ಮಿತ್ತಬಾಗಿಲು: ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ(ಶ್ರೀ ದುರ್ಗಾದೇವಿ) ದೇವಸ್ಥಾನ ಮಿತ್ತ ಬಾಗಿಲು ಮತ್ತು ಕಂಪಾನಿ ಯೋ ನೆಮ್ಮದಿ ವೆಲ್ ನೆಸ್ಸ್ ಸೆಂಟರ್ ಪುತ್ತೂರು ಇದರ ಸಹಯೋಗದಲ್ಲಿ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರವು ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಹದಿನೈದು ದಿನಗಳ ಕಾಲ ನಡೆಯಿತು.
ಕೊನೆಯ ದಿನವಾದ ಸಂಸ್ಥೆಯ ಮುಖ್ಯಸ್ಥ ಹಾಗೂ ಸಿಬಂದಿ ವರ್ಗದವರನ್ನು ಗೌರವಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಸಭಾಧ್ಯಕ್ಷರಾಗಿ ದೇವಾಲಯದ ಆಡಳಿತ ಧಿಕಾರಿಯವರಾದ ಮೋಹನ್ ಬಂಗೇರಾರವರು ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಮಿತ್ತ ಬಾಗಿಲು ಗ್ರಾಮದ ಗ್ರಾಮಕರಣಿ ರಾದ ಸಂತೋಷ್ ಹಾಗೂ ಸ್ಥಳೀಯರಾದ ಮೋಹನ್ ಪೂಜಾರಿ ಕಿಲ್ಲಾರುರವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕಂಪಾನಿಯೋ ಮುಖ್ಯಸ್ಥರಾದ ಪ್ರಭಾಕರ ಸಾಲಿಯಾನ್ ಸಿಬಂದಿಗಳಾದ ಕಾವ್ಯ, ಜ್ಯೋತಿ, ದೀವಾಕರ ಸಾಲಿಯಾನ್ ಇವರುಗಳನ್ನು ಶಾಲು ಹಾಕಿ ಫಲ ಪುಸ್ಪವನ್ನಿತ್ತು ಗೌರವಿಸಲಾಯಿತು. ಶಿಬಿರದಲ್ಲಿ ಮುನ್ನೂರಕ್ಕಿಂತಲೂ ಹೆಚ್ಚು ಶಿಭಿರಾರ್ಥಿಗಳು ಭಾಗವಹಿಸಿದ್ದರು. ಸ್ಥಳೀಯರಾದ ಶ್ರೀಮತಿ ಮಲ್ಲಿಕಾರವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಅತಿಥಿ ಹಾಗೂ ಶಿಭಿರಾರ್ಥಿಗಳನ್ನು ನೇಮಿರಾಜ್ ಕಿಲ್ಲೂರು ಸ್ವಾಗತಿಸಿದರು. ಕೇಶವ ಪಡ್ಕೆಯವರು ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ನೀಡಿದರು.