24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಜಿಲ್ಲಾಮಟ್ಟದ ಐಟಿ ಕ್ವಿಜ್‌ ಸ್ಪರ್ಧೆ: ಉಜಿರೆಯ ಎಸ್‌.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ವಿಭಾಗೀಯ ಮಟ್ಟಕ್ಕೆ ಆಯ್ಕೆ

ಉಜಿರೆ : ಮಂಗಳೂರು ಕಪಿತಾನಿಯೋ ಶಾಲೆಯಲ್ಲಿ ನಡೆದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಲಿಮಿಟೆಡ್ ಮತ್ತು ಕರ್ನಾಟಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಡೆದ 25ನೇ ವರ್ಷದ ಜಿಲ್ಲಾಮಟ್ಟದ ಐಟಿ ಕ್ವಿಜ್‌ ಸ್ಪರ್ಧೆಯಲ್ಲಿ ಉಜಿರೆಯ ಎಸ್‌.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆ ರಾಜ್ಯಪಠ್ಯಕ್ರಮದ ಒಂಬತ್ತನೇ ತರಗತಿಯ ಸಚಿತ್ ಭಟ್, ದಿಶಾನ್ ಮತ್ತು ಎಂಟನೇ ತರಗತಿಯ ತನ್ಮಯ ಕೃಷ್ಣ ಭಾಗವಹಿಸಿ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದು ಅ.28 ರಂದು ಮೈಸೂರಿನ ಶಾರದ ವಿಲಾಸ ಶಿಕ್ಷಣ ಸಂಸ್ಥೆಗಳ ಶತಮಾನೋತ್ಸವ ಭವನದಲ್ಲಿ ನಡೆಯಲಿರುವ ವಿಭಾಗೀಯ ಮಟ್ಟದ ಗ್ರಾಮೀಣ ಮಾಹಿತಿ ತಂತ್ರಜ್ಞಾನ ರಸಪ್ರಶ್ನೆ ಕಾರ್ಯಕ್ರಮವಲ್ಲಿ ಭಾಗವಹಿಸಲಿದ್ದಾರೆ.

ಇವರಿಗೆ ಶಾಲಾ ಕಂಪ್ಯೂಟರ್ ಶಿಕ್ಷಕಿ ಸೌಮ್ಯ ರವರು ತರಬೇತಿ ನೀಡಿರುತ್ತಾರೆ. ಇವರನ್ನು ಶಾಲಾ ಮುಖ್ಯೋಪಾಧ್ಯಾಯನಿಯಾದ ವಿದ್ಯಾಲಕ್ಷ್ಮಿ ನಾಯಕ್ ಮತ್ತು ಶಿಕ್ಷಕವೃಂದ ಅಭಿನಂದಿಸಿದರು.

Related posts

ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ವಿವಿಧ ಸಮಸ್ಯೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭಾರತೀಯ ಮಜ್ದೂರ್ ಸಂಘದಿಂದ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಮನವಿ

Suddi Udaya

ಬೆಳ್ತಂಗಡಿ ಖಾಸಗಿ ರಸ್ತೆಗೆ ಅಡ್ಡಲಾಗಿ ಇಟ್ಟ ಕಾರು ಮಹಿಳೆಯಿಂದ ಕಾರು ಮಾಲಿಕನಿಗೆ ಹಿಗ್ಗ ಮುಗ್ಗ ಕ್ಲಾಸ್

Suddi Udaya

ಎಕ್ಸೆಲ್ ಕಾಲೇಜಿನಲ್ಲಿ ಪ.ಪೂ. ವಿಜ್ಞಾನ ವಿಭಾಗದ ಶೈಕ್ಷಣಿಕ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ

Suddi Udaya

ಹತ್ಯಡ್ಕ ಸಹಕಾರಿ ಸಂಘದ ಚುನಾವಣೆ :ಸಹಕಾರ ಭಾರತೀಯ ಅಭ್ಯರ್ಥಿಗಳ ‘ಮಹಾಭಿಯಾನ’ ಪ್ರಚಾರಕ್ಕೆ ಅರುಣ್ ಕುಮಾರ್ ಪುತ್ತಿಲರಿಂದ ಚಾಲನೆ

Suddi Udaya

ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಜಾತ್ರೋತ್ಸವದ ಕಾರ್ಯಾಧ್ಯಕ್ಷರಾಗಿ ಶೈಲೇಂದ್ರ ಸುವರ್ಣ

Suddi Udaya

ಮಾ.10: ವೇಣೂರು 33ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆವಿ ಫೀಡರ್ ಗಳಲ್ಲಿ ವಿದ್ಯುತ್ ನಿಲುಗಡೆ

Suddi Udaya
error: Content is protected !!