April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಅ.23, 26 ರಂದು ಬಳಂಜ ಶಾಲೆಯಲ್ಲಿ ವಲಯ ಹಾಗೂ ತಾಲೂಕು ಮಟ್ಟದ ಕ್ರೀಡಾಕೂಟ

ಬಳಂಜ:ಅಮೃತ ಮಹೋತ್ಸವದ ಹೊಸ್ತಿಲಲ್ಲಿರುವ ಬಳಂಜ ಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ತಾಲೂಕು ಮಟ್ಟದ ಕ್ರೀಡಾ ಕೂಟ, ಸಂಘಟನಾ ಸಮಿತಿ ಬಳಂಜ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವರಿ ಸಮಿತಿ, ಶಿಕ್ಷಣ ಟ್ರಸ್ಟ್ ಅಮೃತ ಮಹೋತ್ಸವ ಸಮಿತಿ, ಹಳೆವಿದ್ಯಾರ್ಥಿ ಸಂಘ , ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ವಲಯ ಹಾಗೂ ತಾಲೂಕು ಮಟ್ಟದ ಕ್ರೀಡಾ ಕೂಟ ಅ. 23,26 ರಂದು ನಡೆಯಲಿದೆ.

ಆ ಪ್ರಯುಕ್ತ ಶಾಲೆಯಲ್ಲಿ ಪೂರ್ವಾಬಾವಿಯಾಗಿ ಸಭೆಯನ್ನು ಕರೆದು ಚರ್ಚಿಸಲಾಯಿತು.ಸಭೆಯಲ್ಲಿ ಕ್ರೀಡಾಕುಯಟದ ಯಶಸ್ವಿಗೆ ಸಮಿತಿ ರಚಿಸಲಾಯಿತು.ಕ್ರೀಡಾ ಸಮಿತಿ ಗೌರವಾಧ್ಯಕ್ಷರಾಗಿ ಕೆ.ವಸಂತ ಸಾಲಿಯಾನ್, ಅಧ್ಯಕ್ಷರಾಗಿ ಬಿ ಪ್ರಮೋದ್ ಕುಮಾರ್, ಉಪಾಧ್ಯಕ್ಷರಾಗಿ ಸತೀಶ್ ದೇವಾಡಿಗ,ಕೋಶಾಧಿಕಾರಿಯಾಗಿ ಸುರೇಶ್ ಹೇವ,ಕಾರ್ಯದರ್ಶಿಗಳಾಗಿ ಶಾಲಾ ಮುಖ್ಯೋಪಾಧ್ಯಾಯರುಗಳನ್ನು ಆಯ್ಕೆಗೊಳಿಸಲಾಯಿತು.

ಸಭೆಯಲ್ಲಿ ಶಾಲಾಭಿವೃದ್ದಿ ಸಮಿತಿ,ಶಿಕ್ಷಣ ಟ್ರಸ್ಟ್,ಅಮೃತ ಮಹೋತ್ಸವ ಸಮಿತಿ,ಹಳೆ ವಿದ್ಯಾರ್ಥಿ ಸಂಘ, ಅದ್ಯಾಪಕ ವೃಂದ, ದೈಹಿಕ‌‌ ಶಿಕ್ಷಣ ಶಿಕ್ಷಕರು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts

ನಾವೂರು: ಕುಂಬಾರ ಸ್ವಜಾತಿ ಬಾಂಧವರ ಮುಕ್ತ ಕಬಡ್ಡಿ ಪಂದ್ಯಾಟ

Suddi Udaya

ನಿಡ್ಲೆ : ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ಪಲ್ಟಿ

Suddi Udaya

ಕಕ್ಕಿಂಜೆ: ಕತ್ತರಿಗುಡ್ಡೆ ನಿವಾಸಿ ಉಮರ್ ನಿಧನ

Suddi Udaya

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಅಮಾನವೀಯ ದಾಳಿಯನ್ನು ಖಂಡಿಸಿ ಧರ್ಮಪ್ರೇಮಿಗಳು ಮತ್ತು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಮೌನ ಪ್ರತಿಭಟನೆ

Suddi Udaya

ರಾಷ್ಟ್ರಮಟ್ಟದ ಅಬಕಾಸ್ ಚಾಂಪಿಯನ್ ಶಿಪ್ ಸ್ಪರ್ಧೆ: ಅರ್ಹನ್ ಬೈಗ್ ಮತ್ತು ಅರ್ಮನ್ ಬೈಗ್ ದ್ವಿತೀಯ ಚಾಂಪಿಯನ್

Suddi Udaya

ಕುವೆಟ್ಟು ಗ್ರಾಮ ಪಂಚಾಯತ್ ವಿಶೇಷ ಚೇತನರ ವಿಶೇಷ ಗ್ರಾಮ ಸಭೆ

Suddi Udaya
error: Content is protected !!