ನೇತೃತ್ವದಲ್ಲಿ ಬೃಹತ್ ರಕ್ತದಾನ ಶಿಬಿರ

Suddi Udaya

ಎಸ್.ಡಿ.ಎಂ ಬಿ.ಎಡ್ ಕಾಲೇಜು ವಾರ್ಷಿಕೋತ್ಸವ

Suddi Udaya
error: Content is protected !!