April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಜೂನಿಯರ್ ಅಥ್ಲೆಟಿಕ್ಸ್ ರಿಲೇ ರೇಸ್: ಕಲ್ಲೇರಿಯ ಯತಿನ್ ನಾಯ್ಕ್ ರಿಗೆ ಚಿನ್ನದ ಪದಕ

ಬೆಳ್ತಂಗಡಿ: ಆಂಧ್ರಪ್ರದೇಶದ ಗುಂಟೂರಿನಲ್ಲಿ ಇತ್ತೀಚೆಗೆ ನಡೆದ 35ನೇ ದಕ್ಷಿಣ ವಲಯದ ಜೂನಿಯರ್ ಅಥ್ಲೆಟಿಕ್ಸ್ ನ 4×100 ಮೀಟರ್ ರಿಲೇ ರೇಸ್ ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಉಡುಪಿ ಕ್ರೀಡಾ ಹಾಸ್ಟೆಲ್ ನ ಅಥ್ಲೀಟ್ಗಳಾದ. ಯತಿನ್ ನಾಯ್ಕ್, ಸನತ್ ಆಚಾರ್ಯ, ಪ್ರಜ್ವಲ್, ಎಮ್.ಡಿ ಕೋಸ್ಟ ಇವರ ರಿಲೇ ತಂಡ ಪ್ರಥಮ ಸ್ಥಾನಗಳಿಸಿ ಚಿನ್ನದ ಪದಕವನ್ನು ಪಡೆಯುವುದರ ಜೊತೆಗೆ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.

ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್ ಸ್ಪರ್ಧೆಗೆ ಆಯ್ಕೆಯಾಗಿರುವ ರಿಲೇ ತಂಡದ ಸದಸ್ಯನಾದ ಯತಿನ್ ನಾಯ್ಕ್ ಇವರು ಬೆಳ್ತಂಗಡಿ ತಾಲೂಕು ಕಲ್ಲೇರಿ ಗ್ರಾಮದ ಶ್ರೀಮತಿ ರೇವತಿ ಮತ್ತು ಧರ್ಮಣ್ಣ ನಾಯ್ಕ್ ದಂಪತಿಯ ಪುತ್ರನಾಗಿದ್ದು ಪ್ರಸ್ತುತ ಉಡುಪಿಯಲ್ಲಿ ಪದವಿ ವ್ಯಾಸಂಗ ನಿರತನಾಗಿದ್ದು ಈ ಹಿಂದೆಯೂ ಪ್ರಾಥಮಿಕ, ಹಾಗೂ ಪ್ರೌಢಶಾಲಾ ಹಂತದಲ್ಲಿ ಒಟ್ಟು ಮೂರು ಬಾರಿ 100 ಮೀಟರ್ ಓಟ ಹಾಗೂ 4*100 ಮೀಟರ್ ರಿಲೇಯಲ್ಲಿ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದರು.

Related posts

ಉಜಿರೆ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದಿಂದ ಬೆಂಕಿ ರಹಿತ ಪೌಷ್ಟಿಕ ಆಹಾರ ತಯಾರಿ ಸ್ಪರ್ಧೆ

Suddi Udaya

ದೇಶ ಕಂಡ ಅತ್ಯುತ್ತಮ ಸಂದೀಯ ಪಟು, ಹಿರಿಯ ರಾಜಕಾರಣಿ ಎಸ್.ಎಂ.ಕೃಷ್ಣ ಅವರ ಅಗಲಿಕೆ ರಾಜಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ: ರಕ್ಷಿತ್ ಶಿವರಾಮ್

Suddi Udaya

ಬೆಳ್ತಂಗಡಿ: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಗೂಡ್ಸ್ ಟೆಂಪೋ

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ವಿದ್ಯಾ ಸಂಸ್ಥೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವ

Suddi Udaya

ರೆಖ್ಯದಲ್ಲಿ ಕಾಂಗ್ರೆಸ್ ಬೂತ್ ಮಟ್ಟದ ಸಭೆ

Suddi Udaya

ವಾಣಿ ಕಾಲೇಜು: ಅಕ್ಷರವಾಣಿ ಭಿತ್ತಿಪತ್ರಿಕೆ ಅನಾವರಣ

Suddi Udaya
error: Content is protected !!