ಮೊಗ್ರು : ಯುವವೇದಿಕೆ ಮುಗೇರಡ್ಕ ಮೊಗ್ರು ಇದರ ವತಿಯಿಂದ ಪ್ರತಿ ವರ್ಷದಂತೆ ಆಯುಧ ಪೂಜೆ ಹಾಗೂ ವಾಹನ ಪೂಜೆಯು ಮುದ್ಯ ಶ್ರೀ ಕೃಷ್ಣಪ್ರಸಾದ್ ಉಡುಪ ಇವರ ನೇತೃತ್ವದಲ್ಲಿ ಅ.12 ರಂದು ಬಹಳ ಯಶಸ್ವಿಯಾಗಿ ನೆರವೇರಿತು. ಈ ಸಂದರ್ಭದಲ್ಲಿ ಮುಗೇರಡ್ಕ ಸರಕಾರಿ ಶಾಲಾ ಸೇವಾ ಟ್ರಸ್ಟ್ ಇದಕ್ಕೆ ಟ್ರಸ್ಟಿಯಾಗಿ ಮೊದಲ ಸೇವಾರೂಪದಲ್ಲಿ ರೂ. 12000/- ಮೊತ್ತದ ಚೆಕ್ ನ್ನು ಅಧ್ಯಕ್ಷ ಪ್ರವೀಣ್ ಗೌಡ ಮತ್ತಿಲ್ಲಾರು ಹಾಗೂ ಸಂಘದ ಪದಾಧಿಕಾರಿಗಳ ಮೂಲಕ ಟ್ರಸ್ಟ್ ನ ಅಧ್ಯಕ್ಷ ಕುಶಾಲಪ್ಪ ಗೌಡ ಹಾಗೂ ಟ್ರಸ್ಟಿಗಳ ಉಪಸ್ಥಿತಿಯಲ್ಲಿ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟಿಗಳಾದ ಬಾಬು ಗೌಡ ಶ್ರೀ ಸಂಪತ್ತು ನಿಲಯ ಮುಗೇರಡ್ಕ, ಅಶ್ವಥ್ ಗೌಡ ಜಾಲ್ನಾಡೆ, ಹಾಗೂ ಸಿ.ಎ ಬ್ಯಾಂಕ್ ಪದ್ಮುಂಜ ಇದರ ನಿರ್ದೇಶಕಿ ಶ್ರೀಮತಿ ಶೀಲಾವತಿ ಶ್ರೀಸಂಪತ್ತು ಮುಗೇರಡ್ಕ, ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ಶೀನಪ್ಪ ಗೌಡ ನೆಕ್ಕರಾಜೆ ಉಪಸ್ಥಿತರಿದ್ದರು.
ಕುಶಾಲಪ್ಪ ಗೌಡ ನೆಕ್ಕರಾಜೆ ಪ್ರಾಸ್ತವಿಕವಾಗಿ ಮಾತನಾಡಿ ನೇತ್ರಾವತಿ ನದಿ ಕಿನಾರೆಯಲ್ಲಿ ತರಕಾರಿ ಕೃಷಿಯನ್ನು ಮಾಡಿ ಕೊರೋನ ಸಮಯದಲ್ಲಿ ಮನೆ ಮನೆಗೆ ಭೇಟಿ ನೀಡಿ ಅಗತ್ಯ ಸಾಮಾಗ್ರಿಗಳನ್ನ ತಲುಪಿಸಿದಕ್ಕೆ ಮೆಚ್ಚುಗೆಯ ಮಾತನ್ನಾಡಿದರು. ಈ ಸಂದರ್ಭದಲ್ಲಿ ಹಿರಿಯರಾದ ಹೊನ್ನಪ್ಪ ಗೌಡ ದಂಬೆತ್ತಿಮಾರು, ಕೃಷ್ಣಪ್ಪ ಗೌಡ ನೈಮಾರು, ಧರ್ನಪ್ಪ ಗೌಡ ನೈನಾರು ಹಾಗೂ ಯುವವೇದಿಕೆಯ ಉಪಾಧ್ಯಕ್ಷರಾದ ವಿಜಯ ಕುಮಾರ್ ದಂಬೆತ್ತಿಮಾರು, ಕಾರ್ಯದರ್ಶಿ ಮಾಧವ ಪೂಜಾರಿ ಮುಗೇರಡ್ಕ, ಕೋಶಾಧಿಕಾರಿ ಅಶ್ವಥ್ ಗೌಡ ಜಾಲ್ನಡೆ, ಸರ್ವ ಸದಸ್ಯರು/ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ದಿಕ್ಷಿತ್ ಎನ್ ಡಿ ನೈಮಾರು ಸ್ವಾಗತಿಸಿ, ವಸಂತ ಗೌಡ ದಂಬೆತ್ತಿಮಾರ್ ವಂದಿಸಿದರು. ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದರು.