September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಗಂಡಿಬಾಗಿಲು ಸಿಯೋನ್ ಆಶ್ರಮ : ಗಾಂಧಿ ಜಯಂತಿ ಹಾಗೂ ಹಿರಿಯ ನಾಗರಿಕರ ದಿನಾಚರಣೆ

ಗಂಡಿಬಾಗಿಲು : ಸಿಯೋನ್ ಆಶ್ರಮ ಟ್ರಸ್ಟ್ ಗಂಡಿಬಾಗಿಲು ಇಲ್ಲಿ ಅ.02 ರಂದು ಗಾಂಧಿ ಜಯಂತಿ ಹಾಗೂ ಹಿರಿಯ ನಾಗರಿಕರ ದಿನಾಚರಣೆಯನ್ನು ಜಂಟಿಯಾಗಿ ಹಮ್ಮಿಕೊಳ್ಳಲಾಗಿತ್ತು. ರಾಷ್ಟ್ರಪಿತ ಗಾಂಧೀಜಿಯವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು. ಸಭೆಯ ಅಧ್ಯಕ್ಷಸ್ಥಾನವನ್ನಲಂಕರಿಸಿದ್ದ ಸಿಯೋನ್ ಆಶ್ರಮದ ಮ್ಯಾನೇಜಿಂಗ್ ಟ್ರಸ್ಟಿ ಡಾ.ಯು.ಸಿ.ಪೌಲೋಸ್ರವರು ಮಾತನಾಡಿ, ಗಾಂಧೀಜಿಯವರು ಶಾಂತಿ-ಅಹಿಂಸೆಗಳ ಹರಿಕಾರ, ಸತ್ಯದ ಸರದಾರ. ನಮ್ಮ ರಾಷ್ಟ್ರಪಿತರ ಬದುಕು, ಬೋಧನೆ, ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.

ಸಿಯೋನ್ ಅಶ್ರಮದಲ್ಲಿ ಹಿರಿಯ ನಾಗರಿಕರ ದಿನಾಚರಣೆಯನ್ನು ಆಚರಿಸುವ ಪ್ರಾಮುಖ್ಯತೆ ಬಗ್ಗೆ ವಿವರಿಸಿದರು. ಹಿರಿಯರನ್ನು ಗೌರವಿಸಿ, ನೆಮ್ಮದಿಯ ಬದುಕು ಕಲ್ಪಿಸಿಕೊಡುವುದರಿಂದ ಮಾನವ ಜನ್ಮ ಸಾರ್ಥಕವಾಗಿಸಬಹುದೆಂದರು ಹಾಗೂ ಸಿಯೋನ್ ಆಶ್ರಮದಲ್ಲಿ ಯಾವುದೇ ಜಾತಿ-ಮತ, ಬೇಧ-ಭಾವವಿಲ್ಲದೇ ಬೇರೆ ಬೇರೆ ಧರ್ಮದ ಮೂವರು ಹಿರಿಯ ನಾಗರಿಕರನ್ನು ಗುರುತಿಸಿ, ಪ್ರತಿ ವರ್ಷ ಸನ್ಮಾನಿಸಲಾಗುವುದೆಂದು ತಿಳಿಸಿದರು.

ಬೆಳ್ತಂಗಡಿ ತಾಲೂಕಿನ ಹಿರಿಯ ನಾಗರಿಕರಾದ ಮಾಲಾಡಿ ಗ್ರಾಮದ ಕೋಡಿಯೇಲು ಬಸವನಗುಡಿ ಎಂಬಲ್ಲಿ ವಾಸವಾಗಿರುವ ಪದ್ಮನಾಭ ಸಾಲಿಯಾನ್, ಮೇಲಂತಬೆಟ್ಟು ಗ್ರಾಮದ ಕಲ್ಕಣಿಬೈಲು ಎಂಬಲ್ಲಿ ವಾಸವಾಗಿರುವ ಫೆಲಿಸಿಟಾಸ್ ಮೊರಿಸ್, ಚಾರ್ಮಾಡಿ ಗ್ರಾಮದ ಗೋಳಿಕಟ್ಟೆ ಎಂಬಲ್ಲಿ ವಾಸವಾಗಿರುವ ಹಸನಬ್ಬ ಇವರುಗಳನ್ನು ಪ್ರಮಾಣ ಪತ್ರ, ಫಲಪುಷ್ಪಗಳೊಂದಿಗೆ, ಪೇಟಾ ಶಾಲು ಹೊದಿಸಿ ಸನ್ಮಾನಿಸಲಾಯಿತು. ಸನ್ಮಾನಿಸಲ್ಪಟ್ಟ ಹಿರಿಯ ನಾಗರಿಕರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು. ಟ್ರಸ್ಟೀ ಸದಸ್ಯರಾದ ಶ್ರೀಮತಿ ಮೇರಿ ಯು.ಪಿ.ಯವರು, ಸಂಸ್ಥೆಯ ವೈದ್ಯರಾದ ಶಿವಾನಂದ ಸ್ವಾಮಿಯವರು ಹಾಗೂ ಆಶ್ರಮನಿವಾಸಿಗಳಾದ ರಾಮಚಂದ್ರ ಭಂಡಾರಿ ಮತ್ತು ಗೀತಾಕಾಮತ್ರವರು ಉಪಸ್ಥಿತರಿದ್ದರು.

ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ಸೆ.10 ರಂದು ಮಂಗಳೂರಿನಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಹಿರಿಯ ನಾಗರಿಕರ ಕ್ರೀಡಾಕೂಟದಲ್ಲಿ ಸಿಯೋನ್ ಆಶ್ರಮದ 6ಮಂದಿ ಫಲಾನುಭವಿಗಳು ಭಾಗವಹಿಸಿ ವಿಜೇತರಾಗಿದ್ದು, ಬಹುಮಾನ ನೀಡಿ ಸನ್ಮಾನಿಸಲಾಯಿತು ಹಾಗೂ ಸಿಯೋನ್ ಆಶ್ರಮದಲ್ಲಿ ಹಿರಿಯ ನಾಗರಿಕ ನಿವಾಸಿಗಳಿಗೆ ಒಳಾಂಗಣ ಆಟಗಳನ್ನು ಏರ್ಪಡಿಸಲಾಗಿದ್ದು, ಇದರಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಿಯೋನ್ ಆಶ್ರಮದ ಆಡಳಿತಮಂಡಳಿಯವರು, ಸಿಬ್ಬಂದಿವರ್ಗದವರು ಹಾಗೂ ಆಶ್ರಮ ನಿವಾಸಿಗಳೆಲ್ಲರೂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಿಬ್ಬಂದಿಯವರಾದ ಶ್ರೀಮತಿ ಸಿಂಧು ವಿ.ಎಂ.ರವರು ಸ್ವಾಗತಿಸಿ, ಸಿಬ್ಬಂದಿಯವರಾದ ಶ್ರೀಮತಿ ದಿನವತಿಯವರು ಕಾರ್ಯಕ್ರಮ ನಿರೂಪಿಸಿದರು.

Related posts

ನಾವೂರು ಗ್ರಾ.ಪಂ. ನಲ್ಲಿ ಗ್ರಾಮ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮ

Suddi Udaya

ಅ.23 ಶ್ರೀ ಮಹಾಗಣಪತಿ ದಂತ ಚಿಕಿತ್ಸಾಲಯ ಸ್ಥಳಾಂತರಗೊಂಡು ಶುಭಾರಂಭ

Suddi Udaya

ಉಡುಪಿ ಜಿಲ್ಲಾ ಸಮಾವೇಶ 2024 ಮತ್ತು 26ನೇ ಉಚಿತ ವೈದ್ಯಕೀಯ ತಪಾಸಣೆ ಮಾಹಿತಿ ಹಾಗೂ ಜಾಗೃತಿ ಶಿಬಿರ

Suddi Udaya

ರಾಜ್ಯ ಮಟ್ಟದ ಫಾಸ್ಟ್ ಫೈವ್ ಪುರುಷರ ಹಾಗೂ ಮಹಿಳೆಯರ ನೆಟ್‌ಬಾಲ್ ಚಾಂಪಿಯನ್‌ಶಿಪ್‌: ಉಜಿರೆಯ ಎಸ್.ಡಿ.ಎಂ ವಿದ್ಯಾರ್ಥಿಗಳಿಗೆ ಅವಳಿ ಚಾಂಪಿಯನ್ಸ್ ಪ್ರಶಸ್ತಿ

Suddi Udaya

ಮೇ 21: ಉಜಿರೆ ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್ ಮತ್ತು ರೆಡಿಮೇಡ್ಸ್‌ನಲ್ಲಿ ಮಾನ್ಸೂನ್ ಸೇಲ್ : ಪ್ರತಿ ಖರೀದಿಯ ಮೇಲೆ ಶೇ.50 ರಷ್ಟು ಡಿಸ್ಕೌಂಟ್

Suddi Udaya

ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಬೆಂಗಳೂರು ರಾಜೀವ ಗಾಂಧಿ ವಿಶ್ವವಿದ್ಯಾಲಯ ಕುಲಪತಿ ಡಾ. ಭಗವಾನ್ ಬಿ.ಸಿ ಭೇಟಿ

Suddi Udaya
error: Content is protected !!