ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಇ ಹುಂಡಿ ಉದ್ಘಾಟನೆ

ಸೌತಡ್ಕ :ಬಯಲು ಆಲಯ ಗಂಟೆ ಗಣಪತಿ ಎಂದೇ ಪ್ರಸಿದ್ಧವಾಗಿರುವ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಜೂ 8 ರಂದು ಕೆನರಾ ಬ್ಯಾಂಕಿನ ಪ್ರಾಯೋಜಕತ್ವದಲ್ಲಿ ಇ ಹುಂಡಿಯನ್ನು ಉದ್ಘಾಟಿಸಿ ಪ್ರಾರಂಭಿಸಲಾಯಿತು.

ದೇವಸ್ಥಾನದ ಇ ಹುಂಡಿಯನ್ನು ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶರತ್ ಕೃಷ್ಣ ಪಡುವೆಟ್ನಾಯರು ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕೆನರಾ ಬ್ಯಾಂಕಿನ ಎಜಿಎಂ ನಂದೀಶ್ ರೆಡ್ಡಿ, ಕೆನರಾ ಬ್ಯಾಂಕಿನ ಕೊಕ್ಕಡ ಶಾಖೆಯ ಪ್ರಬಂಧಕರು ಅಂಕಿತ್ ಸಿಂಗ್, ನೆಲ್ಯಾಡಿ ಕೆನರಾ ಬ್ಯಾಂಕಿನ ಪ್ರಬಂಧಕರು ಬಿಪಿನ್, ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷ ಕೃಷ್ಣ ಭಟ್ ಹಿತ್ತಿಲು, ಕೊಕ್ಕಡ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಕೊಕ್ಕಡ ಗ್ರಾಮ ಪಂಚಾಯತ್ ಅಧ್ಯಕ್ಷ ಯೋಗೀಶ್ ಆಲಂಬಿಲ, ಗ್ರಾಮ ಪಂಚಾಯತ್ ಸದಸ್ಯರಾದ ಪ್ರಭಾಕರ ಗೌಡ ಮಲ್ಲಿಗೆ ಮಜಲು, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪಾಡಿ, ಸದಸ್ಯರಾದ ಪುರಂದರ ಕಡಿರ, ಪ್ರಶಾಂತ ಪೂವಾಜೆ , ವಿಠಲ ಕುರ್ಲೆ, ಶ್ರೀಮತಿ ಯಶೋಧ ಉಮೇಶ ಶಬರಾಡಿ, ಶ್ರೀಮತಿ ಹೇಮಾವತಿ ಶಿವಾನಂದ ಸಂಕೇಶ, ಅರ್ಚಕರಾದ ಸುಬ್ರಹ್ಮಣ್ಯ ತೋಡ್ತಿಲ್ಲಾಯರು, ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾನಂದ ಹೆಗ್ಡೆ, ಕೊರಗಪ್ಪ ಶೆಟ್ಟಿ ಮುಂಡ್ರೆಲು, ದೇವಸ್ಥಾನದ ಸಿಬ್ಬಂದಿಗಳು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು.

ಇಂದಿನಿಂದ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಭಕ್ತಾದಿಗಳು ಕ್ಯೂಆರ್ ಕೋಡ್ ಬಳಸಿ ದೇವರಿಗೆ ಕಾಣಿಕೆಯನ್ನು ಸಮರ್ಪಿಸಬಹುದು.

Related posts

ಪಡ್ಯಾರಬೆಟ್ಟದ ಕೊಡಮಣಿತ್ತಾಯ ಮೂಲ ದೈವಸ್ಥಾನದಲ್ಲಿ ಆಟಿ ಕೋಲ

Suddi Udaya

ಜ.25: ಕುವೆಟ್ಟು ಮಹಮ್ಮಾಯಿ ದೇವಿಯ ಮಾರಿಪೂಜೆ ಹಾಗೂ ಗುಳಿಗ ದೈವಕ್ಕೆ ನೇಮೋತ್ಸವ

Suddi Udaya

ಓಡಿಲ್ನಾಳ ಸ. ಉ. ಪ್ರಾ. ಶಾಲೆಯಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನೆ, ಪೋಷಕರ ಸಭೆ

Suddi Udaya

ರಬ್ಬರ್ ಟ್ಯಾಪಿಂಗ್ ಕಾರ್ಮಿಕ ಸ್ವತಃ ಮೈಮೇಲೆ ವಿದ್ಯುತ್ ಹರಿಸಿ ಆತ್ಮಹತ್ಯೆ

Suddi Udaya

ಬೆಳ್ತಂಗಡಿ: ದ.ಕ ಜಿಲ್ಲಾ ನಾಯಕರ ಉಪಸ್ಥಿತಿಯಲ್ಲಿ ಎಸ್‌ಡಿಪಿಐ ಕುವೆಟ್ಟು ಬ್ಲಾಕ್ ಸಮಾಗಮ

Suddi Udaya

‍ಚಂದ್ರಯಾನ -3 ಯಶಸ್ಸಿನಲ್ಲಿ ಹಿರಿಯ ವಿಜ್ಞಾನಿ ಧರ್ಮಸ್ಥಳದ ಪಿ. ವಾಸುದೇವ ರಾವ್ ಸೇವೆ

Suddi Udaya
error: Content is protected !!