September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಮುಂಡಾಜೆ ಪಿಯು ಕಾಲೇಜಿನ ಎನ್ನೆಸ್ಸೆಸ್ ವಿದ್ಯಾರ್ಥಿಗಳಿಂದ ರಸ್ತೆ ದುರಸ್ತಿ

ಸಂಚಾರಕ್ಕೆ ತೀವ್ರ ಸಮಸ್ಯೆ ತಂದೊಡ್ಡಿದ್ದ ರಸ್ತೆಯನ್ನು ಎನ್ನೆಸ್ಸೆಸ್ ವಿದ್ಯಾರ್ಥಿಗಳು ದುರಸ್ತಿಗೊಳಿಸಿ ತಾತ್ಕಾಲಿಕ ಸಂಚಾರಕ್ಕೆ ಸಹಕರಿಸಿದ್ದಾರೆ.
ನೆರಿಯ ಗ್ರಾಮದ ಬಯಲು- ಬಸ್ತಿ- ಪೆರಿಯಡ್ಕ ಮೂಲಕ ಧರ್ಮಸ್ಥಳಕ್ಕೆ ಸಾಗುವ ಡಾಮಾರು ರಸ್ತೆ ತೀರಾ ಹದಗೆಟ್ಟು ಸಂಚಾರಕ್ಕೆ ಸಮಸ್ಯೆ ಎದುರಾಗಿತ್ತು.


ಮುಂಡಾಜೆ ಪಿಯು ಕಾಲೇಜಿನ ಎನ್ನೆಸ್ಸೆಸ್ ಘಟಕದ ವಿದ್ಯಾರ್ಥಿಗಳು ನೆರಿಯದಲ್ಲಿ ನಡೆಯುತ್ತಿರುವ ವಾರ್ಷಿಕ ಶಿಬಿರದ ಒಂದು ದಿನ ಈ ರಸ್ತೆಗೆ ಸುಮಾರು 20 ಲೋಡ್ ಚರಲ್ ಹಾಕುವ ಮೂಲಕ ರಸ್ತೆಯ ನಾಲ್ಕು ಕಿಮೀ ಪ್ರದೇಶವನ್ನು ದುರಸ್ತಿಗೊಳಿಸಿ ಸುಗಮ ವಾಹನ ಸಂಚಾರಕ್ಕೆ ಅಣಿಗೊಳಿಸಿದ್ದಾರೆ. ಇದಕ್ಕೆ ಊರವರು ಸಹಕಾರ ನೀಡಿದರು.


ಪ್ರಮುಖರಾದ ಸೋಮನಾಥ ಗೌಡ ಮಾಕಳ, ರಾಘವ ಗೌಡ ಕುಡುಮಡ್ಕ, ವೆಂಕಟರಮಣ ಗೌಡ ಕೆಮ್ಮಟೆ ಇವರ ಮುಂದಾಳತ್ವದಲ್ಲಿ ಪುಷ್ಪಾಕರ, ಸಂತೋಷ, ಯಶ್ವಿನ್, ಪವನ್, ದಯಾಕರ ಗೌಡ ಮತ್ತಿತರರು ಸಹಕರಿಸಿದರು.

Related posts

ಅಗ್ರಿಲೀಫ್ ಸಂಸ್ಥೆಯಲ್ಲಿ ಐಡಿಯಾಥಾನ್ ವಾರಾಚರಣೆ

Suddi Udaya

ಕುಂಟಿನಿ ಅಲ್-ಬುಖಾರಿ ಜುಮಾ ಮಸ್ಜಿದ್‌ನಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಭರತನಾಟ್ಯ ವಿಧ್ವತ್ ಪೂರ್ವ ಪರೀಕ್ಷೆಯಲ್ಲಿ ಗುರುವಾಯನಕೆರೆಯ ಕು. ರಕ್ಷಾ ಶೆಣೈರವರಿಗೆ ಉತ್ತಮ ಶ್ರೇಣಿ

Suddi Udaya

ಮಡಂತ್ಯಾರು ಜೆಸಿ ಸಪ್ತಾಹ: ಡಾ‌. ಡಿ. ವೀರೇಂದ್ರ ಹೆಗ್ಗಡೆಯವರಿಂದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಸ್ವಾತಂತ್ರ್ಯೋತ್ಸವ ಪ್ರಯುಕ್ತ ಎಸ್‌ವೈಎಸ್ ಉಜಿರೆ ಸರ್ಕಲ್ ವತಿಯಿಂದ ಎಂಡೋ ಪೀಡಿತರಿಗೆ ಆಹಾರದ ಕಿಟ್ ವಿತರಣೆ

Suddi Udaya

ಶಿಶಿಲ ಸೀಮಾ ಚಿತ್ತಪಾವನ ಸಮಾಜ ಸಂಘದ ವಾಷಿ೯ಕೋತ್ಸವ ಹಾಗೂ ವೇದ ಕುಸುಮ ಶಿಬಿರ ಉದ್ಘಾಟನೆ

Suddi Udaya
error: Content is protected !!