ಉಪ್ಪಿನಂಗಡಿ: ಇಲ್ಲಿಯ ಸಮೀಪದ ಕರಾಯದಲ್ಲಿ ಮತ ಬೌತಿಕ ಸಮನ್ವಯ ಶಿಕ್ಷಣ ಸಂಸ್ಥೆಯಾದ ಪ್ರತಿಷ್ಠಿತ ಅಲ್ ಬರ್ರ್ ಶಾಲೆಯಲ್ಲಿ ಮೀಲಾದ್ ಪ್ರಯುಕ್ತ ಇಶ್ಕೇ ರಸೂಲ್ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳಿಂದ ಆಕರ್ಷಕ ಕಲಾ ಪ್ರದರ್ಶನ, ವಿವಿಧ ರೀತಿಯ ಸ್ಪರ್ಧೆ ಗಳು, ಪ್ಲವರ್ ಶೋ, ಮೌಲಿದ್ ಮಜ್ಲಿಸ್ ನಡೆಯಿತು.
ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಹಬೀಬು ರ್ರಹ್ಮಾನ್ ತಂಙಳ್ ಕಲ್ಲೇರಿ ದುಹಾ ಮೂಲಕ ನೆರವೇರಿಸಿದರು.
ಮುಖ್ಯ ಭಾಷಣಗೈದ ಎಸ್ ಬಿ ದಾರಿಮಿ ಮಾತನಾಡಿ ಅಲ್ ಬಿರ್ರ್ ಶಾಲೆಯು ಮುಂದೆ ಬೃಹತ್ ಶಿಕ್ಷಣ ಸಂಸ್ಥೆಯಾಗಿ ಬೆಳೆಯುವುದರಲ್ಲಿ ಅನುಮಾನವಿಲ್ಲ. ಎಲ್ಲಾ ಕ್ಷೇತ್ರದಲ್ಲೂ ದೈನಂದಿನ ಬದಲಾವಣೆಗಳು ಆಗುತ್ತಿರುವಾಗ ಕಾಲದ ಕರೆಗೆ ಓಗೊಟ್ಟು ಮೂಲ ಧರ್ಮದ ಆಶಯಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಬದಲಾವಣೆಗಳನ್ನು ಅಳವಡಿಸಿಕೊಳ್ಳದಿದ್ದರೆ ಸಮುದಾಯ ಹಿಂದುಳಿಯ ಬೇಕಾಗುತ್ತದೆ ಎಂದರು.
ಸಯ್ಯಿದ್ ಅನಸ್ ತಂಙಳ್, ಕರ್ವೇಲು ಸಯ್ಯಿದ್, ಹಬೀಬುರ್ರಹ್ಮಾನ್ ತಙಳ್, ಇಸ್ಮಾಯಿಲ್ ತಙಳ್ ಉಪ್ಪಿನಂಗಡಿ ,
ಶಿಹಾಬುದ್ದೀನ್ ತಙಳ್, ಖಾಸಿಂ ಮದನಿ ಕರಾಯ, ಸಿದ್ದೀಕ್ ಫೈಝೀ, ಅಝೀಝ್ ಫೈಝೀ, ಯಾಕೂಬ್ ಫೈಝಿ, ಅಬ್ದುಲ್ ಜಬ್ಬಾರ್ ಅಸ್ಲಮಿ, ಇಲ್ಯಾಸ್ ಅರ್ಷದಿ ಆತೂರು, ಅಬ್ದುಲ್ ನಾಸಿರ್ ಅನ್ಸಾರಿ, ಇಲ್ಯಾಸ್ ದಾರಿಮಿ, ಅಶ್ರಫ್ ಹನೀಫಿ, ಜಬ್ಬಾರ್ ಅಶ್ಶಾಫಿ, ಸೇಕುಞಿ ಕಡಂಬಿಲ, ಮುಹಮ್ಮದ್ ಕೋಟ್ರಸ್, ಅಬ್ದುಲ್ಲಾ ಕೆ.ಎಂ, ಅಶ್ರಫ್ ಕೊಲ್ಲೆಜಾಲು, ಯು.ಟಿ ಫಯಾಜ್ ಉಪ್ಪಿನಂಗಡಿ, ಯೂಸುಫ್ ಹಾಜಿ ಫೆಧಮಲೆ, ಯಾಕೂಬ್ ಹುಸೈನ್ ಅಗ್ನಾಡಿ, ಕಾಸಿಂ ಕೊರಿಂಜ, ಶರೀಫ್ ಮಾಸ್ಟರ್, ಅಬ್ಬಾಸ್ ಹಾಜಿ ಮುರಿಯಾಲ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ವಿದ್ಯಾರ್ಥಿಗಳ ಮೀಲಾದ್ ಪ್ರಯುಕ್ತ ನಡೆದ ಸ್ಪರ್ಧಾ ಕಾರ್ಯಕ್ರಮವನ್ನು ಮುಖ್ಯ ಶಿಕ್ಷಕಿ ನಪ್ಸೀರಾ ಹಾಗೂ ಸಹಶಿಕ್ಷಕಿ ಯರಾದ
ಫಾತಿಮಾ ಜಂಶೀರಾ, ಹಬೀಬಾ ಸುನೈನಾ, ಉಮ್ಮುಲ್ ಖೈರ್ ಆಮಿನಾ, ಮೈಮೂನಾ ಮಿಶ್ರಿಯಾ ಆಯಿಷಾ, ರಂಶೀನಾ, ನಡೆಸಿಕೊಟ್ಟರು.
ಮಹಮ್ಮದ್ ಅಶ್ರಫ್ ಉರುವಾಲುಪದವು ಅಧ್ಯಕ್ಷತೆ ವಹಿಸಿದ್ದರು . ಅಬ್ದುಲ್ ಶುಕೂರ್ ದಾರಿಮಿ ಸ್ವಾಗತಿಸಿದರು.