ಅಳದಂಗಡಿ: ಟೀಂ ಅಭಯಹಸ್ತ ಚ್ಯಾರಿಟೇಬಲ್ ಸ್ಪೋರ್ಟ್ಸ್ ಕ್ಲಬ್ ನಿಂದ ಅರ್ಹರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ

Suddi Udaya

ಅಳದಂಗಡಿ: ಸೇವೆ ಸಂಘಟನೆ ಸಾಮರಸ್ಯದ ಧ್ಯೇಯದೊಂದಿಗೆ ಸೇವೆಗಾಗಿ ಕ್ರೀಡೆ ಎಂಬ ಪರಿಕಲ್ಪನೆಯಡಿ ಕಳೆದ ಏಳು ವರ್ಷಗಳಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಘಟಿಸುತ್ತಿರುವ ಟೀಂ ಅಭಯಹಸ್ತ ಚ್ಯಾರಿಟೇಬಲ್ ಸ್ಪೋರ್ಟ್ಸ್ ಕ್ಲಬ್ ಬೆಳ್ತಂಗಡಿ ಇದರ ಮಾಸಿಕ ಸಭೆಯು ಅ.13 ಸ.ಉ.ಪ್ರಾ ಶಾಲೆ ಬಡಗಕಾರಂದೂರು ಇಲ್ಲಿನ ವಠಾರದಲ್ಲಿ ಜರುಗಿತು.

ಸಂಘಟನೆಯ ಸದಸ್ಯತ್ವ ವಿಸ್ತರಣೆ,ಮುಂಬರುವ ಆವೃತ್ತಿಯ ತಯಾರಿ,ರೂಪುರೇಷೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು ಹಾಗೂ ಸಂಘಟನೆಯ ‘ಸ್ವಾವಲಂಬಿ’ ಮಹಿಳಾ ಸಶಕ್ತೀಕರಣ ಯೋಜನೆಯಡಿ ಅರ್ಹರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ ಮಾಡಲಾಯಿತು.

ಸಂಘಟನೆಯ ಪ್ರಧಾನ ಸಂಚಾಲಕ ಸಂದೀಪ್ ಎಸ್ ನೀರಲ್ಕೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.

ಅಳದಂಗಡಿ ಶ್ರೀ ಮಹಾಗಣಪತಿ ದೇವಸ್ಥಾನದ ಅರ್ಚಕರಾದ ಪ್ರವೀಣ್ ಮಯ್ಯ ಹಾಗೂ ಸಂಘಟನೆಯ ಸಲಹೆಗಾರರಾದ ಇಸಾಕ್ ರವರು ಹೊಲಿಗೆ ಯಂತ್ರ ವಿತರಿಸಿ ಶುಭ ಹಾರೈಸಿದರು. ಸಭೆಯಲ್ಲಿ ಸಲಹೆಗಾರರಾದ ಉಮೇಶ್ ಸುವರ್ಣ,ಜಯ ಪೂಜಾರಿ,ಅತುಲ್ ಕಾರಂತ್, ಶ್ರೀನಾಥ್ ಶೆಟ್ಟಿ,ಅವಿನಾಶ್,ಪ್ರಧಾನ ಕಾರ್ಯದರ್ಶಿ ರಕ್ಷಿತ್ ಎಬಿ,ಕೋಶಾಧಿಕಾರಿ ವಿಶ್ವನಾಥ್ ಕಾಶಿಪಟ್ನ,ಕ್ರೀಡಾ ಸಂಯೋಜಕ ಜಯಾನಂದ ಎ,ಸದಸ್ಯರಾದ ಅಭಿಷೇಕ್ ನೀರಲ್ಕೆ,ಇರ್ಷಾದ್,ಸಚಿನ್,ಯಕ್ಷಿತ್,ಪ್ರಶಾಂತ್ ಭಂಡಾರಿ,ಮಹಮ್ಮದ್ ಶರೀಫ್,ಶರತ್ ಬಿಕ್ಕಿರ,ಉಮೇಶ್ ದೇವಾಡಿಗ ಉಪಸ್ಥಿತರಿದ್ದರು.

Leave a Comment

error: Content is protected !!