25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ಡಿ. ಕೆ.ಆರ್.ಡಿ.ಎಸ್ – ಮಾಸಿಕ ಬೆಂಬಲ ಸಭೆ ಹಾಗೂ ಮಾಹಿತಿ ಕಾರ್ಯಕ್ರಮ

ಬೆಳ್ತಂಗಡಿ : ಡಿ.ಕೆ.ಆರ್.ಡಿ.ಎಸ್ ಬೆಳ್ತಂಗಡಿ, ನವಜೀವನ ಆರೈಕೆ ಮತ್ತು ಬೆಂಬಲ ಕೇಂದ್ರದ ನೇತೃತ್ವದಲ್ಲಿ ಅ.19 ರಂದು ಹೆಚ್.ಐ.ವಿ/ಏಡ್ಸ್ ಸೋಂಕಿತ ಹಾಗೂ ಬಾಧಿತ ವ್ಯಕ್ತಿಗಳ ಮಾಸಿಕ ಬೆಂಬಲ ಸಭೆ ಮತ್ತು ಮಾಹಿತಿ ಕಾರ್ಯಕ್ರಮವು ಬೆಳ್ತಂಗಡಿ, ಸಾಂತೋಮ್ ಟವರ್ ನಲ್ಲಿ ಆಯೋಜಿಸಲಾಗಿತ್ತು.

ಬಂಗಾಡಿ ಮರಿಯಾಂಬಿಕಾ ಚರ್ಚ್ ನ ಧರ್ಮಗುರುಗಳಾದ ವಂದನೀಯ ಫಾ| ಸೆಬಾಸ್ಟಿಯನ್ ಚೆಲಕ್ಕಪಳ್ಳಿ ಆಗಮಿಸಿ ಯಾವುದೇ ಸರ್ಕಾರದ ಅನುದಾನವಿಲ್ಲದೆ ಈ ಕಾರ್ಯಕ್ರಮ ನಡೆಯುತ್ತಿರುವುದು ಶ್ಲಾಘನೀಯ, ಇಂತಹ ಕಾರ್ಯಕ್ರಮಕ್ಕೆ ನಾವೆಲ್ಲರೂ ಕೈಜೋಡಿಸೋಣ ಎಂದು ಮಾತನಾಡಿ, ಪೌಷ್ಟಿಕ ಆಹಾರದ ಕಿಟ್ ವಿತರಿಸಿದರು.


ಕಾಂಚಾಲ್ ಅರ್ಚನಾ ಸ್ವಸಹಾಯ ಸಂಘದ ಅಧ್ಯಕ್ಷೆ ಶ್ರೀಮತಿ ಏಲಿಯ ಜೋಸ್ ಹಾಗೂ ಸಂಘದ ಸದಸ್ಯರ ನೇತೃತ್ವದಲ್ಲಿ ಪೌಷ್ಟಿಕ ಆಹಾರದ ಕಿಟ್ ವಿತರಿಸಿ, ರೂ. 10,000/- ವನ್ನು ನವಜೀವನ ಆರೈಕೆ ಹಾಗೂ ಬೆಂಬಲ ಕಾರ್ಯಕ್ರಮಕ್ಕೆ ನೀಡಿದರು.
ಅರ್ಚನಾ ಸ್ವಸಹಾಯ ಸಂಘದ ಸದಸ್ಯೆ ಶ್ರೀಮತಿ ಜಾನೆಟ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಪುಷ್ಪಾರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾ. ಬಿನೋಯಿ ಎ.ಜೆ.ರವರು “ದೇವಾಲಯಕ್ಕೆ ಹೋದರೆ ಕಣ್ಣು ಮುಚ್ಚಿ ನಿಲ್ಲಬೇಕು ಗ್ರಂಥಾಲಯಕ್ಕೆ ಹೋದರೆ ಕಣ್ಣು ತೆರೆದು ನಿಲ್ಲಬೇಕು” ಎಂದು ತಿಳಿಸುತ್ತ ಕಾರ್ಯಕ್ರಮದ ಮೂಲಕ ಉತ್ತಮ ಅರಿವನ್ನು ಪಡೆದು ಮುನ್ನಡೆಯೋಣ ಎನ್ನುತ್ತಾ ಪ್ರಾಸ್ತವಿಕ ನುಡಿಯನ್ನು ಆಡಿದರು.

ನವ ಜೀವನ ಬೆಂಬಲ ಕಾರ್ಯಕ್ರಮದ ಸದಸ್ಯೆ ಶ್ರೀಮತಿ ಪುಷ್ಪ ರವರು ಪ್ರಾರ್ಥನೆ ಹಾಡಿದರು. ಡಿ.ಕೆ.ಆರ್.ಡಿ ಎಸ್. ಸಂಸ್ಥೆಯ ಸoಯೋಜಕಿ ಕು. ಶ್ರೇಯಾ ಸ್ವಾಗತಿಸಿದರು. ಕಾರ್ಯಕರ್ತರು ಜೋನ್ಸನ್ ವಂದಿಸಿದರು. ಕಾರ್ಯಕರ್ತರು ಮಾರ್ಕ್ ಡಿ ಸೋಜರವರು ಕಾರ್ಯಕ್ರಮ ನಿರೂಪಿಸಿದರು.

Related posts

ಬೆಳ್ತಂಗಡಿ: ನೇಣು ಬಿಗಿದು ಮಹಿಳೆ ಆತ್ಮಹತ್ಯೆ

Suddi Udaya

ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲ ಮೂಲ್ಕಿ ಇದರ ಬೆಳ್ಳಿಹಬ್ಬ ಸಂಭ್ರಮ

Suddi Udaya

ಇಂದಬೆಟ್ಟು ಗ್ರಾ.ಪಂ. ನಲ್ಲಿ ಮಹಿಳಾ ಹಾಗೂ ಮಕ್ಕಳ ಗ್ರಾಮ ಸಭೆ

Suddi Udaya

ತೆಂಕುಬೈಲು ಪಿಲಿಚಾಮುಂಡಿ ದೈವ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ದೈವಗಳ ಪತ್ತನಾಜೆ ನೇಮೋತ್ಸವ

Suddi Udaya

8 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ್ದ ಬೆಳ್ತಂಗಡಿ ಪೊಲೀಸರು

Suddi Udaya

ಕುಂಟಿನಿ ಅಲ್ ಬುಖಾರಿ ಜುಮಾ ಮಸೀದಿಯಲ್ಲಿ ಈದುಲ್ ಫಿತ್ರ್ ಆಚರಣೆ

Suddi Udaya
error: Content is protected !!