ಬೆಳ್ತಂಗಡಿ: ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ ಬೆಳ್ತಂಗಡಿ ತಾಲೂಕು ಮತ್ತು ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು ಮತ್ತು ಶ್ರೀದೇವಿ ಅಪ್ಪಿಕಲ್ಸ್ ಬೆಳ್ತಂಗಡಿ ಇದರ ಸಂಯುಕ್ತ ಆಶ್ರಯದಲ್ಲಿ ರಾಜಕೇಸರಿ ಸಂಘಟನೆಯ ಸಂಸ್ಥಾಪಕ ದೀಪಕ್ ಜಿ. ಬೆಳ್ತಂಗಡಿ ಇವರ ನೇತೃತ್ವದಲ್ಲಿ ೫೫೧ನೇ ಬೃಹತ್ ಉಚಿತ ನೇತ್ರ ತಪಾಸಣೆ ಶಿಬಿರವು ದ.ಕ.ಜಿ.ಹಿ ಪ್ರಾಥಮಿಕ ಮುಗುಳಿ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜಕೇಸರಿ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಸಂದೀಪ್ ಬೆಳ್ತಂಗಡಿಯ ವಹಿಸಿಕೊಂಡಿದ್ದರು.
ರಾಜಕೇಸರಿ ಜಿಲ್ಲಾಧ್ಯಕ್ಷ ಸಂತೋಷ್ ಕೊಲ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ರಾಜಕೇಸರಿ ಸಂಘಟನೆಯ ಸಂಸ್ಥಾಪಕ ದೀಪಕ್ ಜಿ ಬೆಳ್ತಂಗಡಿ ಇವರ ನೇತೃತ್ವದಲ್ಲಿ ದಕ್ಷಿಣ ಜಿಲ್ಲಾದಾದ್ಯಂತ ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ದೊಡ್ಡ ಉತ್ಸಾಹದೊಂದಿಗೆ ಮಾಡಲು ನಾವು ನಿಮ್ಮ ಜೊತೆ ತಯಾರಿದ್ದೇವೆ ಎಂದು ತಿಳಿಸಿದರು.
ಮುಗಳಿ ನಾರಾಯಣರಾವ್ ರಾಜಕೇಸರಿ ಸಂಘಟನೆಯು ತಾಲೂಕು ಅಲ್ಲದೆ ರಾಜ್ಯಾದ್ಯಂತ ನನ್ನ ನಿಸ್ವಾರ್ಥ ಸೇವೆ ಮೂಲಕ ರಾಜ್ಯದಲ್ಲಿ ಮನೆ ಮಾತಾಗಿದೆ. ಇನ್ನು ಮುಂದಕ್ಕೆ ದೇಶಾದ್ಯಂತ ತನ್ನ ಸಂಘಟನೆಯನ್ನು ವಿಸ್ತರಿಸಿರಿ ಬೆಳ್ತಂಗಡಿ ತಾಲೂಕಿಗೆ ಹೆಸರು ತಂದು ಕೊಡುವಂತಾಗಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಶ್ರೀಮತಿ ಮಂಜುಳಾ ಮಾಲಕರು ಶ್ರೀದೇವಿ ಅಪ್ಪಿಕಲ್ಸ್ ಸಂತೆಕಟ್ಟೆ, ಕರುಣಾಕರ ಬಂಗೇರ ಅಧ್ಯಕ್ಷರು ಜೆಪಿ ಅಟ್ಟಾಕರ್ಸ್ ಬುಟ್ಟುಗುಡ್ಡೆ, ಲೂಸಿ ಲೀನಾ ಮೋರಸ್ ಮುಖ್ಯೋಪಾಧ್ಯಾಯರು ಮುಗುಳಿ ಶಾಲೆ, ಪ್ರಸಾದ್ ಕುಲಾಲ್ ಜಿಲ್ಲಾ ಸಂಚಾಲಕರು ರಾಜಕೇಸರಿ, ಹರೀಶ್ ಕುಮಾರ್ ಶೆಟ್ಟಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಾಜಕೇಸರಿ, ಗೌತಮ್ ಪೂಜಾರಿ ನೆಲ್ಲಿಗುಡ್ಡೆ ಅಧ್ಯಕ್ಷರು ಬಂಟ್ವಾಳ ತಾಲೂಕು ರಾಜಕೇಸರಿ, ರಮೇಶ್ ನಾಯ್ಕ್ ಕಳಮೆ ಸಂಚಾಲಕರು ರಾಜಕೇಸರಿ ಬಂಟ್ವಾಳ ತಾಲೂಕು, ದೇವರಾಜ್ ಮಾಲಕರು ಕೆ.ಸಿ. ಬೆಳ್ತಂಗಡಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನೂರಕ್ಕಿಂತ ಅಧಿಕ ಶಿಬಿರಾರ್ಥಿಗಳು ಪಾಲ್ಗೊಂಡು ಉಚಿತ ನೇತ್ರ ತಪಾಸಣೆ ಶಿಬಿರದ ಪ್ರಾಯೋಜತಕವನ್ನು ಪಡೆದುಕೊಂಡರು.
ಸಂತೋಷ್ ಉಜಿರೆ ಕಾರ್ಯಕ್ರಮ ನಿರೂಪಿಸಿದರು. ಪ್ರಶಾಂತ್ ಗುರುವಾಯನಕೆರೆ ಸ್ವಾಗತಿಸಿದರು. ಸಂದೀಪ್ ಬೆಳ್ತಂಗಡಿ ವಂದಿಸಿದರು