ಅರಸಿನಮಕ್ಕಿ: ಅರಿಕೆಗುಡ್ಡೆ ಶ್ರೀ ವನದುರ್ಗ ಕ್ಷೇತ್ರದಲ್ಲಿ ನವರಾತ್ರಿ ಉತ್ಸವವು ಬಹಳ ವಿಜೃಂಭಣೆಯಿಂದ ಅ.3ರಿಂದ ಅ.12 ರವರೆಗೆ ಜರಗಿತ್ತು.
ಅ.12 ರಂದು ಬೆಳಿಗ್ಗೆ ವಾಹನ ಪೂಜೆ, ಅಕ್ಷರಾಭ್ಯಾಸ, ಮಧ್ಯಾಹ್ನ ಮಹಾ ಪೂಜೆ, ಪ್ರಸಾದ ವಿತರಣೆ ನಡೆಯಿತು.
ರಾತ್ರಿ ನವದುರ್ಗ ಭಜನಾ ಮಂಡಳಿಯವರಿಂದ ಕುಣಿತ ಭಜನೆ, ಹಾಗೂ ದೇವರಿಗೆ ರಂಗಪೂಜೆ, ಮಹಾಪೂಜೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅರಿಕೆಗುಡ್ಡೆ ಶ್ರೀ ವನದುರ್ಗ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಟಿ ಪಿಲಿಕಬೆ ರವರು ನವರಾತ್ರಿ ಸಂದರ್ಭದಲ್ಲಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ವ್ಯಕ್ತಪಡಿಸಿದರು. ಅಲ್ಲದೆ ಕ್ಷೇತ್ರದಲ್ಲಿ ನಿರ್ಮಾಣವಾಗುತ್ತಿರುವ ಸಭಾಭವನದ ಕೆಲಸವು ಮುಂದಿನ ಜಾತ್ರೆಯ ಒಳಗಾಗಿ ಪೂರ್ಣಗೊಳ್ಳಬೇಕಾಗಿದ್ದು ತಾವೆಲ್ಲರು ಸಹಕರಿಸಬೇಕೆಂದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ಪದ್ಮಯ್ಯ ಬಾರಿಗ, ಅರಸಿನಮಕ್ಕಿ ಶ್ರೀರಂಗ ದಾಮ್ಲೆ, ಮುರುಳಿಧರ ಶೆಟ್ಟಿಗಾರ್, ಕೇಶವ ರಾವ್ ನೆಕ್ಕಿಲು, ಅರ್ಚಕರಾದ ಉಲ್ಲಾಸ್ ಭಟ್, ಶ್ರೀರಮಣ ಭಟ್ ಪಿಲಿಕ್ಕಬೆ, ಲಕ್ಷ್ಮೀ ಪಿಲಿಕ್ಕಬೆ ಹಾಗೂ ಗ್ರಾಮಸ್ಥರು, ಭಕ್ತಾದಿಗಳು ಉಪಸ್ಥಿತರಿದ್ದರು.