ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ , ಬೆಳ್ತಂಗಡಿ ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಬೆಳ್ತಂಗಡಿ ತಾಲೂಕು ಇದರ ಆಶ್ರಯದಲ್ಲಿ ‘ಶೌರ್ಯ’ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಕಾರ್ಯಕ್ರಮದ ಸಹಯೋಗದಲ್ಲಿ
“ಗಾಂಧಿ ಸ್ಮೃತಿ ಹಾಗೂ ನವಜೀವನ ಸಮಿತಿ ಸದಸ್ಯರ ಸಮಾವೇಶ’ ಅ.2 ಗಾಂಧಿ ಜಯಂತಿಯಂದು ಬೆಳ್ತಂಗಡಿ ಎಸ್ ಡಿ ಎಂ ಸಭಾಭವನದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಬೆಳ್ತಂಗಡಿ ಜನಜಾಗೃತಿ ವೇದಿಕೆ ಟ್ರಸ್ಟ್ ಅಧ್ಯಕ್ಷ ಕಾಸಿಂ ಮಲ್ಲಿಗೆ ಮನೆ ವಹಿಸಿದ್ದರು. ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧಮ೯ದಶಿ೯ ಹರೀಶ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ಶುಭ ಹಾರೈಸಿದರು. ಅಲ್ ಅನ್ಸಾರ್ ವಾರ ಪತ್ರಿಕೆಯ ಪ್ರಧಾನ ಸಂಪಾದಕ ಮತ್ತು ಧಮ೯ಗುರು ಕೆ.ಎಂ.ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಬೆಳ್ತಂಗಡಿ ಹೋಲಿ ರೆಡಿಮರ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಗುರು ವಂ.ಸ್ವಾಮಿಕ್ಸಿಫರ್ಡ್ ಪಿಂಟೋ ದಿವ್ಯ ಸಂದೇಶ ನೀಡಿದರು.
ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಸ್ಥಾಪಕಾಧ್ಯಕ್ಷ ಕೆ. ವಸಂತ ಸಾಲ್ಯಾನ್, ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಅಧ್ಯಕ್ಷ ಪದ್ಮನಾಭ ಶೆಟ್ಟಿ , ಧರ್ಮಸ್ಥಳ ಶ್ರೀಕ್ಷೇ.ಧ.ಗ್ರಾ.ಯೋ. ಬಿ.ಸಿ. ಟ್ರಸ್ಟ್ ವಿಮಾ ವಿಭಾಗ, ಪ್ರಾದೇಶಿಕ ನಿರ್ದೇಶಕರು ವಸಂತ ಸಾಲ್ಯಾನ್, ಶ್ರೀಕ್ಷೇ.ಧ.ಗ್ರಾ.ಯೋ. ಜಿಲ್ಲಾ ನಿರ್ದೇಶಕರು ಮಹಾಬಲ ಕುಲಾಲ್, ಬೆಳ್ತಂಗಡಿ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಕೇಂದ್ರ ಸಮಿತಿ, ಅಧ್ಯಕ್ಷ ಸೀತಾರಾಮ ಆರ್, ಗುರುವಾಯನಕೆರೆ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಕೇಂದ್ರ ಸಮಿತಿ ಅಧ್ಯಕ್ಷ ಸದಾನಂದ ಬಂಗೇರರು ಭಾಗವಹಿಸಿದ್ದರು.
ವೇದಿಕೆಯಲ್ಲಿ ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷರುಗಳಾದ ಪಿ.ಕೆ ರಾಜು ಪೂಜಾರಿ, ತಿಮ್ಮಪ್ಪ ಗೌಡ ಬೆಳಾಲು, ಕಿಶೋರ್ ಹೆಗ್ಡೆ, ಅಡೂರು ವೆಂಕಟ್ರಾವ್, ಶಾರದಾ ಆರ್. ರೈ, ಡಿ.ಎ ರಹಿಮಾನ್ , ವಲಯ ಅಧ್ಯಕ್ಷರುಗಳಾದ ಗಿರೀಶ್ ವೇಣೂರು, ಪುರುಷೋತ್ತಮ್ ಬೆಳ್ತಂಗಡಿ, ನಿತ್ಯಾನಂದ ನಾವರ, ಪ್ರಭಾಕರ ಗೌಡ ಪೊಸಂದೋಡಿ, ಹರೀಶ್ ಕೋಟ್ಯಾನ್ ಗಡಾ೯ಡಿ, ವಸಂತ ಸುವರ್ಣ ಲಾಯಿಲ, ಸುಬ್ರಹ್ಮಣ್ಯ ಪೂಜಾರಿ ಹೊಸಂಗಡಿ, ಪುಷ್ಪ ಆರ್. ಶೆಟ್ಟಿ ಉಜಿರೆ, ನಾರಾಯಣ ಸಾಲ್ಯಾನ್, ಚಂದ್ರಶೇಖರ ಇಂದಬೆಟ್ಟು, ರಾಜೇಶ್ ಎಂ.ಕೆ ಧರ್ಮಸ್ಥಳ, ಪ್ರಮೋದ್ ಜೈನ್ ಬಳಂಜ, ಮೋಹನ್ ಅಂಡಿಂಜೆ, ಸತೀಶ್ ಶೆಟ್ಟಿ ಅರಸಿನಮಕ್ಕಿ, ನಾಮದೇವ ರಾವ್ ಮುಂಡಾಜೆ, ಮೋಹನ್ ಗೌಡ ಕೊಕ್ಕಡ, ರಾಜೇಂದ್ರ ಇಂದ್ರ, ಪ್ರಫುಲ್ ಚಂದ್ರ, ಪದ್ಮನಾಭ ಸಾಲ್ಯಾನ್, ನೇಮಿರಾಜ ಸೇಮಿತಾ, ಯೋಜನಾಧಿಕಾರಿಗಳಾದ ಸುರೇಂದ್ರ ಹಾಗೂ ದಯಾನಂದ ಪೂಜಾರಿ, ಭಜನಾ ಪರಿಷತ್ ಅಧ್ಯಕ್ಷ ಚಂದ್ರಶೇಖರ ಸಾಲಿಯಾನ್ ಉಪಸ್ಥಿತರಿದ್ದರು.
ಮದ್ಯ ಮುಕ್ತರಾದ ನಾರಾಯಣ ಗೌಡ ಅರಸಿನಮಕ್ಕಿ, ವಿಶ್ವನಾಥ್ ಮಡಂತ್ಯಾರು ಅನಿಸಿಕೆ ವ್ಯಕ್ತಪಡಿಸಿದರು. ಜನಮಂಗಲ ಕಾರ್ಯಕ್ರಮದಲ್ಲಿ ಸಲಕರಣೆಗಳನ್ನು ವಿತರಿಸಲಾಯಿತು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಂದ ಸುಶ್ರಾವ್ಯ ಗಾಂಧಿಸ್ಕೃತಿ ಜರುಗಿತು.ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಸ್ವಾಗತಿಸಿದರು. ಕೃಷಿ ನಿರ್ದೇಶಕ ರಾಮ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಯೋಜನಾಧಿಕಾರಿ ಸುರೇಂದ್ರ ಅವರು ಧನ್ಯವಾದ ವಿತ್ತರು.