September 6, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿರಾಜಕೀಯರಾಜ್ಯ ಸುದ್ದಿವರದಿ

ಸುಹಾಸ್ ಶೆಟ್ಟಿ ಪ್ರಕರಣದೊಂದಿಗೆ ಉಳಿದ ಮೂರು ಕೊಲೆ ಪ್ರಕರಣಗಳನ್ನು ಎನ್.ಐ.ಎ (NIA) ಗೆ ಯಾಕೆ ನೀಡಿಲ್ಲ?: ಹರೀಶ್ ಕುಮಾರ್ ಪ್ರಶ್ನೆ

ಮಂಗಳೂರು: ದಕ್ಷಿಣ ಕನ್ನಡದಲ್ಲಿ ನಡೆದ ನಾಲ್ಕು ಕೊಲೆ ಪ್ರಕರಣಗಳಲ್ಲಿ, ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಮಾತ್ರ ಎನ್.ಐ.ಎ(NIA) ನೀಡಲಾಗಿದ್ದು, ಉಳಿದ ಮೂರು ಪ್ರಕರಣಗಳನ್ನು ಯಾಕೆ ಎನ್.ಐ.ಎ ಗೆ ನೀಡಿಲ್ಲಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಪ್ರಶ್ನಿಸಿದ್ದಾರೆ.

ಇಲ್ಲಿ ಕೇಂದ್ರ ಸರ್ಕಾರ ಕೊಲೆ ಪ್ರಕರಣದಲ್ಲಿ ತಾರತಮ್ಮ ನೀತಿಯನ್ನು ಅನುಸರಿಸುತ್ತಿದೆ. ರಾಜಕೀಯ ದೃಷ್ಟಿಯಿಂದ ಕೊಲೆ ಪ್ರಕರಣವನ್ನು ನೋಡುತಿದೆ ಹೊರತು, ನಿಜವಾದ ನ್ಯಾಯ ಒದಗಿಸಲು ಕೇಂದ್ರ ಸರಕಾರ ಮುಂದಾಗುತ್ತಿಲ್ಲ ಎಂದು ಹರೀಶ್ ಕುಮಾರ್ ಅಪಾದಿಸಿದ್ದಾರೆ.

ಕೊಲೆಯಾದವರಿಗೆ ನಿಜವಾದ ನ್ಯಾಯ ದೊರಕಿಸಬೇಕಾದರೆ ಕೇಂದ್ರ ಸರಕಾರ ಈ ತಾರತಮ್ಯದ ನೀತಿಯನ್ನು ಬಿಟ್ಟು ಪ್ರಾಮಾಣಿಕವಾದ ತನಿಖೆಗೆ ಮುಂದಾಗಲಿ ಎಂದು ಅವರು ಆಗ್ರಹಿಸಿದ್ದಾರೆ.

ಕೇವಲ ಒಂದು ಪ್ರಕರಣವನ್ನು ನೀಡುವ ಮೂಲಕ ಕೇಂದ್ರ ಸರಕಾರ ಎಲ್ಲೋ ಜನರಲ್ಲಿ ಸಂಶಯ ಹಾಗೂ ತಪ್ಪು ಅಭಿಪ್ರಾಯವನ್ನು ಮೂಡಿಸುವ ಮೂಲಕ ಸಂವಿಧಾನ ವಿರೋಧಿ ನಡೆಯನ್ನು ಅನುಸರಿಸುತ್ತಿದೆ ಎಂದು ಅವರ ಅಭಿಪ್ರಾಯ ಪಟ್ಟಿದ್ದಾರೆ.

Related posts

ಉಜಿರೆ ಭಜನಾ ಪರಿಷತ್ತಿನ ತಾಲೂಕು ಹಾಗೂ ವಲಯ ಪದಾಧಿಕಾರಿಗಳ ಸಭೆ

Suddi Udaya

ಮಂಜೂಷಾ ವಸ್ತು ಸಂಗ್ರಹಾಲಯವನ್ನು ವಿಶ್ವದಲ್ಲೇ ಅತಿದೊಡ್ಡ ಏಕ ವ್ಯಕ್ತಿ ಸಂಗ್ರಹಾಲಯ ಎಂದು ಗುರುತಿಸಿ ಡಾ. ಡಿ ವೀರೇಂದ್ರ ಹೆಗ್ಗಡೆಯವರಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೌರವ

Suddi Udaya

ಕಲ್ಮಂಜ: ಪುರೋಹಿತ ಶ್ರೀಕಾಂತ ಭಿಡೆ ನಿಧನ

Suddi Udaya

ಪುದುವೆಟ್ಟು ಶ್ರೀ ಧ. ಮಂ. ಅ. ಹಿ. ಪ್ರಾ. ಶಾಲೆಯಲ್ಲಿ ವನಮಹೋತ್ಸವ

Suddi Udaya

ಕಡಿರುದ್ಯಾವರ ಆನೆ ಸಂತ್ರಸ್ತರ ಹೋರಾಟ ಸಮಿತಿಯಿಂದ ಕಾಡಂಚಿನಲ್ಲಿ ಆನೆಕಂದಕ ಮತ್ತು ಸೋಲಾರ್ ವಿದ್ಯುತ್ ಬೇಲಿ ರಚನೆಯ ಬೇಡಿಕೆಗೆ ಮನವಿ

Suddi Udaya

ಬಾರ್ಯ ಗ್ರಾ.ಪಂ. ವ್ಯಾಪ್ತಿಯಲ್ಲಿ ಶಿಕ್ಷಣ ಸಂವಹನ ಕಾರ್ಯಕ್ರಮ

Suddi Udaya
error: Content is protected !!