23.9 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಪಿನಾಕಲ್ ಅಂತರ್ ಕಾಲೇಜು ಸ್ಪರ್ಧೆಗಳಲ್ಲಿ ಎಸ್ ಡಿ ಎಂ ಪದವಿಪೂರ್ವ ಕಾಲೇಜಿಗೆ ಸಮಗ್ರ ದ್ವಿತೀಯ ಬಹುಮಾನ

ಉಜಿರೆಯ ಎಸ್‌ಡಿಎಂ ಪಿಯು ಕಾಲೇಜಿನ ವಾಣಿಜ್ಯಶಾಸ್ತ್ರ ವಿದ್ಯಾರ್ಥಿಗಳು ಉಜಿರೆಯ ಎಸ್‌ಡಿಎಂ ಸ್ವಾಯತ್ತ ಕಾಲೇಜು ಆಯೋಜಿಸಿದ್ದ ಪ್ರತಿಷ್ಠಿತ ಪಿನಾಕಲ್ ಉತ್ಸವದ ಅಂತರ್ ಕಾಲೇಜು ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ಸ್ಪರ್ಧೆಗಳಲ್ಲಿ ಎಸ್ ಡಿ ಎಂ ಪದವಿಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಸಮಗ್ರ ದ್ವಿತೀಯ ಬಹುಮಾನವನ್ನು ಪಡೆದರು.

ಕಾರ್ಯಕ್ರಮ ನಿರ್ವಹಣೆಯ ಸ್ಪರ್ಧೆಯಲ್ಲಿ ಅನಂತಕೃಷ್ಣ ಮತ್ತು ಅಕ್ಷಯ್ ಅವರು ಪ್ರಥಮ , ಅನಾರ್ಕಲಿ ನೃತ್ಯ ಸ್ಪರ್ಧೆಯಲ್ಲಿ
ಪ್ರಿಯದರ್ಶಿನಿ ಮತ್ತು ತಂಡ ಪ್ರಥಮ , ಜಾಹೀರಾತು ಸ್ಪರ್ಧೆಯಲ್ಲಿ ವಿಬಿನ್ ಮತ್ತು ತಂಡ ಪ್ರಥಮ ಮತ್ತು ಪಾರ್ಥ್ ಮತ್ತು ತಂಡಕ್ಕೆ ದ್ವಿತೀಯ , ಮಾನವ ಸಂಪನ್ಮೂಲ ನಿರ್ವಹಣೆ ಸ್ಪರ್ಧೆಯಲ್ಲಿ ರೋಹಿತ್ ಮತ್ತು ತಂಡವು ಎರಡನೇ ಬಹುಮಾನವನ್ನು ಪಡೆಯಿತು.

ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಬೇಬಿ ಎನ್ ಹಾಗೂ ಉಪನ್ಯಾಸಕಿಯರಾದ ಸವಿತಾ, ಪ್ರಭಾವತಿ, ಶೋಭಾ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು.
ಪ್ರಾಂಶುಪಾಲರಾದ ಪ್ರಮೋದ್ ಕುಮಾರ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

Related posts

ಕಸ್ತೂರಿ ರಂಗನ್ ವರದಿ ವಿರೋಧಿಸಿ ಶಿಬಾಜೆ ಗ್ರಾ.ಪಂ ನಲ್ಲಿ ಪ್ರತಿಭಟನೆ : ಸರಕಾರಕ್ಕೆ ಮನವಿ

Suddi Udaya

ಮಡಂತ್ಯಾರು ಮಂಜಲ್ ಪಲ್ಕೆಯಲ್ಲಿ ತೆರೆದ ಕೊಳವೆ ಬಾವಿಯನ್ನು ಮುಚ್ಚಿಸಿದ ಮಡಂತ್ಯಾರು ಗ್ರಾ.ಪಂ.

Suddi Udaya

ಸೆ.25 ರಿಂದ ಬೆಳ್ತಂಗಡಿ ಜೈನ್ ಮೊಬೈಲ್ ಹಾಗೂ ನ್ಯೂ ಜೈನ್ ಮೊಬೈಲ್ ನಲ್ಲಿ ಹಬ್ಬದ ಆಫರ್ : ಆಯ್ದ ಬ್ರಾಂಡೆಡ್ ಮೊಬೈಲ್ ಗಳ ಮೇಲೆ ಭರ್ಜರಿ ದರ ಕಡಿತ ಮಾರಾಟ

Suddi Udaya

5, 8, 9 ಮತ್ತು 11ನೇ ತರಗತಿಗಳ ಬೋರ್ಡ್ ಮಟ್ಟದ ಮೌಲ್ಯಾಂಕನ ಪರೀಕ್ಷೆ ನಡೆಸಲು ಹೈಕೋರ್ಟ್ ಆದೇಶ

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಉಚಿತ ವೀಲ್ ಚೇರ್ ವಿತರಣೆ

Suddi Udaya

ಎನ್.ಎಂ.ಎಂ.ಎಸ್ ವಿದ್ಯಾರ್ಥಿ ವೇತನ ಪರೀಕ್ಷೆ: ಹೊಕ್ಕಾಡಿಗೋಳಿ ಸ.ಉ.ಪ್ರಾ ಶಾಲೆಯ ವಿದ್ಯಾರ್ಥಿ ರೈಶಾ ಸುಹಾನ ರಿಗೆ ಉತ್ತಮ ಅಂಕ

Suddi Udaya
error: Content is protected !!