ಲಾಯಿಲ: ಎಎ ಅಕಾಡೆಮಿ ದಾವಣಗೆರೆ ಸಹಯೋಗದೊಂದಿಗೆ ಲಾಯಿಲ ಪ್ರಸನ್ನ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ತರಬೇತಿಯನ್ನು ಜೆಸಿಐ ಇಂಡಿಯಾದ ರಾಷ್ಟ್ರೀಯ ತರಬೇತುದಾರ ಜೇಸಿ ದೀಪಕ್‌ರಾಜ್ ನಡೆಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಎ ಅಕಾಡೆಮಿಯ ಆಡಳಿತ ನಿರ್ದೇಶಕ ಅಣ್ಣೇಶ್ ಕೆ.ಹೆಚ್ ರವರು ವಹಿಸಿದ್ದರು.

ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಕೃಪಾ ಆರ್. ಉಪಸ್ಥಿತರಿದ್ದರು.
ಉಪನ್ಯಾಸಕರಾದ ಲಕ್ಷ್ಮೀ, ವಿದ್ಯಾ, ದೀಕ್ಷಿತ್ ಇಂದ್ರ, ಲಕ್ಷ್ಮಣ್ ಆಕಾಶೆ, ಧನುಷ್, ಸಿಬ್ಬಂದಿ ವರ್ಗ ಸ್ವಾತಿ, ಚೈತ್ರ, ದೀಕ್ಷಾ ಸಹಕರಿಸಿದರು.
ವಿದ್ಯಾರ್ಥಿನಿಯರಾದ ರಶ್ಮಿತ ಮತ್ತು ಹೇಮಾವತಿ ಪ್ರಾರ್ಥಿಸಿದರು. ಉಪನ್ಯಾಸಕಿಯರಾದ ಸುಶ್ಮಿತಾ ಸ್ವಾಗತಿಸಿ, ಗೀತಾ ಧನ್ಯವಾದವಿತ್ತರು. ಅಶ್ವಿನಿ ಕುಮಾರಿ ಅತಿಥಿ ಪರಿಚಯ ಮಾಡಿದರು. ಉಪನ್ಯಾಸಕಿ ಹೇಮಾವತಿ ಕೆ. ಕಾರ್ಯಕ್ರಮ ನಿರೂಪಿಸಿದರು.