30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ: ವಿಶೇಷ ವಿಕಲಚೇತನರ ಗುರುತಿನ ಚೀಟಿ ನವೀಕರಣ ಮತ್ತು ಹೊಸ ಗುರುತಿಸುವಿಕೆಯ ಶಿಬಿರ

ಬೆಳ್ತಂಗಡಿ : ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲೂಕಿನ ವಿಕಲಚೇತನ ಗುರುತಿನ ಚೀಟಿಯ ನವೀಕರಣ ಹಾಗೂ ಹೊಸ ವಿಕಲಚೇತನರ ಗುರುತಿಸುವ ಪ್ರಕ್ರಿಯೆಯನ್ನು ತಾಲೂಕು ಆಸ್ಪತ್ರೆ ಬೆಳ್ತಂಗಡಿಯಲ್ಲಿ ನಡೆಸಲಾಯಿತು..

ಶಿಬಿರವನ್ನು ತಾಲೂಕು ವಿಕಲಚೇತನರ ಮೇಲ್ವಿಚಾರಕರು (MRW ) ಆದ ಜೋನ್ ಬ್ಯಾಪಿಸ್ಟ್ ರವರ ಮಾರ್ಗದರ್ಶನದಲ್ಲಿ ನಡೆಸಲಾಯಿತು ಹಾಗೂ ಈ ಶಿಬಿರವನ್ನು ಇನ್ನಷ್ಟು ಅರ್ಥಪೂರ್ಣವಾಗಿ ನಡೆಸಿಕೊಳ್ಳಲು ತಾಲೂಕಿನ ನಗರ ಪುನರ್ವಸತಿ ಕಾರ್ಯಕರ್ತರು ನಗರ ಪಂಚಾಯತ್ ಬೆಳ್ತಂಗಡಿ, ಹಾಗೂ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯತ್ ಗಳ ಗ್ರಾಮೀಣ ಪೂರ್ವಸತಿ ಕಾರ್ಯಕರ್ತರ ಸಹಕಾರದೊಂದಿಗೆ, ತಾಲೂಕಿನ ಅನೇಕ ವಿಕಲಚೇತನರಿಗೆ ಗುರುತಿನ ಚೀಟಿ ನೀಡಲಾಯಿತು.

ಜಿಲ್ಲಾ ಆಸ್ಪತ್ರೆಯಾದ ವೆನ್ಲಾಕ್ ಆಸ್ಪತ್ರೆಯ ವೈದ್ಯಕೀಯ ಮಂಡಳಿಯ ವೈದ್ಯರ ಮೂಲಕ ಹಾಗೂ ಸಿಬ್ಬಂದಿ ವರ್ಗದವರ ಉಪಸ್ಥಿತಿಯಲ್ಲಿ ತಾಲೂಕಿನ ಅನೇಕ ಬುದ್ಧಿಮಾಂದ್ಯ ಮತ್ತು ಮಾನಸಿಕ ವಿಕಲಚೇತನರಿಗೆ ಗುರುತಿನ ಚೀಟಿ ನೀಡಿ ಅವರಿಗೆ ಸಿಗಬೇಕಾದ ಸರ್ಕಾರ ಸೌಲಭ್ಯ ಯೋಜನೆಗಳನ್ನು ಪಡೆದುಕೊಳ್ಳಲು ಸಹಕಾರ ಆಗಲು ಯಶಸ್ವಿಯಾಗುವ ಮೂಲಕ ತಾಲ್ಲೂಕಿನ ವಿಕಲಚೇತನರಿಗೆ ಅನುಕೂಲ ಮಾಡಿಕೊಡಲಾಯಿತು.

Related posts

ಉಜಿರೆ- ಬೆಳ್ತಂಗಡಿ ಟಿಬಿ ಕ್ರಾಸ್ ನಲ್ಲಿ ಮಹಾಗಣಪತಿ ಗ್ರಾನೈಟ್ಸ್ & ಟೈಲ್ಸ್ ಶುಭಾರಂಭ

Suddi Udaya

ಕೊಕ್ಕಡ ಹಳ್ಳಿಂಗೇರಿ ಎರಡು ಮನೆಗಳಿಗೆ ಮರ ಬಿದ್ದು ಹಾನಿ: ಅಪಾರ ನಷ್ಟ

Suddi Udaya

ಉಜಿರೆಯ ಶ್ರೀ ಧ. ಮಂ. ಕಾಲೇಜಿನ ಪ್ರಾಧ್ಯಾಪಕ ಸುವೀರ್ ಜೈನ್ ಅವರಿಗೆ ಪಿಎಚ್. ಡಿ. ಪದವಿ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬದ ಸಂಭ್ರಮ

Suddi Udaya

ಕಲ್ಮಂಜ: ಬೈಕ್ ಹಾಗೂ ಕಾರು ಡಿಕ್ಕಿ: ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಪುದುವೆಟ್ಟು ಶ್ರೀ.ಧ.ಮಂ ಅ.ಹಿ.ಪ್ರಾ. ಶಾಲೆಯಲ್ಲಿ ಯಕ್ಷಗಾನ  ಮತ್ತು ನೃತ್ಯ ತರಗತಿಗಳ ಉದ್ಘಾಟನೆ

Suddi Udaya
error: Content is protected !!