ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶ ಕಾರ್ಯಕ್ರಮವು ಅ. 19ರಂದು ಬೆಳ್ತಂಗಡಿ ಧರ್ಮಸ್ಥಳ ಮಂಜುನಾಥ ಭವನದಲ್ಲಿ ನಡೆಯಿತು.
ಬಿಸಿ ವಿಭಾಗದ ನಿರ್ದೇಶಕ ಪ್ರವೀಣ್ ಕುಮಾರ್ ಎಮ್.ಸಿ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೇಶದ ಆರ್ಥಿಕ, ಸಾಮಾಜಿಕ ಅಭಿವೃದ್ಧಿಗೆ ಬೇಕಾದಂತಹ ಕಾರ್ಯಕ್ರಮಗಳನ್ನು ಒಂದೇ ಸೂರಿನೆಡೆಗೆ ತಂದಂತಹ ಸಂಸ್ಥೆ. ಜನ ಸಂಘಟಿತವಾದರೆ ಆರ್ಥಿಕ, ಸಾಮಾಜಿಕವಾಗಿ ಹಾಗೂ ಎಲ್ಲಾ ರೀತಿಯಲ್ಲೂ ಅಭಿವೃದ್ಧಿ ಹೊಂದಲು ಸಾಧ್ಯ. ಗ್ರಾಮಾಭಿವೃದ್ಧಿ ಮೈಕ್ರೋ ಫೈನಾನ್ಸ್ ಅಲ್ಲ. ಗ್ರಾಮಾಭಿವೃದ್ಧಿ ಜನರಿಗೆ ಸಾಲ ಪಡೆದುಕೊಳ್ಳುವಂತಹ ಅರ್ಹತೆಯನ್ನು ಕಲ್ಪಿಸಿಕೊಡುತ್ತದೆ. ಗ್ರಾಮಾಭಿವೃದ್ಧಿ ಯೋಜನೆ ಸ್ವ ಸಹಾಯ ಸಂಘಗಳ ವ್ಯವಸ್ಥೆ ದೇಶಕ್ಕೆ ಮಾದರಿ ಎಂದು ಹೇಳಿದರು.
ವೇದಿಕೆಯಲ್ಲಿ ಬೆಳ್ತಂಗಡಿ ಎಸ್ ಬಿ ಐ ಬ್ಯಾಂಕ್ ನ ಮುಖ್ಯ ವ್ಯವಸ್ಥಾಪಕ ಪದ್ಮನಾಭ ನಾಯ್ಕ್, ಕೇಂದ್ರ ಒಕ್ಕೂಟದ ಅಧ್ಯಕ್ಷ ಸೀತಾರಾಮ್ , ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ಜಿಲ್ಲಾ ಎಂ.ಐ.ಎಸ್ ಯೋಜನಾಧಿಕಾರಿ ಪ್ರೇಮನಾಥ, ವಲಯ ಅಧ್ಯಕ್ಷರಾದ ಸೇಸಪ್ಪ ಮೂಲ್ಯ, ರಾಜೇಶ್ , ಉಮಾರ್, ಅಬ್ದುಲ್ ರಝಕ್, ವಿಜಯ್, ಸತೀಶ್, ಚಂದ್ರಶೇಖರ್, ಸೀತಾರಾಮ್ ಉಪಸ್ಥಿತರಿದ್ದರು.
ತಾಲೂಕು ಯೋಜನಾಧಿಕಾರಿ ಸುರೇಂದ್ರ ಕುಮಾರ್ ಸ್ವಾಗತಿಸಿದರು. ಬೆಳ್ತಂಗಡಿ ಕೃಷಿ ಅಧಿಕಾರಿ ರಾಮ್ ಕುಮಾರ್ ನಿರೂಪಿಸಿದರು. ಶ್ರೀಮತಿ ಮಧುರಾ ಪ್ರಾರ್ಥಿಸಿ, ಧನ್ಯವಾದವಿತ್ತರು.