23.3 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಡ: ರಸ್ತೆಯ ನದಿಗೆ ನಿರ್ಮಿಸಲಾದ ವೆಂಟೆಡ್ ಡ್ಯಾಮ್ ನ ರಿಟೆನಿಂಗ್ ವಾಲ್ನ ಮೇಲೆ ನಿರ್ಮಿಸಲಾಗಿದ್ದ ಕಾಂಪೌಂಡ್ ಕುಸಿತ

ನಡ ಗ್ರಾಮದ ಅಜಯನಗರ ಅಣ್ಣಪ್ಪ ಕೋಡಿ ರಸ್ತೆಯ ನದಿಗೆ ನಿರ್ಮಿಸಲಾದ ಬಸರಾಯ ವೆಂಟೆಡ್ ಡ್ಯಾಮ್ ನ ರಿಟೆನಿಂಗ್ ವಾಲ್ನ ಮೇಲೆ ಕಾನೂನು ಬಾಹಿರವಾಗಿ ನಿರ್ಮಿಸಲಾಗಿದ್ದ ಕಾಂಪೌಂಡ್ ಅ.13 ರಂದು ಧರಾಶಾಯಿಯಾಗಿದೆ.

ಡ್ಯಾಮ್ ನ ನೀರು ರಸ್ತೆಗೆ ಬಂದಿದ್ದು ಇದರಿಂದ ಕಾಂಪೌಂಡ್ ಕುಸಿದು ಬಿದ್ದಿದ್ದೆ ಎನ್ನಲಾಗಿದೆ. ನಿರ್ಮಾಣದ ಸಂದರ್ಭದಲ್ಲಿ ಜಾಗದ ಮಾಲೀಕರಲ್ಲಿ ಹಲವಾರು ಬಾರಿ ಹೇಳಿದರೂ ಅದನ್ನು ಲೆಕ್ಕಿಸದೆ ಕಾಂಪೌಂಡ್ ನಿರ್ಮಾಣವಾಗಿದೆ. ನಡ ಗ್ರಾಮ ಪಂಚಾಯಿತಿಗೆ ದೂರು ಕೊಟ್ಟರೂ ಅವರಿಂದಲೂ ಮನವಿಗೆ ಯಾವುದೇ ಸ್ಪಂದನೆ ಇಲ್ಲದಾಯಿತು. ಜನಸಾಮಾನ್ಯರಿಗೆ ನಡೆದು ಹೋಗುವ ದಾರಿ ಮೇಲೆ ಕಾಂಪೌಂಡು ಕುಸಿದು ಬಿದ್ದಿದೆ ತಕ್ಷಣವೇ ಗ್ರಾಮಸ್ಥರಿಗೆ ಸಂಪರ್ಕ ರಸ್ತೆಯನ್ನು ಸರಿಪಡಿಸಿ ಕೊಡುವಂತೆ ಹಾಗೂ ವೆಂಟೆಡ್ ಡ್ಯಾಮ್ ನಲ್ಲಿ ಸಿಲುಕಿಕೊಂಡ ಬೃಹದಾಕಾರದ ಮರಗಳನ್ನು ತೆರೆವುಗೊಳಿಸಬೇಕಾಗಿ ಶೌರ್ಯ ವಿಪತ್ತು ತಂಡ ಹಾಗೂ ಗ್ರಾಮ ಪಂಚಾಯತ್ ನಡ ಇವರಲ್ಲಿ ಗ್ರಾಮಸ್ಥರು ವಿನಂತಿಸಿದ್ದಾರೆ.

Related posts

ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆ ಕೆರೆಗೆ ಹಾರಿ ಆತ್ಮಹತ್ಯೆ

Suddi Udaya

ಮದ್ದಡ್ಕತಾಯಿ ಪಿಲಿ ಚಾಮುಂಡಿ ದೈವದ ವರ್ಷವಾದಿ ನೇವೋತ್ಸವ

Suddi Udaya

ನಾಲ್ಕೂರು ನಿವಾಸಿ ಬಾಬು ನಿಧನ

Suddi Udaya

ಉಡುಪಿ:ಐದನೇ ರಾಷ್ಟ್ರೀಯ ಮಟ್ಟದ ಆಹ್ವಾನಿತ ಕರಾಟೆ ಚಾಂಪಿಯನ್ ಶಿಪ್

Suddi Udaya

ಬಿಜೆಪಿ ರಾಜ್ಯ ಯುವಮೋರ್ಚಾ ಘಟಕದ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಶಾಸಕ ಹರೀಶ್ ಪೂಂಜ ಭಾಗಿ

Suddi Udaya

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸಂಘದ ವಾರ್ಷಿಕ ಮಹಾಸಭೆ

Suddi Udaya
error: Content is protected !!