23.3 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಸುಲ್ಕೇರಿಮೊಗ್ರು ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಯುವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ವತಿಯಿಂದ ಗುರುಪೂಜೆ, ದೀಕ್ಷಾ ಗ್ರಂಥಿದಾರಣೆ, ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ

ಸುಲ್ಕೇರಿಮೊಗ್ರು: ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಸುಲ್ಕೇರಿಮೊಗ್ರು, ಯುವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ಸುಲ್ಕೇರಿಮೊಗ್ರು ಇವುಗಳ ಸಹಭಾಗಿತ್ವದಲ್ಲಿ ಗುರುಪೂಜೆ, ದೀಕ್ಷಾ ಗ್ರಂಥಿದಾರಣೆ, ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಸುಲ್ಕೇರಿಮೊಗ್ರು ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಸಭಾಂಗಣದಲ್ಲಿ ಜರಗಿತು.


ಪೂಜಾ ಕಾರ್ಯಕ್ರಮವು ನಿರಂಜನ್ ಶಾಂತಿ ಕೊಹಿನೂರ್ ಪುರೋಹಿತರ ಬಳಗದಿಂದ ನಡೆಯಿತು.
ಸಭಾ ಕಾರ್ಯಕ್ರಮವು ಸುಲ್ಕೇರಿಮೊಗ್ರು ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸಂಕೇತ್ ಬಂಗೇರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರು ನವೀನ್ ಕುಮಾರ್ ಮರಿಕೆ, ಕಾರ್ಯಕ್ರಮವನ್ನು ಉದ್ಘಾಟಿಸಿದರು.

ವೇದಿಕೆಯಲ್ಲಿ ಪಿತಾಂಬರ ಹೇರಾಜೆ, ಜಯ ವಿಕ್ರಮ ಕಲ್ಲಾಪು, ಎಂ. ಕೆ. ಪ್ರಸಾದ್, ಸದಾಶಿವ ಪೂಜಾರಿ ಊರ, ನವೀನ್ ಸಾಲಿಯಾನ್ ಪಾಲ್ದಿಮನೆ, ಶ್ರೀಮತಿ ಗೀತಾ. ಎಚ್. ಅಮ್ಮಾಜಿ ಹೊಕ್ಕಳ, ಬೇಬಿ ಬಂಗೇರ ಹುಂಬೆದಡ್ಕ, ಗುರುವಪ್ಪ ಪೂಜಾರಿ ಪಟ್ಲ. ಸಂಘದ ಕಾರ್ಯದರ್ಶಿ ವಿಜಯ್ ಕುಮಾರ್, ನಂದನ್ ಕುಮಾರ್, ಕಾರ್ಯದರ್ಶಿ ಸಚ್ಚಿನ್, ಅಧ್ಯಕ್ಷರು ಯುವ ಬಿಲ್ಲವ ವೇದಿಕೆ. ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಶಕುಂತಳ ಕಾರ್ಯದರ್ಶಿ ಮಮತಾ ಉಪಸ್ಥಿತರಿದ್ದರು.
ಗ್ರಾಮದ ಪ್ರತಿಭಾವಂತ ವಿಧ್ಯಾರ್ಥಿಗಳನ್ನು ಗೌರವಿಸಿ ಹಾಗೂ ಗ್ರಾಮದಲ್ಲಿ ವಿಶೇಷ ಸಾಧನೆ ಮಾಡಿದ ಸಮಾಜ ಬಾಂಧವರನ್ನು ಸನ್ಮಾನಿಸಲಾಯಿತು. ವಿಶೇಷವಾಗಿ ದಾನಿಗಳಾದ ಅಮ್ಮಾಜಿ ಕೋಟ್ಯಾನ್ ಇವರನ್ನು ಸನ್ಮಾನಿಸಲಾಯಿತು.

ಧನುಷ್ ಪ್ರಾರ್ಥನೆಯನ್ನು ಮಾಡಿ ಸಂಘದ ಕಾರ್ಯದರ್ಶಿ ವಿಜಯ್ ಕುಮಾರ್ ಸ್ವಾಗತಿಸಿ, ಯುವ ಬಿಲ್ಲವ ವೇದಿಕೆಯ ಅಧ್ಯಕ್ಷ ನಂದನ್ ಕುಮಾರ್ ಧನ್ಯವಾದವನ್ನಿತ್ತರು. ಸೌಮ್ಯ ಕೋಟ್ಯಾನ್ ಮೂಡಬಿದ್ರೆ ಕಾರ್ಯಕ್ರಮ ನಿರೂಪಿಸಿದರು.

Related posts

ಉಜಿರೆ ಗ್ರಾ.ಪಂ. ಗೆ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಭೇಟಿ

Suddi Udaya

ತೆಕ್ಕಾರು: ಸರಳಿಕಟ್ಟೆ ಜಂಕ್ಷನ್ ನಲ್ಲಿ ಮೋರಿ ಕುಸಿತ

Suddi Udaya

ಬೆಳ್ತಂಗಡಿ: ಅರುವ ಕೊರಗಪ್ಪ ಶೆಟ್ಟಿ ಅವರಿಗೆ “ಜಾನಪದ ಶ್ರೀ” ಪ್ರಶಸ್ತಿ

Suddi Udaya

ಮುಂಡಾಜೆ ಹಾ.ಉ. ಸ. ಸಂಘದ ಕಾರ್‍ಯದರ್ಶಿ ದಿ| ಅಶೋಕ್ ಕುಮಾರ್ ರಿಗೆ ಶ್ರದ್ಧಾಂಜಲಿ ಸಭೆ

Suddi Udaya

ಕಳೆಂಜ ಕ್ರಿಶ್ಚಿಯನ್  ಬ್ರದರ್‍ಸ್ ಸಂಘದ ವತಿಯಿಂದ ವೈದ್ಯಕೀಯ ನೆರವು

Suddi Udaya

ತೆಕ್ಕಾರು: ಗಾಂಜಾ ನಶೆಯಲ್ಲಿ ಅನುಚಿತ ವರ್ತನೆ: ಇಬ್ಬರು ಯುವಕರು ಪೊಲೀಸರ ವಶಕ್ಕೆ

Suddi Udaya
error: Content is protected !!