March 7, 2026
ಧಾರ್ಮಿಕ

ಹತ್ಯಡ್ಕ ಅಂಬರಕಾಪು ಶ್ರೀ ವಿಠೋಬ ರಕುಮಾಯಿ ನೂತನ ದೇವಾಲಯಕ್ಕೆ ಶಿಲಾನ್ಯಾಸ

ಬೆಳ್ತಂಗಡಿ ತಾಲೂಕು ಹತ್ಯಡ್ಕ ಗ್ರಾಮದ ನೆಕ್ಕರಡ್ಕದ ಅಂಬರಕಾಪು ಶ್ರೀ ವಿಠೋಬ ರಕುಮಾಯಿ ಸನ್ನಿಧಿಯಲ್ಲಿ ನೂತನ ದೇಗುಲಕ್ಕೆ ಸೋಮವಾರ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.

ನೆಕ್ಕರಡ್ಕದಲ್ಲಿ ನೆಲೆಸಿರುವ ಗೋಖಲೆ- ಹೆಬ್ಬಾರ್ ವಂಶಸ್ಥರು ಸುಮಾರು 300 ವರ್ಷಗಳ ಹಿಂದೆ ಈ ದೇವಸ್ಥಾನವನ್ನು ಸ್ಥಾಪಿಸಿ, ಇಂದಿನವರೆಗೂ ಆ ವಂಶಸ್ಥರು ಪೂಜಾ ಕೈಂಕರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಇದೀಗ ದೇವಸ್ಥಾನವು ಜೀರ್ಣಾವಸ್ಥೆಗೆ ತಲುಪಿದ್ದು ಜೀರ್ಣೋದ್ಧಾರ ಕಾರ್ಯಗಳು ಪ್ರಾರಂಭಗೊಂಡಿವೆ. ಜೀರ್ಣೋದ್ಧಾರದ ಮೊದಲ ಹಂತವಾಗಿ ಇಂದು ವೇದಮೂರ್ತಿ ಸತ್ಯ ಭಟ್ ಬಜಗೋಳಿ ಅವರ ನೇತೃತ್ವದಲ್ಲಿ ಶಿಲಾನ್ಯಾಸ ನೆರವೇರಿತು.

ಬೆಳ್ತಂಗಡಿ ತಾಲೂಕು ಚಿತ್ಪಾವನ ಬ್ರಾಹ್ಮಣ ಸಂಘದ ಅಧ್ಯಕ್ಷ ತ್ರಿವಿಕ್ರಮ ಹೆಬ್ಬಾರ್ ಕೇಳ್ಕರ್, ನಿವೃತ್ತ ಶಿಕ್ಷಕ ಗೋವಿಂದ ದಾಮಲೆ, ಉಜಿರೆ ಸಂಪೂರ್ಣ ಟೆಕ್ಸ್ ಟೈಲ್ಸ್ ಮಾಲೀಕ ಅನಿಲ್ ಕುಮಾರ್, ಕಳೆಂಜ ಶ್ರೀಸದಾಶಿವೇಶ್ವರ ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ಕಾಯಡ ಶ್ರೀಧರ ರಾವ್, ಅರಸಿನಮಕ್ಕಿ ಗ್ರಾ.ಪಂ. ಉಪಾಧ್ಯಕ್ಷ ಸುಧೀರ್ ಕುಮಾರ್, ಸ್ಥಳೀಯ ಮುಖಂಡರಾದ ಅಡ್ಕಾಡಿ ಧರ್ಮರಾಜ ಗೌಡ, ತಾ.ಪಂ. ಮಾಜಿ ಸದಸ್ಯ ವಾಮನ ತಾಮ್ಹನ್ಕರ್, ಗೋಖಲೆ-ಹೆಬ್ಬಾರ್ ಕುಟುಂಬಸ್ಥರು, ಗ್ರಾಮಸ್ಥರು, ಊರ ಪರವೂರ ಮಹನೀಯರು ಉಪಸ್ಥಿತರಿದ್ದರು.

Related posts

ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನೇಪಾಳದ ಬುದ್ಧ ಭಗವಾನ್ ರವರ ಪರಮ ಪವಿತ್ರ ಕ್ಷೇತ್ರವಾದ ಲುಂಬಿನಿ ಮತ್ತು ಕಪಿಲವಸ್ತು ಕ್ಷೇತ್ರಗಳಿಗೆ ಭೇಟಿ

Suddi Udaya

ಮಡಂತ್ಯಾರು: ಪ್ರಶಿಕ್ಷಣ ವರ್ಗ – ಹಿಂದೂ ಸಂಗಮ ಕಾರ್ಯಕ್ರಮ ಆಮಂತ್ರಣ ಪತ್ರ ಬಿಡುಗಡೆ

Suddi Udaya

ವೇಣೂರು: ಶ್ರೀ ದೇವಿ ಆದಿಶಕ್ತಿ ಭಜನಾ ಮಂದಿರ ಜೀರ್ಣೋದ್ದಾರ ಮತ್ತು ಅಭಿವೃದ್ದಿ ಕಾರ್ಯವಿಜ್ಞಾಪನಾ ಪತ್ರ ಬಿಡುಗಡೆ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಇ ಹುಂಡಿ ಉದ್ಘಾಟನೆ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ದೇವಾಲಯದಲ್ಲಿ ಗಣೇಶ ಚತುರ್ಥಿ ದಿನದಂದು ಸೇವಾ ರಶೀದಿಗಳಿಂದ ಒಟ್ಟು ರೂ. 16,62,947 ಹಣ ಸಂಗ್ರಹ : 8000 ಭಕ್ತರಿಂದ ಅನ್ನ ಪ್ರಸಾದ ಸ್ವೀಕಾರ

Suddi Udaya

ಲಾಯಿಲ ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ ವತಿಯಿಂದ ಭಜನಾ ಕಾರ್ಯಕ್ರಮ

Suddi Udaya
error: Content is protected !!